ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮನವಿ

MBL 27-5
Published on

ಮುದ್ದೇಬಿಹಾಳ: ವೇತನ ಹೆಚ್ಚಳ, ನಿವೃತ್ತಿ ವೇತನ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಅಕ್ಷರ ದಾಸೋಹ ನೌಕರರ ಸಂಘಟನೆಯಿಂದ ಫೆ.3 ರಂದು ರಾಜ್ಯಾದ್ಯಂತ ಅಡುಗೆ ಮಾಡುವುದನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಅಕ್ಷರ ದಾಸೋಹ ನೌಕರರ ತಾಲೂಕಾಧ್ಯಕ್ಷೆ ಸುವರ್ಣಾ ರಾಠೋಡ ಹೇಳಿದರು.
ಪಟ್ಟಣದ ತಾಪಂ ಕಚೇರಿಯ ಯೋಜನಾ ನಿರ್ದೇಶಕ ಪ್ರಕಾಶ ದೇಸಾಯಿ ಅವರಿಗೆ ಅಕ್ಷರ ದಾಸೋಹ ನೌಕರರ ಸಂಘದಿಂದ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸೋಮವಾರ ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ತಾಪಂ ಯೋಜನಾಧಿಕಾರಿ ಖೂಭಾಸಿಂಗ ಜಾಧವ, ಸಂಘದ ಕಾರ್ಯದರ್ಶಿ ಲಕ್ಷ್ಮೀ ಲಮಾಣಿ, ಉಪಾಧ್ಯಕ್ಷ ಗುಡುಮಾ ಹಲಕಾವಟಗಿ, ಶೈಲಾ ಹಿರೇಮಠ, ಶೋಭಾ ಯರಝರಿ, ರತ್ನಾಬಾಯಿ ಲಮಾಣಿ, ಬಾವುಬಾಯಿ ಲಮಾಣಿ, ಗಿರಿಜಾ ಅಂಗಡಿ, ರಜಿಯಾ ಬೇಗಂ, ಯಲ್ಲವ್ವ ಲಮಾಣಿ, ಮೀನಾಕ್ಷಿ ಕನ್ನೊಳ್ಳಿ, ರೇಣುಕಾ ಆಲೂರ, ಜಿ.ಜಿ. ಕೆಂಧೂಳಿ, ಮಂಜುಳಾ ಯಾಳವಾರ, ಬಸಮ್ಮ ಕೋರಿ, ಎಸ್.ಎಂ. ಮಕಾನದಾರ, ಮಂಜಳಾ ಭಜಂತ್ರಿ, ಜನ್ನತಬಿ ಜಾನ್ವೇಕರ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net