ಗ್ರಾಮ ಪಂಚಾಯಿತಿ ಚುನಾವಣಾ ಅಖಾಡದಲ್ಲಿ ಪಿಎಚ್‌ಡಿ ಪದವೀಧರ!

MBL 19-1
Published on

ಮುದ್ದೇಬಿಹಾಳ: ತಾಲೂಕಿನ ಬಸರಕೋಡ ಗ್ರಾಮ ಪಂಚಾಯಿತಿ ವಾರ್ಡ್ ಸಂಖ್ಯೆ 2ರ ಅಭ್ಯರ್ಥಿಯಾಗಿ ಎಂಎಸ್ಸಿ, ಪಿಎಚ್‌ಡಿ ಪದವೀಧರ ಡಾ. ಅಶೋಕ ಬಸಪ್ಪ ಚಿತ್ತರಗಿ ಅಖಾಡಕ್ಕಿಳಿದಿದ್ದಾರೆ. ಪಂಚಾಯಿತಿಗಳಿಗೆ ಅಕ್ಷರಸ್ಥರು ಅಧಿಕಾರದಲ್ಲಿ ಬರಬೇಕು ಎಂಬ ಆಶಯದಿಂದ ಹಲವು ಪ್ರಭಾವಿಗಳ ಒತ್ತಡಕ್ಕೆ ಮಣಿಯದೇ ತಮ್ಮದೇ ಶೈಲಿಯಲ್ಲಿ ಪ್ರಚಾರ ಆರಂಭಿಸಿದ್ದಾರೆ.

ಮುದ್ದೇಬಿಹಾಳದ ಎಂ.ಜಿ.ವಿ.ಸಿ. ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾ ವಿಶ್ವವಿದ್ಯಾಲಯದಲ್ಲಿ ಪದವಿ ವ್ಯಾಸಂಗ ಮುಗಿಸಿರುವ ಡಾ. ಚಿತ್ತರಗಿ ಅವರು 2016ರಲ್ಲಿ ಎಂ.ಎಸ್ಸಿ, ಪಿಎಚ್‌ಡಿ ವ್ಯಾಸಂಗವನ್ನು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ಮುಗಿಸಿದ್ದಾರೆ. ಉನ್ನತ ವ್ಯಾಸಂಗ ಮುಗಿದ ತಕ್ಷಣ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ (ಬಾಟನಿ) ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಆರು ತಿಂಗಳು ಕಾಲ ಸೇವೆ ಸಲ್ಲಿಸಿದ್ದಾರೆ.

ನಾನು ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿ ಹಿಡಿಯಲು ರಾಜಕೀಯಕ್ಕೆ ಪದಾರ್ಪಣೆ ಇಚ್ಛೆಯನ್ನು ಹೊಂದಿದ್ದು ಮತದಾರರು ಆಶೀರ್ವಾದ ಮಾಡುವ ಭರವಸೆ ಹೊಂದಿದ್ದೇನೆ.

ಡಾ. ಅಶೋಕ ಚಿತ್ತರಗಿ, ಗ್ರಾ.ಪಂ. ಅಭ್ಯರ್ಥಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net