ದೇವಸ್ಥಾನ ತಡೆಗೋಡೆ ನಿರ್ಮಾಣಕ್ಕೆ 5 ಲಕ್ಷ ರೂ.

29102022 mudagal temple construction
Published on

ಮುದಗಲ್: ನಾಗರಹಾಳ್‌ನಲ್ಲಿ ಶ್ರೀ ಸಿದ್ದರಾಮೇಶ್ವರ ದೇವಸ್ಥಾನದ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್ ಭೂಮಿ ಪೂಜೆ ನೇರೆವೇರಿಸಿದರು.

ಕಂಪನಿಯಿಂದ ತಾಲೂಕಿನ ದೇವಸ್ಥಾನ ಜೀರ್ಣೋದ್ಧಾರ, ರಂಗಮಂದಿರ, ರಸ್ತೆ ಸೇರಿದಂತೆ ಇತರೆ ನಿರ್ಮಾಣಕ್ಕೆ ಮೂರು ಕೋಟಿ ರೂ. ಅನುದಾನ ನೀಡಲಾಗಿದೆ. ಶ್ರೀ ಸಿದ್ದರಾಮೇಶ್ವರ ದೇವಸ್ಥಾನದ ತಡೆಗೋಡೆಗೆ ಐದು ಲಕ್ಷ ರೂ. ನೀಡಲಾಗಿದ್ದು, ಗ್ರಾಮಸ್ಥರ ಸಹಕಾರದೊಂದಿಗೆ ಗುಣಮಟ್ಟದ ಕಾಮಗಾರಿ ನಡೆಯಲಿ. ಮುಂದಿನ ದಿನಗಳಲ್ಲಿ ಲಿಂಗಸುಗೂರು ಪಟ್ಟಣವನ್ನು ಜಿಲ್ಲಾ ಕೇಂದ್ರವನ್ನಾಗಿಸಲು ಶ್ರಮಿಸಲಾಗುವುದು ಎಂದು ವಜ್ಜಲ್ ಹೇಳಿದರು.

ಇದಕ್ಕೂ ಮುಂಚೆ ತುಂಬಲಗಡ್ಡಿ ಬಸವೇಶ್ವರ ವೃತ್ತದಿಂದ ದೇವಸ್ಥಾನದವರೆಗೆ ಕುಂಭ, ಕಳಸ, ಡೊಳ್ಳು, ವಾದ್ಯ ಮೇಳದೊಂದಿಗೆ ಮಾನಪ್ಪ ವಜ್ಜಲ್‌ರನ್ನು ಮೆರವಣಿಗೆ ಮಾಡಲಾಯಿತು. ತಾಲೂಕ ಬಿಜೆಪಿ ಅಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಪ್ರಮುಖರಾದ ಹನಮಂತಪ್ಪ ತೊಗರಿ, ಈರಮ್ಮ ಬೋವಿ, ಲಕ್ಷ್ಮವ್ವ, ರಾಮನಗೌ ಪಾಟೀಲ್, ಶಿವನಗೌಡ ಪಾಟೀಲ್, ಹುಲ್ಲೇಶ ಸಾಹುಕಾರ, ಮುದಕಪ್ಪ ನಾಯಕ, ಶರಣಬಸವ ಗುಡದನಾಳ, ಹೊನ್ನಪ್ಪ ದೇಸಾಯಿ, ದ್ಯಾಮಣ್ಣ ನಾಯಕ, ಬೀಮಣ್ಣ ಹಿರೇಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net