ಮುದಗಲ್: ಸಂಭ್ರಮದ ಎಳ್ಳ ಅಮಾವಾಸ್ಯೆ ಆಚರಣೆ

231222 Mudgal Yelli Amavase Charaga
ಮುದಗಲ್ ಸಮೀಪದ ಕನ್ನಾಪುರಹಟ್ಟಿಯ ಜಮೀನೊಂದರಲ್ಲಿ ರೈತರು ಹಿಂಗಾರು ಬೆಳೆಗೆ ಪೂಜೆ ಸಲ್ಲಿಸಿ ಎಳ್ಳ ಅಮಾವಾಸ್ಯೆ ಚರಗಾ ಹಬ್ಬವನ್ನು ಗುರುವಾರ ಸಂಭ್ರಮದಿಂದ ಆಚರಿಸಿದರು.
Published on

ಮುದಗಲ್: ಹಿಂಗಾರು ಹಂಗಾಮಿನ ಎಳ್ಳ ಅಮವಾಸ್ಯೆಯ ಚರಗ ಹಬ್ಬವನ್ನು ಶುಕ್ರವಾರ ರೈತರು ಸಂಭ್ರಮದಿಂದ ಆಚರಿಸಿದರು. ಎಳ್ಳು, ಶೇಂಗಾ ಹೋಳಿಗೆ, ಸಜ್ಜೆ ರೊಟ್ಟಿ, ಕಾಳು ಪಲ್ಯ, ಹಪ್ಪಳ, ಸಂಡಿಗೆ ಹೀಗೆ ಬಗೆಯ ಖಾದ್ಯ ತಯಾರಿಸಿದ್ದ ಮಹಿಳೆಯರು, ಕುಟುಂಬ ಸಮೇತ ತಮ್ಮ ತಮ್ಮ ಜಮೀನುಗಳಿಗೆ ತೆರಳಿ ಭೂತಾಯಿಗೆ ಪೂಜೆ ಸಲ್ಲಿಸಿ ಸಾಮೂಹಿಕ ಭೋಜನ ಸವಿದರು. ರೈತ ಸಂಗಾತಿ ಆಗಿರುವ ರಾಸುಗಳಿಗೆ ಸಿಂಗರಿಸಿ ಕೃಷಿಕರು ಎತ್ತಿನ ಬಂಡಿಯಲ್ಲಿ ಜಮೀನುಗಳಿಗೆ ತೆರಳುತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹಿಂಗಾರು ಮುಖ್ಯ ಬೆಳೆಯಾದ ಬಿಳಿ ಜೋಳ, ಕಡಲೆ ಈ ವರ್ಷ ಉತ್ತಮವಾಗಿ ಬೆಳೆದಿರುವುದು ಎಳ್ಳ ಅಮಾವಾಸ್ಯೆ ಸಂಭ್ರಮ ಇಮ್ಮಡಿಗೊಳಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net