

ಮುದಗಲ್: ಸಮೀಪದ ತುರಡಗಿ-ಕಿಡದುರು ಗ್ರಾಮದ ಸಾಧ್ವಿ ತಿಮ್ಮಮ್ಮನವರ (ಅಮ್ಮನ ಕಟ್ಟೆ) ಜಾತ್ರೆಯನ್ನು ಕರೊನಾ ಮುಂಜಾಗ್ರತಾ ಕ್ರಮವಾಗಿ ಈ ವರ್ಷವೂ ರದ್ದು ಮಾಡಲಾಗಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.
ಫೆ.1ರಿಂದ 3ರವರೆಗೆ ಅತ್ಯಂತ ವಿಜೃಂಭಣೆಯಿಂದ ನಡೆಯುತಿದ್ದ ಆರಾಧನೆ ಮತ್ತು ಜಾತ್ರಾ ಉತ್ಸವವನ್ನು ಸರಳ ರೀತಿಯಲ್ಲಿ ಆಚರಿಸಲಾಗುತ್ತಿದೆ. ಅರ್ಚಕರ ನೇತೃತ್ವದಲ್ಲಿ ಧಾರ್ಮಿಕ ಪೂಜೆ, ಇತರ ಕಾರ್ಯಕ್ರಮಗಳು ನಡೆಯಲಿವೆ. ಆದರೆ ಉತ್ಸವ, ಅಂಗಡಿ ಮುಂಗಟ್ಟುಗಳನ್ನು ತೆರೆಯುವುದು, ಜವಳ, ಮದುವೆ, ದೀರ್ಘ ದಂಡ ನಮಸ್ಕಾರ, ಮನೋರಂಜನಾ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ.