ಖಿಲಾರಹಟ್ಟಿಯ ಶಿವಮಣಿ ಟಗರಿಗೆ ರನ್ನರ್ ಅಪ್ ಪ್ರಶಸ್ತಿ

MBL-27-4
Published on

ಮುದ್ದೇಬಿಹಾಳ: ಕೊಡೇಕಲ್‌ದ ದಿ. ತಿಮ್ಮಮ್ಮಗೌಡಶಾನಿ ಅಭಿಮಾನಿ ಬಳಗ ಹಾಗೂ ಆರ್‌ಟಿಜೆ ಗ್ರೂಪ್ ವತಿಯಿಂದ ಕೊಡೇಕಲ್‌ದ ಯುಕೆಪಿ ಕ್ಯಾಂಪ್‌ನಲ್ಲಿ ನಡೆದ ರಾಜ್ಯಮಟ್ಟದ ಹೊನಲು ಬೆಳಕಿನ ಓಪನ್ ಟಗರಿನ ಕಾಳಗ ಸ್ಪರ್ಧೆಯಲ್ಲಿ ಮುದ್ದೇಬಿಹಾಳ ತಾಲೂಕಿನ ಖಿಲಾರಹಟ್ಟಿಯ ಶಿವಮಣಿ ಟಗರು ದ್ವಿತೀಯ ಸ್ಥಾನ ಪಡೆದುಕೊಂಡು 75,000 ರೂ. ಬಹುಮಾನ ಗಳಿಸಿದೆ.

ಟಗರಿನ ಮಾಲೀಕ ಬಿ.ಎನ್. ಮದರಿ ಹಾಗೂ ಎ.ಎನ್. ಮದರಿ ಅವರು ಕೊಡೇಕಲ್ ಬಿಜೆಪಿ ಮುಖಂಡ ಹನುಮಂತ ನಾಯಕ(ಬಬ್ಲೂಗೌಡ) ಅವರಿಂದ ಪ್ರಶಸ್ತಿ ಸ್ವೀಕರಿಸಿದರು.

ಖಿಲಾರಹಟ್ಟಿಯ ರವಿ ಮೇಟಿ, ಮಲ್ಲು ಖಿಲಾರಹಟ್ಟಿ, ಮಲ್ಲಿಕಾರ್ಜುನ ಹಿರೇಮಠ, ಶ್ರೀಶೈಲ ಕವಡಿಮಟ್ಟಿ, ಮಾಂತು ವಾಲೀಕಾರ, ಸುಭಾಷ, ಸಂತೋಷ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net