

ಮಡಿಕೇರಿ
ಕೊಡವರು ಒಂದು ತಿಂಗಳ ಕಾಲ ಹಬ್ಬದಂತೆ ಸಂಭ್ರಮಿಸುವ 'ಕೊಡವ ಕೌಟುಂಬಿಕ ಹಾಕಿ ನಮ್ಮೆ'ಗೆ ಈ ಬಾರಿ ಬೆಳ್ಳಿಮಹೋತ್ಸವದ ಸಂಭ್ರಮ. 25ನೇ ವರ್ಷದ ಈ ಹಾಕಿ ಹಬ್ಬವನ್ನು ಮುನ್ನಡೆಸುವ ಜವಾಬ್ದಾರಿ ಈ ಸಲ ಮುದ್ದಂಡ ಕುಟುಂಬಸ್ಥರ ಪಾಲಿಗೆ ಬಂದಿದೆ. ಹಾಗಾಗಿ 2025ರ ಮಾ.28 ರಿಂದ ಆರಂಭವಾಗುವ 'ಮುದ್ದಂಡ ಕಪ್ ಹಾಕಿ ನಮ್ಮೆ'ಯನ್ನು ವಿಭಿನ್ನತೆಯೊಂದಿಗೆ ಸ್ಮರಣೀಯವಾಗಿ ನಡೆಸಲು ಕುಟುಂಬಸ್ಥರು ಈಗಿನಿಂದಲೇ ಸಿದ್ಧತೆಗಳನ್ನು ನಡೆಸುತ್ತಿದ್ದು, ಮತ್ತೊಂದು ಗಿನ್ನಿಸ್ ದಾಖಲೆಯ ಗುರಿ ಇಟ್ಟುಕೊಳ್ಳಲಾಗಿದೆ.
2018ರಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ದುರಂತ, 2019 ರಿಂದ 2022ರ ತನಕ ಕೋವಿಡ್ ಹಾವಳಿಯ ಕಾರಣದಿಂದ ನಾಲ್ಕು ವರ್ಷ ಸ್ಥಗಿತವಾಗಿದ್ದು ಹೊರತುಪಡಿಸಿದರೆ 1997ರಿಂದ ಈಚೆಗೆ ಸತತವಾಗಿ ನಡೆಯುತ್ತಾ ಬಂದಿರುವ 'ಕೊಡವ ಕೌಟುಂಬಿಕ ಹಾಕಿ ನಮ್ಮೆ' ಈ ಬಾರಿ ಬೆಳ್ಳಿ ಹಬ್ಬ ಆಚರಿಸಿಕೊಳ್ಳುತ್ತಿದೆ. ಈ ಮಹತ್ವದ ಘಟ್ಟದಲ್ಲಿ ಹಾಕಿ ಹಬ್ಬವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಮಡಿಕೇರಿಯ ಮುದ್ದಂಡ ಕುಟುಂಬಸ್ಥರು ವಹಿಸಿಕೊಂಡಿದ್ದು, 2025ರ ಮಾ. 28ರಿಂದ ಏ. 27ರ ತನಕ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಹಾಕಿಯ ರಸದೌತಣ ಉಣಬಡಿಸಲು ತಯಾರಿ ನಡೆಸಲಾಗುತ್ತಿದೆ. ನಾಪೋಕ್ಲುವಿನಲ್ಲಿ ನಡೆದಿದ್ದ ಕುಂಡ್ಯೋಳAಡ ಕಪ್ ಹಾಕಿ ನಮ್ಮೆಯ ಫೈನಲ್ ಪಂದ್ಯಾವಳಿ ದಿನ ಅಧಿಕೃತವಾಗಿ ಧ್ವಜ ಸ್ವೀಕರಿಸುವುದರೊಂದಿಗೆ ಮುದ್ದಂಡ ಕುಟುಂಬದವರು ಪೂರ್ವಸಿದ್ಧತೆಯನ್ನು ಆರಂಭಿಸಿದ್ದರು.
ಈ ಬಾರಿಯ 'ಕೊಡವ ಕೌಟುಂಬಿಕ ಹಾಕಿ ನಮ್ಮೆ' ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಇರುವುದರಿಂದ ಹಾಕಿ ಪ್ರೇಮಿಗಳಲ್ಲಿ ನಿರೀಕ್ಷೆಗಳು ಗರಿಗೆದರಿದೆ. ಇದಕ್ಕೆ ಪೂರಕವಾಗಿ ಮುದ್ದಂಡ ಕುಟುಂಬಸ್ಥರು ಕೂಡ ಈ ಹಾಕಿ ಹಬ್ಬವನ್ನು ಇತಿಹಾಸದ ಪುಟಗಳಲ್ಲಿ ದಾಖಲಾಗುವಂತೆ ವೈಶಿಷ್ಟö್ಯಪೂರ್ಣವಾಗಿ ನಡೆಸಲು ಚಿಂತನೆ ನಡೆಸಿದ್ದಾರೆ. ಈಗಾಗಲೇ ಈ ಸಂಬAಧ ಚಟುವಟಿಕೆಗಳು ಶುರುವಾಗಿದೆ. ಕಳೆದ ವರ್ಷ ಕುಂಡ್ಯೋಳAಡ ಹಾಕಿ ನಮ್ಮೆ ಸಂದರ್ಭ ಸಾಕಷ್ಟು ವೈವಿಧ್ಯಮಯ ಕಾರ್ಯಕ್ರಮಗಳು ಗಮನ ಸೆಳೆದಿದ್ದವು. ಈ ಬಾರಿ 25ನೇ ವರ್ಷ ಆಗಿರುವುದರಿಂದ 25 ಬಗೆಯ ಕಾರ್ಯಕ್ರಮಳನ್ನು ನಡೆಸಲು ಸಲಹೆಗಳು ಬಂದಿದ್ದು, ಈ ನಿಟ್ಟಿನಲ್ಲಿ ಕುಟುಂಬಸ್ಥರು ಚಿಂತನೆ ನಡೆಸಿದ್ದಾರೆ.
'ಕೊಡವ ಕೌಟುಂಬಿಕ ಹಾಕಿ ನಮ್ಮೆ' ಕೊಡಗಿನ ಒಂದು ಉತ್ಸವವಾಗಬೇಕು. ಕೊಡಗಿನವರ ಪಾಲಿಗೆ ಸಂಭ್ರಮ ಆಗಬೇಕು ಎನ್ನುವ ಆಶಯ ಮುದ್ದಂಡ ಕುಟುಂಬಸ್ಥರದ್ದಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲರನ್ನೂ ಒಳಗೊಂಡAತೆ ಹಾಕಿ ಹಬ್ಬ ನಡೆಸಲು ಚರ್ಚೆಗಳು ನಡೆದಿದೆ. ಬಂದೂಕು ಹಬ್ಬ, ಸೈಕಲ್ ರೇಸ್, ಮ್ಯಾರಾಥಾನ್ ಮಾದರಿಯಲ್ಲಿ ಮಜಾಥಾನ್... ಹೀಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಗುತ್ತಿದ್ದು, ಇವುಗಳಲ್ಲಿ ಕೊಡವರ ಜತೆಗೆ ಇತರ ಜನಾಂಗದವರಿಗೂ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲು ಯೋಚಿಸಲಾಗಿದೆ. ಜಿಲ್ಲಾ ಕೇಂದ್ರದಲ್ಲಿ ನಡೆಯುತ್ತಿರುವುದರಿಂದ ಬೇರೆ ಸಮುದಾಯದವರನ್ನೂ ಕೊಡವ ಹಾಕಿ ಹಬ್ಬದತ್ತ ಆಕರ್ಷಿಸಲು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ಈಗ ಮೂರನೇ ಬಾರಿಗೆ 'ಕೊಡವ ಕೌಟುಂಬಿಕ ಹಾಕಿ ನಮ್ಮೆ'ಗೆ ಮಡಿಕೇರಿ ಸಾಕ್ಷಿಯಾಗುತ್ತಿದೆ. ಈ ಹಿಂದೆ 2005ರಲ್ಲಿ ಬಿದ್ದಂಡ ಕಪ್ ಮತ್ತು 2016ರಲ್ಲಿ ಶಾಂತೆಯAಡ ಕಪ್ ಕೊಡವ ಹಾಕಿ ನಮ್ಮೆ ಜಿಲ್ಲಾ ಕೇಂದ್ರದಲ್ಲಿ ನಡೆದಿತ್ತು. ಈ ಬಾರಿ ಮುದ್ದಂಡ ಕುಟುಂಬಸ್ಥರ ನೇತೃತ್ವದಲ್ಲಿ ಇಲ್ಲಿ ಹಾಕಿ ನಮ್ಮೆ ನಡೆಸಲಾಗುತ್ತಿದೆ. ಈ ಹಿಂದಿನ ಅವಧಿಯಲ್ಲಿ ನಡೆದಿದ್ದಂತೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಮೈದಾನದಲ್ಲೇ ಈ ಬಾರಿಯೂ ಒಂದು ತಿಂಗಳ ಕಾಲ ಹಾಕಿ ದಾಂಡು, ಬಾಲ್ ಹಾಗೂ ಅಭಿಮಾನಿಗಳ ಕಲರವ ಮಾರ್ಧನಿಸಲಿದೆ.
'ಕೊಡವ ಕೌಟುಂಬಿಕ ಹಾಕಿ ನಮ್ಮೆ'ಯ ನೇತೃತ್ವ ವಹಿಸಿಕೊಂಡು ನಡೆಸಿಕೊಡುವ ಜವಾಬ್ದಾರಿ ಪ್ರತಿ ವರ್ಷವೂ ಒಂದೊAದು ಕುಟುಂಬಗಳು ವಹಿಸಿಕೊಳ್ಳುತ್ತವೆ. ಈ ತನಕ 24 ಕೊಡವ ಕುಟುಂಬಗಳು ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿ ಹಾಕಿ ಹಬ್ಬಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟಿವೆ. ಕಳೆದ ವರ್ಷ ನಾಪೋಕ್ಲುವಿನಲ್ಲಿ ನಡೆದಿದ್ದ 'ಕೊಡವ ಕೌಟುಂಬಿಕ ಹಾಕಿ ನಮ್ಮೆ'ಯ ನೇತೃತ್ವವನ್ನು ಕುಂಡ್ಯೋಳAಡ ಕುಟುಂಬ ವಹಿಸಿಕೊಂಡಿತ್ತು. ಚಿಕ್ಕ ಕುಟುಂಬವಾದರೂ ಹಾಕಿ ಹಬ್ಬವನ್ನು ಚೊಕ್ಕವಾಗಿ, ಅಚ್ಚುಕಟ್ಟಾಗಿ ನಡೆಸಿಕೊಡುವ ಮೂಲಕ ಕುಂಡ್ಯೋಳAಡ ಕುಟುಂಬಸ್ಥರು ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ 25ನೇ ವರ್ಷದ 'ಕೊಡವ ಕೌಟುಂಬಿಕ ಹಾಕಿ ನಮ್ಮೆ' ನೇತೃತ್ವವನ್ನು ಮಡಿಕೇರಿಯ ಮುದ್ದಂಡ ಕುಟುಂಬ ವಹಿಸಿಕೊಂಡಿದೆ. ಇದೇ ರೀತಿ ಇನ್ನು ಮುಂದಿನ 8 ವರ್ಷದ ಕಾಲ ಪ್ರತಿ ವರ್ಷವೂ ಹಾಕಿ ಹಬ್ಬ ನಡೆಸಲು ಈಗಾಗಲೇ ಒಂದೊAದು ಕುಟುಂಬಗಳು ಜವಾಬ್ದಾರಿ ವಹಿಸಿಕೊಂಡಿರುವ ಬಗ್ಗೆ ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡAಡ ಬೋಪಣ್ಣ ಮಾಹಿತಿ ನೀಡಿದ್ದಾರೆ.
25ನೇ ವರ್ಷದ 'ಕೊಡವ ಕೌಟುಂಬಿಕ ಹಾಕಿ ನಮ್ಮೆ'ಯ ಪೂರ್ವಭಾವಿ ಚಟುವಟಿಕೆಗಳಿಗೆ ಮುದ್ದಂಡ ಕುಟುಂಬಸ್ಥರು ಈಗಾಗಲೇ ಚಾಲನೆ ನೀಡಿದ್ದಾರೆ. ಅಗತ್ಯವಿರುವ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಶುಕ್ರವಾರ (ನ.9) ಸಂಜೆ ಹಾಕಿ ನಮ್ಮೆಗೆ ಸಂಬAಧಿಸಿದ ವೆಬ್‌ಸೈಟ್ https://muddandahockeyfestival.in/ ಬಿಡುಗಡೆ ಮಾಡಲಾಗಿದೆ. ಈ ಬಾರಿ ಕೌಟುಂಬಿಕ ಹಾಕಿ ತಂಡಗಳು ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದ್ದು, ಇದಕ್ಕೆ ಈ ವೆಬ್‌ಸೈಟ್‌ನಲ್ಲಿ ಅವಕಾಶ ಮಾಡಿಕೊಡಲಾಗಿದೆ. ಇದರ ಜತೆಗೆ 'ಮುದ್ದಂಡ ಕಪ್ ಹಾಕಿ ನಮ್ಮೆ'ಗೆ ಸಂಬAಧಿಸಿದ ಎಲ್ಲಾ ವಿವರಗಳನ್ನು ಈ ವೆಬ್‌ಸೈಟ್‌ನಲ್ಲಿ ಕೊಡುವ ಪ್ರಯತ್ನ ಮಾಡಲಾಗಿದೆ. 'ಕೊಡವ ಕೌಟುಂಬಿಕ ಹಾಕಿ ನಮ್ಮೆ' ಬೆಳೆದು ಬಂದ ದಾರಿ, ಈ ಹಾಕಿ ಹಬ್ಬದ ಹೆಗ್ಗಳಿಕೆಗಳು, ಕೊಡವ ಹಾಕಿ ಅಕಾಡೆಮಿ, ಮುದ್ದಂಡ ಕುಟುಂಬ ಹಾಗೂ 'ಮುದ್ದಂಡ ಕಪ್ ಹಾಕಿ ನಮ್ಮೆ'ಗೆ ಸಂಬAಧಿಸಿದ ವ್ಯಕ್ತಿಗಳ ಮಾಹಿತಿ ಈ ವೆಬ್‌ಸೈಟ್‌ನಲ್ಲಿ ಇದೆ. ವೆಬ್‌ಸೈಟ್ ಬಿಡುಗಡೆ ಸಮಾರಂಭದಲ್ಲಿ ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡAಡ ಬೋಪಣ್ಣ, ಮುದ್ದಂಡ ಸ್ಪೋರ್ಟ್ಸ್ ಮತ್ತು ಚಾರಿಟೇಬಲ್ ಟ್ರಸ್ಟ್ ಗೌರವಾಧ್ಯಕ್ಷ ಮುದ್ದಂಡ ದೇವಯ್ಯ, ಅಧ್ಯಕ್ಷ ಮುದ್ದಂಡ ರಶಿತ್ ಸುಬ್ಬಯ್ಯ, ಕಾರ್ಯದರ್ಶಿ ಮುದ್ದಂಡ ಆದ್ಯತಿಮ್ಮಯ್ಯ, ಮುದ್ದಂಡ ಕುಟುಂಬದ ಪಟ್ಟೆದಾರ ಡಾಲಿ ತಿಮ್ಮಯ್ಯ, ಕುಟುಂಬದ ಪ್ರಮುಖರಾದ ಮುದ್ದಂಡ ರಾಯ್ ತಿಮ್ಮಯ್ಯ, ಡೀನ್ ಬೋಪಣ್ಣ, ಎಂ.ಎನ್. ದಿವ್ಯಾ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜೀರ ಅಯ್ಯಪ್ಪ, ಹಿರಿಯ ಪತ್ರಕರ್ತರಾದ ಜಿ. ರಾಜೇಂದ್ರ, ಉಳ್ಳಿಯಡ ಪೂವಯ್ಯ, ಚೋಕೀರ ಅನಿತಾ ದೇವಯ್ಯ, ಚೆಯ್ಯಂಡ ಭಜನ್ ಮತ್ತಿತರರು ಇದ್ದರು.
ಕಳೆದ ಬಾರಿ ನಾಪೋಕ್ಲುವಿನಲ್ಲಿ ನಡೆದಿದ್ದ ಕುಂಡ್ಯೋಳAಡ ಹಾಕಿ ನಮ್ಮೆಯಲ್ಲಿ 360 ಕೊಡವ ಕುಟುಂಬಗಳು ಆಡುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಾಣ ಆಗಿತ್ತು. ಈ ಬಾರಿ ಮುದ್ದಂಡ ಕುಟುಂಬ ಇನ್ನೂ ಚೆನ್ನಾಗಿ ಆಯೋಜನೆ ಮಾಡುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಈ ಬಾರಿ ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಕೊಡವ ಕುಟುಂಬಗಳು ಈ ಪಂದ್ಯಾವಳಿಯಲ್ಲಿ ಸೇರಿಸಲಿದ್ದಾರೆ.
ಪಾಂಡAಡ ಬೋಪಣ್ಣ, ಅಧ್ಯಕ್ಷ, ಕೊಡವ ಹಾಕಿ ಅಕಾಡೆಮಿ
ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಈಗಾಗಲೇ ಗಿನ್ನಿಸ್ ಬುಕ್‌ನಲ್ಲಿ ದಾಖಲಾಗಿದೆ. ನಮ್ಮ ಕುಟುಂಬದ ನೇತೃತ್ವದಲ್ಲಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ 400ಕ್ಕೂ ಹೆಚ್ಚು ಕುಟುಂಬಗಳ ತಂಡಗಳನ್ನು ಪಾಲ್ಗೊಳ್ಳುವಂತೆ ಮಾಡುವ ಮೂಲಕ ಮತ್ತೆ ಹೊಸ ದಾಖಲೆ ಮಾಡಲು ಪ್ರಯತ್ನಿಸಲಾಗುವುದು. ಈ ಬಾರಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ತಂಡಗಳು ಆನ್‌ಲೈನ್‌ನಲ್ಲಿ ನೊಂದಾಯಿಸುವ ಅವಕಾಶ ಮಾಡಿಕೊಡಲಾಗಿದೆ. ಜಗತ್ತಿನ ಎಲ್ಲಿ ಕುಳಿತು ಬೇಕಾದರೂ ಕುಟುಂಬದ ತಂಡಗಳು ನೋಂದಾವಣಿ ಮಾಡಿಕೊಳ್ಳಬಹುದಾಗಿದೆ.
ಮುದ್ದಂಡ ರಶಿತ್ ಸುಬ್ಬಯ್ಯ, ಅಧ್ಯಕ್ಷ, ಮುದ್ದಂಡ ಸ್ಪೋರ್ಟ್ಸ್ ಮತ್ತು ಚಾರಿಟೇಬಲ್ ಟ್ರಸ್ಟ್
ಈ ಹಾಕಿ ಹಬ್ಬದಲ್ಲಿ ಜಾತಿ, ಭಾಷೆ, ದೇಶ, ಪ್ರಾಂತ್ಯ ಭೇದವಿಲ್ಲದೆ ಎಲ್ಲರೂ ಪಾಲ್ಗೊಳ್ಳುವ ವಾತಾವರಣವನ್ನು ಈ ಬಾರಿ ಕಲ್ಪಿಸಲಾಗುವುದು. ಇದನ್ನೊಂದು ಉತ್ಸವದ ರೀತಿಯಲ್ಲಿ ಆಯೋಜಿಸಲು ಚಿಂತನೆ ನಡೆಸಲಾಗಿದೆ. ನಮ್ಮ ಕುಟುಂಬದ ಯುವಕರು ಈ ನಿಟ್ಟಿನಲ್ಲಿ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಮಹಿಳಾ ಹಾಕಿ ಮತ್ತು ಬಂದೂಕು ಹಬ್ಬ ಆಯೋಜಿಸುವ ಚಿಂತನೆಯೂ ಇದೆ.
ಮುದ್ದಂಡ ದೇವಯ್ಯ, ಗೌರವಾಧ್ಯಕ್ಷ, ಮುದ್ದಂಡ ಸ್ಪೋರ್ಟ್ಸ್ ಮತ್ತು ಚಾರಿಟೇಬಲ್ ಟ್ರಸ್ಟ್
'ಮುದ್ದಂಡ ಕಪ್ ಹಾಕಿ ನಮ್ಮೆ'ಯನ್ನು ವಿಭಿನ್ನತೆಯೊಂದಿಗೆ ಸ್ಮರಣೀಯವಾಗಿ ಸಂಭ್ರಮಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಒಂದು ತಿಂಗಳ ಕಾಲ ನಡೆಯುವ ಈ ಹಬ್ಬವನ್ನು ಸುಲಲಿತವಾಗಿ ಸಂಘಟಿಸಲು ಯೋಜನೆ ರೂಪಿಸಲಾಗಿದೆ. ಈ ಹಿಂದೆ ಪಂದ್ಯಾವಳಿಗಳ ನೇತೃತ್ವ ವಹಿಸಿದ್ದ ಕುಟುಂಬಗಳು ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದು, ಅವರ ಕಾರ್ಯವೈಖರಿ ನಮಗೆ ಮಾದರಿಯಾಗಿದೆ.
ಮುದ್ದಂಡ ದಿವ್ಯಾ ಉತ್ತಯ್ಯ, ಜಂಟಿ ಖಜಾಂಚಿ, ಮುದ್ದಂಡ ಸ್ಪೋರ್ಟ್ಸ್ ಮತ್ತು ಚಾರಿಟೇಬಲ್ ಟ್ರಸ್ಟ್