ಮುದ್ದಲಿಂಗನಹಳ್ಳಿ ಡೇರಿಗೆ 16.62 ಲಕ್ಷ ರೂ. ಲಾಭ

13 09 2025_BGR RURAL_PAGE_5B
ನೆಲಮಂಗಲ ತಾಲೂಕಿನ ಮುದ್ದಲಿಂಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂದಲ್ಲಿ ಬಿಜಿಎಸ್​ ಆಸ್ಪತ್ರೆ ಸಹಯೋಗದಲ್ಲಿ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ಪದನಿಮಿತ್ತ ನಿರ್ದೇಶಕ ಚಲುವರಂಗಯ್ಯ, ಡೇರಿ ಉಪಾಧ್ಯಕ್ಷ ಜನಾರ್ಧನ್​, ನಿರ್ದೇಶಕರಾದ ಟಿ.ಡಿ.ನರಸಿಂಹಮೂರ್ತಿ, ಎಂ.ದೇವರಾಜು, ಗಂಗಾಧರಯ್ಯ, ಚಂದ್ರಶೇಖರ್​, ಲ್ಮಕಾಂತ್​, ಎಸ್​.ಗೋಪಾಲ್​ ಇದ್ದರು.
Published on

ತ್ಯಾಮಗೊಂಡ್ಲು : ಸಹಕಾರ ಸಂ ಇರುವುದೇ ರೈತರ ಅನುಕೂಲಕ್ಕೆ. ಸಂಸ್ಥೆಯಿಂದ ಹಾಲು ಉತ್ಪಾದಕರಿಗೆ ಮತ್ತು ಅವರ ಕುಟುಂಬಕ್ಕೆ ಹಲವು ಯೋಜನೆ ಜಾರಿ ಮಾಡಲಾಗಿದೆ. ಇದೀಗ ಆರೋಗ್ಯ ಶಿಬಿರವನ್ನೂ ಏರ್ಪಡಿಸಿದ್ದು, ಸದಸ್ಯರು ಅದರ ಸದುಪಯೋಗ ಮಾಡಿಕೊಳ್ಳಬೇಕಿದೆ ಎಂದು ಮುದ್ದಲಿಂಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂದ ಅಧ್ಯಕ್ಷ ಎಂ.ಸುರೇಶ್​ ಹೇಳಿದರು.

ನೆಲಮಂಗಲ ತಾಲೂಕಿನ ಮುದ್ದಲಿಂಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂದಲ್ಲಿ ಬುಧವಾರ ಆಯೋಜಿಸಿದ್ದ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಹಾಲು ಉತ್ಪಾದಕರು ಗುಣಮಟ್ಟದ ಹಾಲು ಉತ್ಪಾದಿಸಿ ಡೇರಿಗೆ ಸರಬರಾಜು ಮಾಡುವುದರಿಂದ ಅದರಿಂದ ಬರುವ ಲಾಭವನ್ನು ಬೋನಸ್​ ರೂಪದಲ್ಲಿ ಮತ್ತೆ ಉತ್ಪಾದಕರೇ ಪಡೆಯಬಹುದು ಎಂದರು.

ಈ ವರ್ಷ ಸಂದ ಒಟ್ಟು ವ್ಯಾಪಾರ ಲಾಭ 16.62 ಲಕ್ಷ ರೂ., ಹಾಗೂ 4.98 ಲಕ್ಷ ನಿವ್ವಳ ಲಾಭ ಬಂದಿದೆ. ಅದರಲ್ಲಿ 2.34 ಲಕ್ಷ ರೂಪಾಯಿ ಹಣ ಸದಸ್ಯರಿಗೆ ಬೋನಸ್​ ಕೊಡಲಾಗುತ್ತದೆ. 2024&25ರಲ್ಲಿ ಮರಣ ಹೊಂದಿದ ಸಂದ 8 ಸದಸ್ಯರ ಕುಟುಂಬದವರಿಗೆ ತಲಾ 5 ಸಾವಿರದಂತೆ ಸಹಾಯ ಧನ, 69 ವರ್ಷ ಒಳಪಟ್ಟ ಇಬ್ಬರಿಗೆ ಬಮುಲ್​ ವಿಮೆಯಿಂದ ತಲಾ ಒಂದು ಲಕ್ಷ ಹಾಗೂ 70 ವರ್ಷ ಮೇಲ್ಪಟ್ಟ 6 ಮೃತರಿಗೆ ಒಕ್ಕೂಟದಿಂದ 25 ಸಾವಿರ ರೂ. ಪರಿಹಾರ ನೀಡಲಾಗಿದೆ. ವಿಮೆ ಇಲ್ಲದ 8 ಹಸುಗಳು ಮರಣ ಹೊಂದಿದ್ದರಿಂದ ತಲಾ 5 ಸಾವಿರ ರೂ., 5 ಕರುಗಳಿಗೆ ತಲಾ ಮೂರು ಸಾವಿರ ರೂ., ಸಂದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಒಟ್ಟು 9 ಸಾವಿರ ಪ್ರತಿಭಾ ಪುರಸ್ಕಾರ ಹಾಗೂ ಹೆಚ್ಚು ಹಾಲು ಹಾಕಿದ 5 ಸದಸ್ಯರಿಗೆ ಬಹುಮಾನವಾಗಿ 15 ಸಾವಿರ ರೂ. ನಗದು ನೀಡಲಾಗಿದೆ ಎಂದು ಸಿಇಒ ಎಂ.ಜಿ.ತಿಮ್ಮೇಗೌಡ ಮಾಹಿತಿ ನೀಡಿದರು.

ಹೆಚ್ಚು ಹಾಲು ಪೂರೈಸಿದ ಗಂಗಾಂಬಿಕೆ, ರಿಯಾಜ್​ ಪಾಷಾ, ಈರಣ್ಣಾ, ರಾಜಶೇಖರ್​, ದೇವರಾಜು ಅವರಿಗೆ ಬಹುಮಾನ ನೀಡಲಾಯಿತು. ಆರೋಗ್ಯ ಶಿಬಿರದಲ್ಲಿ 251 ಹಾಲು ಉತ್ಪಾದಕರ ತಪಾಸಣೆ ನಡೆಸಿ, ಔಷಧ ವಿತರಿಸಲಾಯಿತು. ದೃಷ್ಠಿ ನ್ಯೂನತೆಯುಳ್ಳ 8 ಜನರಿಗೆ ಉಚಿತ ಶಸಚಿಕಿತ್ಸೆಗೆ ಕರೆದೊಯ್ಯಲಾಯಿತು. ಡಾ.ಪ್ರೀತಮ್​.ಕೆ.ಡಿ, ಡಾ.ಪ್ರಿಯಾ, ಡಾ.ಪವನ್​, ಡಾ.ಅಜಯ್​ ದೀತ್​, ಪಿಆರ್​ಒ ಗಳಾದ ಸಂಜಯ್​ ಕುಮಾರ್​, ಬಿ.ಎಂ.ಸುಹಾಸ್​, ಗಂಗನರಸಯ್ಯ, ಮನುಚಾರ್​ ಶಿಬಿರ ನಿರ್ವಹಿಸಿದರು. ಡೇರಿ ನಿರ್ದೇಶಕರಾದ ರಿಯಾಜ್​ಪಾಷಾ, ಗೌರಮ್ಮ, ನಸರತ್​ ಜರೀನ್​, ಸತೀಶ್​ಕುಮಾರ್​, ಚಿಕ್ಕತಿಮ್ಮಯ್ಯ, ಹಾಲು ಪರೀಕ್ಷಕ ಕುಮಾರ ಮುಖಂಡರಾದ ಗಿರೀಶ್​, ಹನುಮಂತರಾಯಪ್ಪ, ಗಂಗಾಧರಯ್ಯ, ಗ್ರಾಪಂ ಸದಸ್ಯ ಕುಮಾರ್​ ಹಾಗೂ ಷೇರುದಾರರು, ಕಿರಣ್​, ರಮೇಶ್​ಬಾಬು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net