

ಮುದ್ದೇಬಿಹಾಳ: ಪಟ್ಟಣದ ಪೀಲೇಕಮ್ಮ ನಗರದ ಯುವ ಬಳಗದ ವತಿಯಿಂದ ಸೋಮವಾರ ಕರೊನಾ ಜಾಗೃತಿ ಅಭಿಯಾನ ನಡೆಯಿತು. ಕಿರುತೆರೆ ಹಾಸ್ಯ ಕಲಾವಿದ ಗೋಪಾಲ ಹೂಗಾರ ನೇತೃತ್ವದಲ್ಲಿ ಕಲಾವಿದರು ತಿಳಿವಳಿಕೆ ನೀಡಿದರು.
ಪಿಎಸ್‌ಐ ಮಲ್ಲಪ್ಪ ಮಡ್ಡಿ ಮಾತನಾಡಿ, ಇಂತಹ ಜಾಗೃತಿ ಅಭಿಯಾನ ಜನರ ಮನಸ್ಸಿಗೆ ತಕ್ಷಣ ತಲುಪುವ ಜತೆಗೆ ಪರಿಣಾಮಕಾರಿಯಾಗುತ್ತದೆ ಎಂದರು.
ದಾದಾಪೀರ ಹಡಲಗೇರಿ, ಸಂದೀಪ ಹಿರೇಮಠ, ವಿರೇಶ್ ಲಮಾಣಿ, ಪ್ರಶಾಂತ್ ಕುಂದರಗಿ, ಹಾಸ್ಯ ಕಲಾವಿದ ಮುನೀರ ಅವಟಿಗೇರಿ, ಗಣೇಶ ಝಿಂಗಾಡೆ, ಸಮಾಜ ಸೇವಕ ಸೀತಾರಾಂ ರಾಠೋಡ, ಸಂಘಟಕರಾದ ಜಿಲಾನಿ ಮಕಾನದಾರ, ಪವನ ಝಿಂಗಾಡೆ ಇತರರಿದ್ದರು.