ಮುದ್ದಂಡ ಕಪ್ ಹಾಕಿ ಉತ್ಸವ: ೧೯ ತಂಡಗಳು ಮುಂದಿನ ಸುತ್ತಿಗೆ

kodava hocky
Published on

ಮಡಿಕೇರಿ: ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿಯ ೨೫ನೇ ವರ್ಷದ ಮುದ್ದಂಡ ಕಪ್ ಹಾಕಿ ಪಂದ್ಯಾಟದಲ್ಲಿ ಶುಕ್ರವಾರ ೧೯ ತಂಡಗಳು ಗೆಲುವು ಸಾಧಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿತು.

ಮಡಿಕೇರಿಯ ಫೀ.ಮಾ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನ ೧ರಲ್ಲಿ ಮುಕ್ಕಾಟಿರ (ಬೇತ್ರಿ) ಮತ್ತು ಚೌರೀರ ತಂಡಗಳ ನಡುವಿನ ಪಂದ್ಯದಲ್ಲಿ ೪-೧ ಗೋಲುಗಳ ಅಂತರದಲ್ಲಿ ಚೌರೀರ ತಂಡ ಜಯ ಸಾಧಿಸಿತು. ಶಿವಾಚಾಳಿಯಂಡ ಮತ್ತು ಚೆರಿಯಪಂಡ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ತಲಾ ೧ ಗೋಲು ದಾಖಲಿಸುವ ಮೂಲಕ ಡ್ರಾ ಆದ ಕಾರಣ ಟೈ ಬ್ರೇಕರ್‌ನಲ್ಲಿ ಚೆರಿಯಪಂಡ ತಂಡ ೩ ಗೋಲು ದಾಖಲಿಸಿ ಗೆಲುವಿನ ನಗೆ ಬೀರಿತು. ಮೂಕಳಮಾಡ ಮತ್ತು ಅಜ್ಜಿಕುಟ್ಟೀರ ತಂಡಗಳ ನಡುವಿನ ಪಂದ್ಯದಲ್ಲಿ ಮೂಕಳಮಾಡ ತಂಡ ೨-೦ ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು.

ಪಾಲಂದಿರ ಮತ್ತು ಐನಂಡ ನಡುವಿನ ಪಂದ್ಯದಲ್ಲಿ ೫-೦ ಗೋಲುಗಳ ಅಂತರದಲ್ಲಿ ಪಾಲಂದಿರ ತಂಡ ಜಯ ಸಾಧಿಸಿತು. ಮುಕ್ಕಾಟಿರ(ಕುಂಜಿಲಗೇರಿ) ಮತ್ತು ಮಚ್ಚಂಡ ತಂಡಗಳ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ತಲಾ ೨ ಗೋಲು ದಾಖಲಿಸಿ ಪಂದ್ಯ ಡ್ರಾ ಆದ ಕಾರಣ ಟೈ ಬ್ರೇಕರ್ ನಲ್ಲಿ ಮಚ್ಚಂಡ ತಂಡ ೪ ಗೋಲು ಬಾರಿಸಿ ಗೆಲುವು ದಾಖಲಿಸಿತು. ಮಲ್ಲಂಗಡ ಮತ್ತು ಸಿದ್ದಂಡ ನಡುವಿನ ಪಂದ್ಯವನ್ನು ಮಳೆಯ ಕಾರಣದಿಂದ ಪಂದ್ಯವನ್ನು ಮುಂದೂಡಲಾಯಿತು.

ಮೈದಾನ ೨ರಲ್ಲಿ ನಡೆದ ಮೊದಲ ಪಂದ್ಯ ಕೊಕ್ಕಲೆರ ತಂಡ ಬಾರದ ಹಿನ್ನೆಲೆ ನಾಳಿಯಂಡ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು. ತಾತಂಡ ಮತ್ತು ಕುಯಿಮಂಡ ನಡುವಿನ ಪಂದ್ಯದಲ್ಲಿ ೫-೦ ಗೋಲುಗಳ ಅಂತರದಲ್ಲಿ ತಾತಂಡ ತಂಡ ಗೆಲುವು ಸಾಧಿಸಿತು. ಕೊಕ್ಕಲೆಮಾಡ ಮತ್ತು ಕಾಳೆಯಂಡ ತಂಡಗಳ ನಡುವಿನ ಪಂದ್ಯದಲ್ಲಿ ೧-೦ ಗೋಲುಗಳ ಅಂತರದಲ್ಲಿ ಕಾಳೆಯಂಡ ತಂಡ ಗೆಲುವು ಸಾಧಿಸಿತು. ನಾಯಕಂಡ ಮತ್ತು ಕಳ್ಳಿಚಂಡ ನಡುವಿನ ಪಂದ್ಯದಲ್ಲಿ ಕಳ್ಳಿಚಂಡ ತಂಡ ೪-೦ ಗೋಲುಗಳ ಅಂತರದಲ್ಲಿ ಜಯಸಾಧಿಸಿತು. ನಡಿಕೇರಿಯಂಡ ಮತ್ತು ಪಂದ್ಯಂಡ ತಂಡಗಳ ನಡುವಿನ ವಕ್ ಓವರ್‌ನಲ್ಲಿ ನಡಿಕೇರಿಯಂಡ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು.

ಕಾಳಿಮಾಡ ಮತ್ತು ನಂಬುಡುಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಕಾಳಿಮಾಡ ತಂಡ ೩-೦ ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಕೊಟ್ಟುಕತ್ತಿರ ಮತ್ತು ಕಳಕಂಡ ತಂಡಗಳ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ನಿಗಧಿತ ಅವದಿಯಲ್ಲಿ ಶೂನ್ಯ ಸಾಧನೆ ಮಾಡಿದ ಕಾರಣ ಟೈಬ್ರೇಕರ್‌ನಲ್ಲಿ ೫ ಗೋಲು ದಾಖಲಿಸಿದ ಕಳಕಂಡ ತಂಡ ಜಯ ದಾಖಲಿಸಿತು.

ಮೈದಾನ ೩ರಲ್ಲಿ ತಿರೋಡಿರ ಮತ್ತು ತಿರುಟೆರ ನಡುವಿನ ಪಂದ್ಯದಲ್ಲಿ ೪-೦ ಗೋಲುಗಳ ಅಂತರದಲ್ಲಿ ತಿರುಟೆರ ಗೆಲುವು ಸಾಧಿಸಿತು. ಕೇತಿರ ಮತ್ತು ಕೊಚ್ಚೆರ ನಡುವಿನ ಪಂದ್ಯದಲ್ಲಿ ಕೊಚ್ಚೆರ ತಂಡ ೨-೧ ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ಕಳ್ಳಂಗಡ ಮತ್ತು ನಾಮೆರ ನಡುವಿನ ಪಂದ್ಯದಲ್ಲಿ ೧-೦ ಗೋಲುಗಳ ಅಂತರದಲ್ಲಿ ಕಳ್ಳಂಗಡ ತಂಡ ಗೆಲುವು ದಾಖಲಿಸಿತು. ಚಟ್ಟಂಡ ಮತ್ತು ತೀತರಮಾಡ ನಡುವಿನ ಪಂದ್ಯದಲ್ಲಿ ತೀತರಮಾಡ ತಂಡ ೩-೨ ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ಚೊಟ್ಟೆಯಂಡಮಾಡ ಮತ್ತು ಉಡುವೆರ ತಂಡಗಳ ನಡುವೆ ವಾಕ್ ಓವರ್‌ನಲ್ಲಿ ಚೊಟ್ಟೆಯಂಡಮಾಡ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು. ಬಲ್ಲಾರಂಡ ಮತ್ತು ಕಾಳೇಂಗಡ ತಂಡದ ನಡುವಿನ ಪಂದ್ಯದಲ್ಲಿ ೧-೦ ಗೋಲುಗಳ ಅಂತರದಲ್ಲಿ ಕಾಳೇಂಗಡ ತಂಡ ಜಯ ಸಾಧಿಸಿತು.

ಮೈದಾನ ೧

ಬೆಳಿಗ್ಗೆ ೯ ಗಂಟೆಗೆ ಅಪ್ಪಂಡೆರಂಡ ಮತ್ತು ಮೊಳ್ಳೆರ, ೧೦ ಗಂಟೆಗೆ ಬಲ್ಲಂಡ ಮತ್ತು ತಾಪಂಡ, ೧೧ ಗಂಟೆಗೆ ಚೀಯಂಡಿರ ಮತ್ತು ಚೇನಂಡ, ಮಧ್ಯಾಹ್ನ ೧ ಗಂಟೆಗೆ ಚೋಯಮಡಂಡ ಮತ್ತು ಮೂಡೇರ, ೨ ಗಂಟೆಗೆ ಮೂಕಚಂಡ ಮತ್ತು ಅಪ್ಪಾರಂಡ ಕುಟುಂಬಗಳ ನಡುವೆ ಪಂದ್ಯಾಟ ನಡೆಯಲಿದೆ.

ಮೈದಾನ ೨

ಬೆಳಿಗ್ಗೆ ೯ ಗಂಟೆಗೆ ಕಂಡ್ರತಂಡ ಮತ್ತು ಅಜ್ಜೆಟಿರ, ೧೦ ಗಂಟೆಗೆ ಅಯ್ಯರಾಣಿಯಂಡ ಮತ್ತು ಕೋಲುಮಾಡಂಡ, ೧೧ ಗಂಟೆಗೆ

ಗಂಡಂಗಡ ಮತ್ತು ಮುಕ್ಕಾಟಿರ (ಕಡಗದಾಳ್), ಮಧ್ಯಾಹ್ನ ೧ ಗಂಟೆಗೆ ಪೊರ್ಕಂಡ ಮತ್ತು ಚಂದೂರ, ೨ ಗಂಟೆಗೆ ಮೂಕಂಡ ಮತ್ತು ಪುಟ್ಟಿಚಂಡ, ೩ ಗಂಟೆಗೆ ಪುಲಿಯಂಡ ಮತ್ತು ಕುಂಡ್ಯೋಳಂಡ ಕುಟುಂಬಗಳ ನಡುವೆ ಪಂದ್ಯಾಟ ನಡೆಯಲಿದೆ.

ಮೈದಾನ೩

ಬೆಳಿಗ್ಗೆ ೯ ಗಂಟೆಗೆ ಚೆಂಗೇಟಿರ ಮತ್ತು ಮುಕ್ಕಾಟಿರ(ದೊಡ್ಡಪುಳಿಕೋಟು), ೧೦ ಗಂಟೆಗೆ ೧೦ ಗಂಟೆಗೆ ಅಳಮೇಂಗಡ ಮತ್ತು ಚೆರುವಾಳಂಡ, ೧೧ ಗಂಟೆಗೆ ಕಾಂಗೀರ ಮತ್ತು ಸಣ್ಣುವಂಡ, ಮಧ್ಯಾಹ್ನ ೧ ಗಂಟೆಗೆ ಕೊಲ್ಲಿರ ಮತ್ತು ಸೋಮೆಯಂಡ, ೨ ಗಂಟೆಗೆ ಮಚ್ಚಂಗಡ ಮತ್ತು ಅಲ್ಲಾರಂಡ, ೩ ಗಂಟೆಗೆ ಬಿದ್ದೇರಿಯಂಡ ಮತ್ತು ಒಡಿಯಂಡ ಕುಟುಂಬಗಳ ನಡುವೆ ಪಂದ್ಯಾಟ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net