ಬಟ್ಟೆ ತೊಳೆಯಲು ಬಾವಿಗಿಳಿದಿದ್ದ ಅಣ್ಣ-ತಮ್ಮ ನೀರಲ್ಲಿ ಮುಳುಗಿ ದುರ್ಮರಣ

Muddebihal
Published on

ಮುದ್ದೇಬಿಹಾಳ, ಆಶ್ರಯ ಕಾಲನಿ ನಿವಾಸಿಗಳು, Muddebhila, residents of the Ashraya colony,

ಮುದ್ದೇಬಿಹಾಳ : ಬಟ್ಟೆ ತೊಳೆಯಲೆಂದು ಹೊಲದಲ್ಲಿದ್ದ ಬಾವಿಗೆ ಇಳಿದಿದ್ದ ಅಣ್ಣ-ತಮ್ಮ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಪಟ್ಟಣದ ಆಶ್ರಯ ಕಾಲನಿಯ ಸಮೀಪದ ಬಾವಿಯಲ್ಲಿ ಸೋಮವಾರ ನಡೆದಿದೆ.
ಪಟ್ಟಣದ ಆಶ್ರಯ ಕಾಲನಿ ನಿವಾಸಿಗಳು, ಸಹೋದರರಾದ ಪ್ರೇಮು ಎಸ್. ಹಡಪದ (14), ಪುನೀತ ಎಸ್. ಹಡಪದ (10) ನೀರಲ್ಲಿ ಮುಳುಗಿ ಸಾವನ್ನಪ್ಪಿದ ಬಾಲಕರು.
ಮನೆಯಲ್ಲಿ ಸಹೋದರಿಯನ್ನು ಬಿಟ್ಟು ತಾವೇ ಬಟ್ಟೆ ತೊಳೆಯಲೆಂದು ನೀರಿಗೆ ಇಳಿದಿದ್ದಾರೆ. ಕಾಲು ಜಾರಿ ನೀರಲ್ಲಿ ಬಿದ್ದು ಮುಳುಗಿದ್ದಾರೆ. ಜನವಸತಿ ಪ್ರದೇಶದಿಂದ ಬಾವಿ ದೂರದಲ್ಲಿರುವ ಕಾರಣ ಮಕ್ಕಳು ಬಾವಿಗೆ ಬಿದ್ದಿರುವುದು ತಕ್ಷಣ ಗೊತ್ತಾಗಿಲ್ಲ. ಬಳಿಕ ಸ್ಥಳೀಯರೊಬ್ಬರು ಬಾವಿಯ ಸಮೀಪದಲ್ಲಿ ನೋಡಿದಾಗ ಮಕ್ಕಳ ಬಟ್ಟೆ ಕಂಡು ಪೊಲೀಸರಿಗೆ ಹಾಗೂ ಅಗ್ನಿಶಾಮಕ ಠಾಣೆಯ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಠಾಣೆ ಅಧಿಕಾರಿ ಪ್ರಮೋದ ಬಿ.ಎಸ್. ನೇತೃತ್ವದ ತಂಡ ಇಬ್ಬರು ಬಾಲಕರ ದೇಹಗಳನ್ನು ಬಾವಿಯಿಂದ ಹೊರತೆಗೆದಿದ್ದಾರೆ. ಅಣ್ಣ ಪ್ರೇಮು ಆಸ್ಪತ್ರೆಯಲ್ಲಿ ಜೀವ ಬಿಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಸಿಪಿಐ ಆನಂದ ವಾಘಮೋಡೆ, ಪಿಎಸೈ ಎಂ.ಬಿ. ಬಿರಾದಾರ ಭೇಟಿ ನೀಡಿದ್ದು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net