

ಮುದ್ದೇಬಿಹಾಳ: ಉದ್ಯೋಗ ಖಾತ್ರಿ ಯೋಜನೆಯಡಿ ಮಾಡಿರುವ ಕೆಲಸಕ್ಕೆ ಬಿಲ್, ಸಂಬಳ ಮತ್ತು ಹೊಸದಾಗಿ ಕೆಲಸ ಕೊಡದೆ ಸತಾಯಿಸುತ್ತಿರುವ ಕುಂಟೋಜಿ ಗ್ರಾಪಂ ಪಿಡಿಒ ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗ್ರಾಪಂ ವ್ಯಾಪ್ತಿಯ ಅಬ್ಯಾಳ ಗ್ರಾಮದ ಮಹಿಳೆಯರು ಸೋಮವಾರ ಇಲ್ಲಿನ ತಾಪಂ ಸಹಾಯಕ ನಿರ್ದೇಶಕ ಖೂಬಾಸಿಂಗ್ ಜಾಧವ ಅವರಿಗೆ ಮನವಿ ಸಲ್ಲಿಸಿದರು. ಎಲ್ಲ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸದಿದ್ದರೆ ತಾಪಂ ಕಚೇರಿ ಎದುರು ಧರಣಿ ನಡೆಸುವುದಾಗಿ ಮನವಿಯಲ್ಲಿ ಎಚ್ಚರಿಸಿದ್ದಾರೆ. ರಜಿಯಾ ನದಾ, ಭೀಮಾಬಾಯಿ ಹತ್ತೂರ, ಗೌರಮ್ಮ ದೊಡಮನಿ, ಮರಿಯಮ್ಮ ಚಲವಾದಿ, ಗೌರಮ್ಮ ನಾಯ್ಕೋಡಿ, ರೇಣುಕಾ ಏಳೂರ, ಯಲ್ಲಮ್ಮ ಕೋಳದ ಇತರರಿದ್ದರು.