ಮುದ್ದಂಡ ಕಪ್ ಹಾಕಿ ಉತ್ಸವ :೨೧ ತಂಡಗಳು ಮುಂದಿನ ಸುತ್ತಿಗೆ

kodava hocky
Published on

ಮಡಿಕೇರಿ: ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿಯ ೨೫ನೇ ವರ್ಷದ ಮುದ್ದಂಡ ಕಪ್ ಹಾಕಿ ಪಂದ್ಯಾಟದಲ್ಲಿ ಮಂಗಳವಾರ ೨೧ ತಂಡಗಳು ಗೆಲುವು ಸಾಧಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿತು.

ಮಡಿಕೇರಿಯ ಫೀ.ಮಾ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನ ೧ರಲ್ಲಿ ನಡೆದ ಮಂಗೇರಿರ ಮತ್ತು ಅಕ್ಕಪಂಡ ನಡುವಿನ ಪಂದ್ಯದಲ್ಲಿ ೧-೦ ಗೋಲುಗಳ ಅಂತರದಲ್ಲಿ ಅಕ್ಕಪಂಡ ತಂಡ ಗೆಲುವು ದಾಖಲಿಸಿತು. ಮರುವಂಡ ಮತ್ತು ಮಾಣಿಪಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಾಣಿಪಂಡ ತಂಡ ೪-೩ ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು.

ಮಂಡೀರ ಮತ್ತು ಮಂಡೆಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಂಡೀರ ತಂಡ ಟೈಬ್ರೇಕರ್ ಮೂಲಕ ಜಯ ಸಾಧಿಸಿತು. ಪಂದ್ಯದ ನಿಗದಿತ ಅವಧಿಯಲ್ಲಿ ಮಂಡೀರ ತಂಡದ ಶಿಶರ್ ಒಂದು ಗೋಲು ಗಳಿಸಿದರೆ, ಎದುರಾಳಿ ಮಂಡೆಯಂಡ ತಂಡದ ಚಿರಾಗ್ ಚಿಣ್ಣಪ್ಪ ಒಂದು ಗಳಿಸುವುದರೊಂದಿಗೆ ಪಂದ್ಯ ಡ್ರಾನಲ್ಲಿ ಮುಕ್ತಾಯವಾಯಿತು. ವಿಜೇತ ತಂಡವನ್ನು ನಿರ್ಧರಿಸಲು ಅಳವಡಿಸಿದ ಟೈಬ್ರೇಕರ್‌ನಲ್ಲಿ ಶಿಶರ್ ಮತ್ತು ಜಗ್ಗು ತಲಾ ಒಂದು ಗೋಲು ಗಳಿಸಿದರೆ, ಮಂಡೆಯಡ ಪರವಾಗಿ ಚಿರಾಗ್ ಚಿಣ್ಣಪ್ಪ ಒಂದು ಗೋಲು ದಾಖಲಿಸಿದರು. ಅಂತಿಮವಾಗಿ ಮಂಡೀರ ತಂಡ ೩-೨ ಗೋಲುಗಳ ಅಂತರದ ಪ್ರಯಾಸದ ಗೆಲುವನ್ನು ದಾಖಲಿಸಿತು.

ಬೊಜ್ಜಂಗಡ ಮತ್ತು ಪಟ್ರಪಂಡ ನಡುವಿನ ಪಂದ್ಯ ಯಾವುದೇ ಗೋಲು ಇಲ್ಲದೆ ಡ್ರಾ ಆಯಿತು. ನಂತರ ನಡೆದ ಟೈ ಬ್ರೆಕರ್‌ನಲ್ಲಿ ಬೊಜ್ಜಂಗಡ ತಂಡ ೪ ಮತ್ತು ಪಟ್ರಪಂಡ ತಂಡ ೨ ಗೋಲು ದಾಖಲಿಸಿದವು. ಪಟ್ಟಚೆರುವಂಡ ಮತ್ತು ಚೆಟ್ರುಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಪಟ್ಟಚೆರುವಂಡ ತಂಡ ೪-೦ ಗೋಲುಗಳ ಅಂತರದಿಂದ ಗೆಲುವು ಸಾಧಿಸಿತು.

ಪಟ್ಟಡ ಮತ್ತು ಮುಕ್ಕಾಟಿರ (ಕುಂಬಳದಾಳು) ನಡುವಿನ ಪಂದ್ಯದಲ್ಲಿ ಪಟ್ಟಡ ತಂಡ ೫-೦ ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ಮೋಟನಾಳಿರ ಮತ್ತು ಬೊಳ್ತಂಡ ತಂಡಗಳ ನಡುವಿನ ಪಂದ್ಯದಲ್ಲಿ ಬೊಳ್ತಂಡ ತಂಡ ೧-೦ ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು.

ಮೈದಾನ ೨ರಲ್ಲಿ ಬೇಪಡಿಯಂಡ ಮತ್ತು ಅಲ್ಲಾಂಡ ತಂಡಗಳ ನಡುವಿನ ಪಂದ್ಯದಲ್ಲಿ ಬೇಪಡಿಯಂಡ ಬಾರದ ಹಿನ್ನೆಲೆ ವಾಕ್ ಓವರ್‌ನಲ್ಲಿ ಅಲ್ಲಾಂಡ ತಂಡ ಮುಂದಿನ ಹಂತಕ್ಕೆ ಅರ್ಹತೆ ಪಡೆಯಿತು. ಕಂಬೇಯಂಡ ಮತ್ತು ಮಾಚ್ಚೆಟ್ಟಿರ ತಂಡಗಳ ನಡುವಿನ ಪಂದ್ಯಾಟದಲ್ಲಿ ೪-೦ ಗೋಲುಗಳ ಅಂತರದಲ್ಲಿ ಕಂಬೇಯಂಡ ತಂಡ ಗೆಲುವು ಸಾಧಿಸಿತು. ಪಳೆಯಂಡ ಮತ್ತು ಚಿಮ್ಮುಣಿರ ತಂಡಗಳ ನಡುವಿನ ಪಂದ್ಯದಲ್ಲಿ ಚಿಮ್ಮಣಿರ ತಂಡ ಬಾರದ ಹಿನ್ನೆಲೆ ವಾಕ್ ಓವರ್‌ನಲ್ಲಿ ಪಳೆಯಂಡ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು.

ಕಾನತಂಡ ಮತ್ತು ಮೂಕಳೇರ ತಂಡಗಳ ನಡುವಿನ ಪಂದ್ಯದಲ್ಲಿ ಮೂಕಳೇರ ತಂಡ ೧-೦ ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು. ಕಾರೇರ ಮತ್ತು ಕಲ್ಲೇಂಗಡ (ಬೆಳ್ಳೂರು) ತಂಡಗಳ ನಡುವಿನ ಪಂದ್ಯದಲ್ಲಿ ಕಾರೇರ ತಂಡ ಬಾರದ ಹಿನ್ನೆಲೆ ವಾಕ್ ಓವರ್‌ನಲ್ಲಿ ಕಲ್ಲೇಂಗಡ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು. ನೆರಪಂಡ ಮತ್ತು ಕಾಂಡಂಡ ತಂಡಗಳ ನಡುವಿನ ಪಂದ್ಯದಲ್ಲಿ ಕಾಂಡಂಡ ತಂಡ ೫-೧ ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು. ಚೆರಿಯಂಡ ಮತ್ತು ಪೂಳಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೆರಿಯಂಡ ತಂಡ ೩-೦ ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು.

ಮೈದಾನ ೩(ಪೊಲೀಸ್ ಕವಾಯತ್)ರಲ್ಲಿ ಮಾದೇಟಿರ ಮತ್ತು ಮಲ್ಚೀರ ನಡುವಿನ ಪಂದ್ಯದಲ್ಲಿ ೪-೦ ಗೋಲುಗಳ ಅಂತರದಲ್ಲಿ ಮಲ್ಚೀರ ತಂಡ ಜಯ ಸಾಧಿಸಿತು. ಕೋಡಿರ ಮತ್ತು ಕೊಡಂದೇರ ತಂಡಗಳ ನಡುವಿನ ಪಂದ್ಯದಲ್ಲಿ ಕೋಡಿರ ತಂಡ ಬಾರದ ಹಿನ್ನೆಲೆ ವಾಕ್ ಓವರ್‌ನಲ್ಲಿ ಕೊಡಂದೇರ ತಂಡ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು. ಪಾಲೆಕಂಡ ತಂಡ ಬಾರದ ಹಿನ್ನೆಲೆ ವಾಕ್ ಓವರ್ ನಲ್ಲಿ ಬಾಚಿರ ತಂಡ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು.

ಬಡುವಮಂಡ ಮತ್ತು ಮೇದುರ ತಂಡಗಳ ನಡುವಿನ ಪಂದ್ಯದಲ್ಲಿ ಬಡುವಮಂಡ ೫-೧ ಗೋಲುಗಳ ಅಂತರದಲ್ಲಿ ಜಯ ದಾಖಲಿಸಿತು. ಬಡವಮಂಡ ತಂಡದ ಪರ ಗೌತಮ್ ಹ್ಯಾಟ್ರಿಕ್ ಗೋಲು ಬಾರಿಸಿದರೆ, ಜೀವನ್ ಹಾಗೂ ಅಯ್ಯಪ್ಪ ತಲಾ ೧ ಗೋಲು ಬಾರಿಸಿದರು. ಮೇದುರ ತಂಡದ ಕಂಠಿ ನಾಣಿಯಪ್ಪ ೧ ಗೋಲು ಬಾರಿಸಿದರು. ಪಳಂಗೇಟಿರ ಮತ್ತು ಪೋತಂಡ ತಂಡಗಳ ನಡುವಿನ ಪಂದ್ಯದಲ್ಲಿ ಪಳಂಗೇಟಿರ ೨-೦ ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು.

ಬೈರಾಜಂಡ ಮತ್ತು ಬಾಳೆಕುಟ್ಟಿರ ತಂಡಗಳ ನಡುವಿನ ಪಂದ್ಯದಲ್ಲಿ ಬೈರಾಜಂಡ ತಂಡ ೩-೧ ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಚೊಟ್ಟೆರ ಮತ್ತು ಪಳಂಗಿಯಂಡ ನಡುವೆ ನಡೆದ ಪಂದ್ಯದಲ್ಲಿ ಚೊಟ್ಟೆರ ತಂಡ ೫-೨ ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಚೊಟ್ಟೆರ ತಂಡದ ಪರ ಕವನ್ ಕಾರ್ಯಪ್ಪ ಹ್ಯಾಟ್ರಿಕ್ ಗೋಲು ದಾಖಲಿಸಿದರೆ, ದೀಪಕ್ ಸುಬ್ಬಯ್ಯ ಹಾಗೂ ಪೂವಣ್ಣ ತಲಾ ೧ ಗೋಲು ಬಾರಿಸಿದರು. ಪಳಂಗಿಯಂಡ ತಂಡದ ಪರ ಚಂದನ್ ಹಾಗೂ ಮಾಚಯ್ಯ ತಲಾ ೧ ಗೋಲು ದಾಖಲಿಸಿದರು.

ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದವರ ವಿವರ

ಡೆನ್ನಿ ಗಣಪತಿ ಮ್ಯಾನ್, ಧವನ್ ಬೋಪಣ್ಣ, ಚಿರಾಗ್ ಚಿಣ್ಣಪ್ಪ, ಸೋಮೇಶ್ ಚಂಗಪ್ಪ, ಪಟ್ಟಚೆರುವಂಡ ನಂಜಪ್ಪ, ಮುಕ್ಕಾಟಿರ ತೇಜ್ ತಿಮ್ಮಯ್ಯ, ಪವನ್, ಮಾಚ್ಚೆಟ್ಟಿರ ಭೂಮಿಕಾ ಚಂಗಪ್ಪ, ಸುಬ್ಬಯ್ಯ ಪ್ಲೆಯರ್, ಸುಭಾಷ್ ಸೋಮಣ್ಣ, ಅರ್ಜುನ್ ಕಾಳಪ್ಪ, ಟಿನ್ಸಿ ತಿಮ್ಮಯ್ಯ, ಬಾಳೆಕುಟ್ಟಿರ ಕೀರ್ತನ್, ಮೇದುರ ತರುಣ್ ತಮ್ಮಯ್ಯ, ಬಾಳೆಕುಟ್ಟಿರ ಕೀರ್ತನ್, ಪಳಂಗಿಯಂಡ ಚಂದನ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಇಂದು ನಡೆಯಲಿರುವ ಪಂದ್ಯಾವಳಿ ವಿವರ

ಮೈದಾನ ೧: ಬೆಳಿಗ್ಗೆ ೯ ಗಂಟೆಗೆ ಪಟ್ಟಮಾಡ ಮತ್ತು ಪೊಂಜಂಡ, ೧೦ ಗಂಟೆಗೆ ಚಿಮ್ಮಣಮಾಡ ಮತ್ತು ಮುದ್ದಿಯಡ, ೧೧ ಗಂಟೆಗೆ ಬೊಳೆಯಾಡಿರ ಮತ್ತು ಪೆಮ್ಮುಡಿಯಂಡ, ಮಧ್ಯಾಹ್ನ ೧೨ ಗಂಟೆಗೆ ಕೊಂಡಿರ ಮತ್ತು ಪೇರಿಯಂಡ, ೧ ಗಂಟೆಗೆ ಕುಟ್ಟಂಡ (ಕಾರ್ಮಡ್) ಮತ್ತು ಪರುವಂಗಡ, ೨ ಗಂಟೆಗೆ ಚಿಲ್ಲವಂಡ ಮತ್ತು ಮುದ್ದಂಡ, ೩ ಗಂಟೆಗೆ ಕಂಜಿತಂಡ ಮತ್ತು ಪೊನ್ನಕಚ್ಚಿರ, ಸಂಜೆ ೪ ಗಂಟೆಗೆ ಚರಿಮಂಡ ಮತ್ತು ಮೇವಡ ಕುಟುಂಬಗಳ ನಡುವೆ ಪಂದ್ಯಾಟ ನಡೆಯಲಿದೆ.

ಮೈದಾನ ೨: ಬೆಳಿಗ್ಗೆ ೯ ಗಂಟೆಗೆ ನಾಪನೆರವಂಡ ಮತ್ತು ನೆಲ್ಲಪಟ್ಟಿರ, ೧೦ ಗಂಟೆಗೆ ಕೋಣಿಯಂಡ ಮತ್ತು ಕಲ್ಲುಮಾಡಂಡ, ೧೧ ಗಂಟೆಗೆ ಕೊಲತಂಡ ಮತ್ತು ಮಲ್ಲಂಡ, ಮಧ್ಯಾಹ್ನ ೧೨ ಗಂಟೆಗೆ ಪಾಂಡೀರ (ಗಾಳಿಬೀಡು) ಮತ್ತು ಪೋರಂಗಡ, ೧ ಗಂಟೆಗೆ ಮಾಳೆಯಂಡ ಮತ್ತು ಬಲ್ಯಂಡ, ೨ ಗಂಟೆಗೆ ಅಮ್ಮೆಕಂಡ ಮತ್ತು ಚೆಬಂಡ, ೩ ಗಂಟೆಗೆ ಮುಂಡಚಾಡಿರ ಮತ್ತು ಅಯ್ಯಮಾಡ, ಸಂಜೆ ೪ ಗಂಟೆಗೆ ಬೊಟ್ಟಂಗಡ ಮತ್ತು ಉದ್ದಪಂಡ ಕುಟುಂಬಗಳ ನಡುವೆ ಪಂದ್ಯಾಟ ನಡೆಯಲಿದೆ.

ಮೈದಾನ ೩: ಬೆಳಿಗ್ಗೆ ೧೧ ಗಂಟೆಗೆ ಚಿಂಡಮಾಡ ಮತ್ತು ಕೇಚೆಟ್ಟಿರ (ಬೆಂಗೂರು), ಮಧ್ಯಾಹ್ನ ೧೨ ಗಂಟೆಗೆ ಅರಮಣಮಾಡ ಮತ್ತು ತಾತೀರ, ೧ ಗಂಟೆಗೆ ತೀತಿರ ಮತ್ತು ತೆಲಪಂಡ, ೨ ಗಂಟೆಗೆ ಕಾಕಮಾಡ ಮತ್ತು ಕುಂಡ್ರಂಡ, ೩ ಗಂಟೆಗೆ ಕುಂಚೆಟ್ಟಿರ ಮತ್ತು ಮಳವಂಡ ಕುಟುಂಬಗಳ ನಡುವೆ ಪಂದ್ಯಾಟ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net