ಮುದ್ದಂಡ ಕಪ್ ಹಾಕಿ ಉತ್ಸವ : ೧೨ ತಂಡಗಳು ಮುಂದಿನ ಸುತ್ತಿಗೆ

kodava hocky
Published on

ಮಡಿಕೇರಿ: ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿಯ ೨೫ನೇ ವರ್ಷದ ಮುದ್ದಂಡ ಕಪ್ ಹಾಕಿ ಪಂದ್ಯಾಟದಲ್ಲಿ ಶುಕ್ರವಾರ ೧೨ ತಂಡಗಳು ಗೆಲುವು ಸಾಧಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿತು.

ಮಡಿಕೇರಿಯ ಫೀ.ಮಾ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಚೋಯಮಾಡಂಡ ಮತ್ತು ಕೋಟೇರ ನಡುವಿನ ಪಂದ್ಯದಲ್ಲಿ ಕೋಟೇರ ತಂಡ ೧-೦ ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಕೋಟೇರ ಪರ ಕೌಶಿಕ್ ೧ ಗೋಲು ದಾಖಲಿಸಿದರು. ಕುಮ್ಮಂಡ ಮತ್ತು ಪುದಿಯೊಕ್ಕಡ ನಡುವಿನ ಪಂದ್ಯದಲ್ಲಿ ೨-೦ ಗೋಲುಗಳ ಅಂತರದಲ್ಲಿ ಪುದಿಯೊಕ್ಕಡ ಜಯ ಸಾಧಿಸಿತು. ಪುದಿಯೊಕ್ಕಡ ಪರ ಪ್ರಧಾನ್ ಸೋಮಣ್ಣ ಹಾಗೂ ಸೂರತ್ ಬೋಜಣ್ಣ ತಲಾ ೧ ಗೋಲು ದಾಖಲಿಸಿದರು. ಮುಕ್ಕಾಟಿರ (ಬೋಂದ) ಮತ್ತು ಚಂಗುಲಂಡ ನಡುವಿನ ಪಂದ್ಯದಲ್ಲಿ ೨-೧ ಗೋಲುಗಳ ಅಂತರದಲ್ಲಿ ಚಂಗುಲಂಡ ಗೆಲುವು ಸಾಧಿಸಿತು. ಚಂಗುಲಂಡ ಪರ ಡಿಶಿನ್ ಗಣಪತಿ ಹಾಗೂ ಗೌತಮ್ ತಲಾ ೧ ಗೋಲು ದಾಖಲಿಸಿದರು.

ಅಟ್ರಂಗಡ ಮತ್ತು ಮಳವಂಡ ನಡುವಿನ ಪಂದ್ಯದಲ್ಲಿ ೧-೦ ಗೋಲುಗಳ ಅಂತರದಲ್ಲಿ ಅಟ್ರಂಗಡ ಜಯ ಸಾಧಿಸಿತು. ಅಟ್ರಂಗಡ ಪರ ಮೋಹಿತ್ ೧ ಗೋಲು ದಾಖಲಿಸಿದರು. ಕಾಯಪಂಡ ಮತ್ತು ಮೇಕೇರಿರ ನಡುವಿನ ಪಂದ್ಯದಲ್ಲಿ ೫-೦ ಗೋಲುಗಳ ಅಂತರದಲ್ಲಿ ಮೇಕೇರಿರ ಜಯ ಸಾಧಿಸಿತು. ಮೇಕೇರಿರ ಪರ ಅಭಿನವ್ ಗಣಪತಿ ೨, ರೋನಕ್ ತಿಮ್ಮಯ್ಯ, ನಿತಿನ್ ತಮ್ಮಯ್ಯ, ವಿಜು ಚಿಣ್ಣಪ್ಪ ತಲಾ ೧ ಗೋಲು ದಾಖಲಿಸಿದರು. ನಂಬುಡುಮಾಡ ಮತ್ತು ಅಂಜಪರವಂಡ ನಡುವಿನ ಪಂದ್ಯದಲ್ಲಿ ೫-೦ ಗೋಲುಗಳ ಅಂತರದಲ್ಲಿ ಅಂಜಪರವಂಡ ಗೆಲುವು ದಾಖಲಿಸಿತು. ಅಂಜಪರವಂಡ ಪರ ಅಭಿನ್ ಚೆಟ್ಟಿಯಪ್ಪ, ರೋಹನ್ ಮಾದಪ್ಪ, ಜತನ್ ದೇವಯ್ಯ, ಉತ್ಸವ್ ಕುಶಾಲಪ್ಪ ಹಾಗೂ ಚಿರಾಗ್ ಚಂಗಪ್ಪ ತಲಾ ೧ ಗೋಲು ದಾಖಲಿಸಿದರು.

ಮೈದಾನ ೨ರಲ್ಲಿ ಅಮ್ಮಣಿಚಂಡ ಮತ್ತು ಅಜ್ಜಮಾಡ ನಡುವಿನ ಪಂದ್ಯದಲ್ಲಿ ೨-೦ ಗೋಲುಗಳ ಅಂತರದಲ್ಲಿ ಅಮ್ಮಣಿಚಂಡ ಗೆಲುವು ದಾಖಲಿಸಿತು. ಅಮ್ಮಣಿಚಂಡ ವಿಘ್ನೇಶ್ ಬೋಪಣ್ಣ ಹಾಗೂ ಸಂಜು ಸೋಮಯ್ಯ ತಲಾ ೧ ಗೋಲು ದಾಖಲಿಸಿದರು. ಮೇರಿಯಂಡ ಮತ್ತು ಬೊವ್ವೆರಿಯಂಡ ನಡುವಿನ ಪಂದ್ಯದಲ್ಲಿ ೪-೨ ಗೋಲುಗಳ ಅಂತರದಲ್ಲಿ ಬೊವ್ವೇರಿಯಂಡ ಗೆಲುವು ದಾಖಲಿಸಿತು. ಬೊವ್ವೇರಿಯಂಡ ಪರ ನಿತಿನ್ ಅಪ್ಪಯ್ಯ ಹ್ಯಾಟ್ರಿಕ್ ಗೋಲು ಬಾರಿಸಿದರೆ, ಜಿತನ್ ೧ ಗೋಲು ಬಾರಿಸಿದರು. ಮೇರಿಯಂಡ ಪರ ರಾಯಲ್ ಅಯ್ಯಣ್ಣ ಹಾಗೂ ಪವನ್ ಅಯ್ಯಪ್ಪ ತಲಾ ೧ ಗೋಲು ಬಾರಿಸಿದರು.

ನೆರವಂಡ ಮತ್ತು ಚೆರುಮಂದಂಡ ನಡುವಿನ ಪಂದ್ಯದಲ್ಲಿ ೨-೦ ಗೋಲುಗಳ ಅಂತರದಲ್ಲಿ ನೆರವಂಡ ತಂಡ ಜಯಸಾಧಿಸಿತು. ನೆರವಂಡ ಪರ ಪ್ರಶಾಂತ್ ಹಾಗೂ ಅಪ್ಪಣ್ಣ ತಲಾ ೧ ಗೋಲು ದಾಖಲಿಸಿದರು. ಮುರುವಂಡ ಮತ್ತು ಮಂಡೇಪಂಡ ನಡುವಿನ ಪಂದ್ಯದಲ್ಲಿ ೩-೦ ಗೋಲುಗಳ ಅಂತರದಲ್ಲಿ ಮಂಡೇಪಂಡ ಗೆಲುವು ಸಾಧಿಸಿತು. ಮಂಡೇಪಂಡ ಪರ ಕವನ್ ಮುತ್ತಪ್ಪ, ದಿಲನ್ ದೇವಯ್ಯ ಹಾಗೂ ಸಜನ್ ಅಚ್ಚಯ್ಯ ತಲಾ ೧ ಗೋಲು ದಾಖಲಿಸಿದರು. ಪುಲ್ಲಂಗಡ ಮತ್ತು ಸಣ್ಣುವಂಡ ನಡುವಿನ ಪಂದ್ಯದಲ್ಲಿ ೩-೨ ಗೋಲುಗಳ ಅಂತರದಲ್ಲಿ ಸಣ್ಣುವಂಡ ಗೆಲುವು ದಾಖಲಿಸಿತು. ಸಣ್ಣುವಂಡ ಪರ ಮಾದಯ್ಯ ೨, ಉತ್ತಪ್ಪ ೧ ಗೋಲು ದಾಖಲಿಸಿದರು.

ಪುಲ್ಲಂಗಡ ಪರ ಅಪ್ಪಚ್ಚು ಹಾಗೂ ಪೊನ್ನಣ್ಣ ತಲಾ ೧ ಗೋಲು ಬಾರಿಸಿದರು. ಸೋಮೆಯಂಡ ಮತ್ತು ಕಲಿಯಂಡ ನಡುವಿನ ಪಂದ್ಯದಲ್ಲಿ ನಿಗದಿತ ಅವಧಿಯಲ್ಲಿ ಎರಡೂ ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ ೪-೩ ಗೋಲು ಅಂತರದಲ್ಲಿ ಸೋಮೆಯಂಡ ಜಯ ಸಾಧಿಸಿತು.

ಏ.೨೦ ರಂದು ಬೊಡಿ ನಮ್ಮೆ ಸ್ಪರ್ಧೆ

ಮುದ್ದಂಡ ಕಪ್ ಹಾಕಿ ಉತ್ಸವದಲ್ಲಿ ಶಾರ್ಪ್‌ಶೂಟರ್‌ಗಳಿಗೆ ರೋಮಾಂಚಕಾರಿ ಓಪನ್ ಶೂಟಿಂಗ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಏ.೨೦ ರಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಮೂರು ವಿಭಾಗಗಳಲ್ಲಿ ಬೊಡಿ ನಮ್ಮೆ ಸ್ಪರ್ಧೆ ನಡೆಯಲಿದೆ. ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ.೨೨ (೫೦ಮೀ), ೧೨ ಬೋರ್ ತೆಂಗಿನಕಾಯಿ ಶೂಟಿಂಗ್(೩೦ಮೀ) ಹಾಗೂ ಏರ್ ರೈಫಲ್ ಎಗ್ ಶೂಟಿಂಗ್ (೧೫ಮೀ) ವಿಭಾಗದಲ್ಲಿ ಮುಕ್ತ ಸ್ಪರ್ಧೆ ನಡೆಯಲಿದ್ದು, ವಿಜೇತರಿಗೆ ಆಕರ್ಷಕ ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ೯೪೪೮೭೯೬೯೪೭, ೯೪೪೮೮೯೫೯೬೯ ಸಂಪರ್ಕಿಸಬಹುದಾಗಿದೆ ಎಂದು ಮುದ್ದಂಡ ಕಪ್ ಹಾಕಿ ಉತ್ಸವ ಸಮಿತಿಯ ಅಧ್ಯಕ್ಷ ಮುದ್ದಂಡ ರಶಿನ್ ಸುಬ್ಬಯ್ಯ ತಿಳಿಸಿದ್ದಾರೆ.

ಇಂದಿನ ಪಂದ್ಯಾಟ

ಮೈದಾನ ೧

ಬೆಳಿಗ್ಗೆ ೯ ಗಂಟೆಗೆ ಚೆಪ್ಪುಡಿರ ಮತ್ತು ಕರ್ತಮಾಡ, ೧೦ ಗಂಟೆಗೆ ಮಾದಂಡ ಮತ್ತು ಮೇಚಿಯಂಡ, ೧೧ ಗಂಟೆಗೆ ಬೊಳ್ಳಂಡ ಮತ್ತು ಬೊಟ್ಟೋಳಂಡ, ಮಧ್ಯಾಹ್ನ ೧೨ ಗಂಟೆಗೆ ಕೊಂಗೇಟಿರ ಮತ್ತು ಚೇಂದಂಡ, ೧ ಗಂಟೆಗೆ ಐಚೆಟ್ಟೀರ ಮತ್ತು ನಾಳಿಯಂಡ, ೨ ಗಂಟೆಗೆ ನೆಲ್ಲಮಕ್ಕಡ ಮತ್ತು ನಾಪಂಡ, ೩ ಗಂಟೆಗೆ ಕೋಳೇರ ಮತ್ತು ಚೆಕ್ಕೇರ ಕುಟುಂಬಗಳು ಸೆಣಸಾಟ ನಡೆಸಲಿದೆ.

ಮೈದಾನ ೨

ಬೆಳಿಗ್ಗೆ ೮.೩೦ ಗಂಟೆಗೆ ಪರದಂಡ ಮತ್ತು ಐನಂಡ, ೯ ಗಂಟೆಗೆ ಬಯವಂಡ ಮತ್ತು ಕರವಂಡ, ೧೦ ಗಂಟೆಗೆ ಕಳ್ಳಿಚಂಡ ಮತ್ತು ಕಂಬೀರಂಡ, ೧೧ ಗಂಟೆಗೆ ಕೋನೇರಿರ ಮತ್ತು ಇಟ್ಟೀರ, ಮಧ್ಯಾಹ್ನ ೧ ಗಂಟೆಗೆ ಕಾಂಡಂಡ ಮತ್ತು ಕುಲ್ಲೇಟಿರ, ೨ ಗಂಟೆಗೆ ಕುಪ್ಪಂಡ (ಕೈಕೇರಿ) ಮತ್ತು ಮತ್ರಂಡ ಕುಟುಂಬಗಳು ಪೈಪೋಟಿ ನಡೆಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net