ಸ್ವಾತಂತ್ರೃಕ್ಕಾಗಿ ಬಲಿದಾನಗೈದವರಿಗೆ ಗೌರವ ಸಲ್ಲಿಸಿ

MBL 28-3
Published on

ಮುದ್ದೇಬಿಹಾಳ: ಹಲವಾರು ಕ್ರಾಂತಿಕಾರಿ ಹೋರಾಟಗಾರರ ತ್ಯಾಗದ ಪ್ರತಿಲವಾಗಿ ಭಾರತಕ್ಕೆ ಸ್ವಾತಂತ್ರೃ ಬಂದಿದ್ದು, ಅಂತಹ ಹೋರಾಟಗಾರರಿಗೆ ಗೌರವ ತೋರುವ ಕೆಲಸ ಆಗಬೇಕು ಎಂದು ಎಬಿವಿಪಿ ಮುಖಂಡ ರವೀಂದ್ರ ಬಿರಾದಾರ ಹೇಳಿದರು.
ಪಟ್ಟಣದ ಲಕ್ಷ್ಮಿವೆಂಕಟೇಶ್ವರ ದೇವಸ್ಥಾನ ಬಳಿಯ ಭಗತ್‌ಸಿಂಗ್ ಸರ್ಕಲ್‌ನಲ್ಲಿ ಹಮ್ಮಿಕೊಂಡ ಭಗತ್‌ಸಿಂಗ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ವಾತಂತ್ರ್ಯಕ್ಕಾಗಿ ಮಡಿದವರ ಬಗ್ಗೆ ಗೌರವದಿಂದ ನಡೆದುಕೊಳ್ಳುವಂತೆ ನಾವು ಇಂದಿನ ಪೀಳಿಗೆಗೆ ಮಾರ್ಗದರ್ಶನ ಮಾಡಬೇಕಿದೆ ಎಂದರು.
ವೀರ ಸಾವರ್ಕರ ಸಂಘದ ಅಧ್ಯಕ್ಷ ಪುನೀತ್ ಹಿಪ್ಪರಗಿ, ಪುರಸಭೆ ಮಾಜಿ ಸದಸ್ಯ ರಾಜು ಬಳ್ಳೊಳ್ಳಿ, ಮಹಾಂತೇಶ ಬೂದಿಹಾಳಮಠ, ಸಂತೋಷ ಬಾದರಬಂಡಿ, ಹಣಮಂತ ನಲವಡೆ, ರಾಜಶೇಖರ ಮ್ಯಾಗೇರಿ, ಕಿರಣ ಪಾಟೀಲ, ರಾಜಶೇಖರ ಹೊಳಿ, ಮಂಜುನಾಥ ರತ್ನಾಕರ, ಸಂಜೀವ ಬಾಗೇವಾಡಿ ಮೊದಲಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net