

ಮುದಗಲ್: ಸ್ಥಳೀಯ ಪುರಸಭೆ ಸಭಾಂಗಣದಲ್ಲಿ ಪುರಸಭೆ ಸದಸ್ಯರು ಹಾಗೂ ಪೌರ ಕಾರ್ಮಿಕರು, ಸಿಬ್ಬಂದಿ ಸ್ವಚ್ಛತಾ ಆಂದೋಲನ ಕುರಿತು ಬುಧವಾರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ನೈರ್ಮಲ್ಯಾಧಿಕಾರಿ ಆರೀಪುನ್ನಿಸಾ ಬೇಗಂ ಪ್ರತಿಜ್ಞಾ ವಿಧಿ ಬೋಧಿಸಿದರು. ಗ್ರಾಮ, ಪಟ್ಟಣ, ವಾರ್ಡ್ ಹಾಗೂ ಸುತ್ತಲಿನ ಪರಿಸರವನ್ನು ಶುಚಿಯಗಿಟ್ಟುಕೊಳ್ಳುವ ಎಲ್ಲರ ಮೂಲ ಧೇಯೋದ್ದೇಶವಾಗಲಿ ಎಂದು ಅರಿವು ಮೂಡಿಸಲಾಯಿತು. ನಂತರ ಪುರಸಭೆ ಪೌರ ಕಾರ್ಮಿಕರು ಪಟ್ಟಣದ ವಿವಿಧ ವಾರ್ಡ್‌ಗಳಿಗೆ ಸಂಚರಿಸಿ ಘೋಷಣೆಗಳನ್ನು ಕೂಗಿ ಸ್ವಚ್ಛ ನಗರಕ್ಕೆ ನಾಂದಿ ಹಾಡಲು ನಮ್ಮೊಂದಿಗೆ ಕೈಜೋಡಿಸಿ ಎಂದು ಮನವಿ ಮಾಡಿದರು.