

ಮುದ್ದೇಬಿಹಾಳ: ಪಟ್ಟಣದ ಕೋರ್ಟ್ ಆವರಣದಲ್ಲಿರುವ ನೋಟರಿ ಕಾರ್ಯಾಲಯದಲ್ಲಿ ಗುರುವಾರ ಕೇಕ್ ಕತ್ತರಿಸಿ, ಸಿಹಿ ತಿನ್ನಿಸುವ ಮೂಲಕ ನೋಟರಿ ದಿನ ಆಚರಿಸಲಾಯಿತು. ರಾಜ್ಯ ನೋಟರಿ ಸಂಘದ ಉಪಾಧ್ಯಕ್ಷ, ಮುದ್ದೇಬಿಹಾಳ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಸ್.ಮಾಲಗತ್ತಿ ಕೇಕ್ ಕತ್ತರಿಸಿ ಸಂಭ್ರಮ ಹಂಚಿಕೊಂಡರು. ನೋಟರಿಗಳಾದ ಆರ್.ಬಿ.ಪಾಟೀಲ, ಎಂ.ಎ.ಮುದ್ದೇಬಿಹಾಳ, ಎಲ್.ಎಸ್.ಮೇಟಿ, ಎಸ್.ಎಚ್.ಲೊಟಗೇರಿ, ಹಿರಿಯ ವಕೀಲರಾದ ಜೆ.ಎ.ಚಿನಿವಾರ, ಎಂ.ಎಚ್.ಹಾಲಣ್ಣವರ, ಬಿ.ಆರ್.ನಾಡಗೌಡರ, ಎಂ.ಎಚ್.ಕ್ವಾರಿ, ಎಸ್.ಬಿ.ಬಾಚಿಹಾಳ, ಬಿ.ಎಸ್.ಬಿದರಕುಂದಿ, ಬಿ.ವೈ.ಮೇಟಿ ಇತರರಿದ್ದರು.