ತುಂತುರು ಮಳೆಯಿಂದ ಜನಜೀವನ ಅಸ್ತವ್ಯಸ್ತ

mudagal rain
ತುಂತುರು ಮಳೆಯಿಂದ ಮುದಗಲ್ ಸಮೀಪದ ಕನ್ನಾಪುರಹಟ್ಟಿಯಲ್ಲಿ ಸಜ್ಜೆ ಮತ್ತು ತೊಗರಿ ಬೆಳೆ ಹಸಿರಿನಿಂದ ಕೂಡಿರುವುದು.
Published on

ಮುದಗಲ್: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ತುಂತುರ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.

ಮಳೆಯಿಂದ ಮುಂಗಾರು ಬೆಳೆಗಳಿಗೆ ಅನುಕೂಲವಾಗಿದೆ. ತೊಗರಿ, ಸಜ್ಜೆ, ಹೆಸರು, ಸೂರ್ಯಕಾಂತಿ ಬೆಳೆಗಳು ಹಸಿರಿನಿಂದ ಕಂಗೊಳಿಸುತ್ತಿವೆ. ಆದರೆ, ಮಳೆಯಿಂದಾಗಿ ಜನರು ಮನೆಯಿಂದ ಹೊರ ಬರದಂತಾಗಿದೆ. ಮಳೆಯಿಂದಾಗಿ ಮೊಹರಂ ಆಚರಣಿಗೆ ಅಡ್ಡಿಯಾಗುವ ಆತಂಕ ಎದುರಾಗಿದೆ. ಮೊಹರಂ ಕೊನೆಯ ದಿನವಾದ ಜು.29 ರಂದು ಲಕ್ಷಾಂತರ ಜನರು ಸೇರುವುದರಿಂದ ತುಂತುರು ಮಳೆ ಮುಂದುವರಿದರೆ ಹಬ್ಬದ ಸಂಭ್ರಮಕ್ಕೆ ತೊಡಕು ಆಗುವ ಸಾಧ್ಯತೆಗಳಿವೆ.

ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ


ರಾಯಚೂರು: ಜಿಲ್ಲೆಯಲ್ಲಿ ಮೂರ‌್ನಾಲ್ಕು ದಿನಗಳಿಂದ ಸುರಿದ ಮಳೆ ಭಾನುವಾರ ವಿರಾಮ ನೀಡಿದ್ದು, ಮೋಡ ಕವಿದ ವಾತಾವರಣ ಇತ್ತು. ಶನಿವಾರದಿಂದ ಭಾನುವಾರ ಬೆಳಗಿನ ಜಾವದವರೆಗೆ ಜಿಲ್ಲೆಯಲ್ಲಿ ಸರಾಸರಿ 2.5 ಮಿ.ಮೀ. ಮಳೆಯಾಗಿದೆ. ರಾಯಚೂರು ತಾಲೂಕಿನಲ್ಲಿ 1 ಮಿ.ಮೀ., ದೇವದುರ್ಗ 0.3, ಲಿಂಗಸುಗೂರು 2.4, ಮಾನ್ವಿ 4.3, ಸಿಂಧನೂರು 1.9, ಮಸ್ಕಿ 4.3, ಸಿರವಾರ ತಾಲೂಕಿನಲ್ಲಿ 3.2 ಮಿ.ಮೀ. ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net