ಮುದ್ದಂಡ ಕಪ್ ಹಾಕಿ ಉತ್ಸವ: ಕಂಬೀರಂಡ, ಕೇಚೆಟ್ಟಿರ ತಂಡ ಫೈನಲ್‌ಗೆ ಲಗ್ಗೆ

5 said hocky
Published on

ಮಡಿಕೇರಿ: ಕೊಡವ ಕುಟುಂಬಗಳ ನಡುವಿನ ೨೫ನೇ ವರ್ಷದ ಮುದ್ದಂಡ ಕಪ್ ಹಾಕಿ ಪಂದ್ಯಾಟದ ೫ಎ ಸೈಡ್ ಮಹಿಳಾ ಪಂದ್ಯಾವಳಿಯಲ್ಲಿ ಕಂಬೀರಂಡ ಮತ್ತು ಕೇಚೆಟ್ಟಿರ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಮಡಿಕೇರಿಯ ಫೀ.ಮಾ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನ ೨ರಲ್ಲಿ ಗುರುವಾರ ನಡೆದ ಕ್ವಾಟರ್ ಫೈನಲ್‌ನಲ್ಲಿ ಕಾಂಡಂಡ ಮತ್ತು ಕೇಚೆಟ್ಟಿರ ನಡುವಿನ ಪಂದ್ಯದಲ್ಲಿ ೩-೦ ಗೋಲುಗಳ ಅಂತರದಲ್ಲಿ ಕೇಚೆಟ್ಟಿರ ಜಯ ಸಾಧಿಸಿತು. ಕೇಚೆಟ್ಟಿರ ಪರ ತೇಜಸ್ವಿ ೨ ಹಾಗೂ ಲಕ್ಷ್ಯ ೧ ಗೋಲು ದಾಖಲಿಸಿದರು. ಕುಟ್ಟಂಡ (ಮಾದಾಪುರ) ಮತ್ತು ಕುಪ್ಪಂಡ(ಕೈಕೇರಿ) ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ ೨-೦ ಗೋಲುಗಳ ಅಂತರದಲ್ಲಿ ಕುಪ್ಪಂಡ ತಂಡ ಜಯ ಸಾಧಿಸಿತು.

ಕಂಬೀರಂಡ ಮತ್ತು ಚೆಯ್ಯಂಡ ನಡುವಿನ ಪಂದ್ಯದಲ್ಲಿ ೯-೧ ಗೋಲುಗಳ ಅಂತರದಲ್ಲಿ ಕಂಬೀರಂಡ ಗೆಲುವು ದಾಖಲಿಸಿತು. ಕಂಬೀರಂಡ ಪರ ಮಿಲನಾ ಹಾಗೂ ದಿವ್ಯ ಹ್ಯಾಟ್ರಿಕ್ ಗೋಲು ದಾಖಲಿಸಿದರೆ, ಪೊನ್ನಮ್ಮ ೨ ಮತ್ತು ಕುಸುಮ ೧ ಗೋಲು ಬಾರಿಸಿದರು. ಕಲಿಯಂಡ ಮತ್ತು ಮುಕ್ಕಾಟಿರ (ದೊಡ್ಡಪುಲಿಕೋಟು) ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ ೨-೦ ಗೋಲುಗಳ ಅಂತರದಲ್ಲಿ ಕಲಿಯಂಡ ತಂಡ ಜಯ ಸಾಧಿಸಿತು.

ಸೆಮಿಫೈನಲ್: ಕೇಚೆಟ್ಟೀರ ಮತ್ತು ಕುಪ್ಪಂಡ(ಕೈಕೇರಿ) ನಡುವಿನ ಪಂದ್ಯದಲ್ಲಿ ೫-೦ ಗೋಲುಗಳ ಅಂತರದಲ್ಲಿ ಕೇಚೆಟ್ಟಿರ ಗೆಲುವು ಸಾಧಿಸಿತು. ಕೇಚೆಟ್ಟಿರ ಪರ ತೇಜಸ್ವಿ ಹಾಗೂ ಕೆ.ಎ.ಪಾರ್ವತಿ ಗೋಲು ದಾಖಲಿಸಿದರು. ಕಂಬೀರಂಡ ಮತ್ತು ಕಲಿಯಂಡ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ ೧-೦ ಗೋಲುಗಳ ಅಂತರದಲ್ಲಿ ಕಂಬೀರಂಡ ಜಯ ಸಾಧಿಸಿತು. ಮುದ್ದಂಡ ಹಾಕಿ ಉತ್ಸವದ ೫ಎ ಸೈಡ್ ಮಹಿಳಾ ಫೈನಲ್ ಪಂದ್ಯಾವಳಿಯಲ್ಲಿ ಕಂಬೀರಂಡ ಮತ್ತು ಕೇಚೆಟ್ಟಿರ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿದೆ.

ಇಂದಿನ ಕ್ವಾರ್ಟರ್ ಫೈನಲ್ಸ್: ಬೆಳಿಗ್ಗೆ ೯.೩೦ ಗಂಟೆಗೆ ನೆಲ್ಲಮಕ್ಕಡ ಮತ್ತು ಕೂತಂಡ, ೧೧ ಗಂಟೆಗೆ ಮಂಡೇಪಂಡ ಮತ್ತು ಕರವಂಡ, ಮಧ್ಯಾಹ್ನ ೧೨.೩೦ ಗಂಟೆಗೆ ಚೆಪ್ಪುಡಿರ ಮತ್ತು ಚೇಂದಂಡ, ೨.೩೦ ಗಂಟೆಗೆ ಕುಪ್ಪಂಡ(ಕೈಕೇರಿ) ಮತ್ತು ಪುದಿಯೊಕ್ಕಡ ಕುಟುಂಬಗಳು ಸೆಣಸಾಟ ನಡೆಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net