ಸಮರ್ಪಕ ಸೇವೆಯೇ ಜೆಸ್ಕಾಂ ಗುರಿ

06112022 mudagal gescom meeting
Published on

ಮುದಗಲ್: ಗ್ರಾಹಕರಿಗೆ ತೊಂದರೆ ಆಗದ ರೀತಿಯಲ್ಲಿ ಜೆಸ್ಕಾಂ ಶ್ರಮಿಸುತ್ತಿದ್ದು ನಾಗರಿಕರ ಸಹಕಾರ ಅವಶ್ಯ ಎಂದು ಲಿಂಗಸುಗೂರು ಜೆಸ್ಕಾಂ ಎಇಇ ಕೆಂಚಪ್ಪ ಬಾವಿಮನಿ ಹೇಳಿದರು.

ಪಟ್ಟಣದ ಜೆಸ್ಕಾಂ ಕಚೇರಿ ಆವರಣದಲ್ಲಿ ಶನಿವರ ವಿದ್ಯುತ್ ಗ್ರಾಹಕರ ಕುಂದು ಕೊರತೆ ಸಂವಾದ ಸಭೆಯಲ್ಲಿ ಮಾತನಾಡಿ, ಜೆಸ್ಕಾಂನಿಂದ ಗಂಗಾ ಕಲ್ಯಾಣ ಯೋಜನೆ, ಬೆಳಕು ಯೋಜನೆಯಡಿ ಎಸ್ಸಿ, ಎಸ್ಟಿ ಸಮುದಾಯದವರಿಗೆ ಉಚಿತ ವಿದ್ಯುತ್ ನೀಡಲಾಗುವುದು. ಕುಡಿಯುವ ನೀರು ಪೂರೈಸಲು ವಿದ್ಯುತ್ ಸಂಪರ್ಕ ಕಲ್ಪಿಸುವುದು ಸೇರಿ ವಿವಿಧ ಯೋಜನೆಗಳನ್ನು ಸಾರ್ವಜನಿಕರಿಗೆ ಒದಗಿಸಲಾಗುವುದು ಎಂದರು.

ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಹಾಗೂ ಕಂಬಗಳನ್ನು ಸರಿಪಡಿಸುವಂತೆ ಸಾರ್ವಜನಿಕರು ಮನವಿ ಸಲ್ಲಿಸಿದರು. ಮುದಗಲ್ ಜೆಸ್ಕಾಂ ಶಾಖಾಧಿಕಾರಿ ಸಂತೋಷ ಸಿಂಘೆ, ಸಿಬ್ಬಂದಿ ಮಂಜುನಾಥ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶಬ್ಬೀರ್ ಪಾಷ, ಸದಸ್ಯರಾದ ಮೈಬೂಬ್‌ಸಾಬ್ ಕಡ್ಡಿಪುಡ್ಡಿ, ತಸ್ಲೀಂ ಹೈದರ್‌ಮುಲ್ಲಾ, ಬಾಬು ಉಪ್ಪಾರ, ದೇವರಾಜ, ರುದ್ರಗೌಡ ಹೂನೂರು, ಗಿರೀಶ, ರಘುವೀರ ಚಲುವಾದಿ, ಹುಸೇನ್ ಬಾಷಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net