

ಮಂಗಳೂರು: ನಗರದ ಉರ್ವಸ್ಟೋರ್‌ನಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ದ್ವಿತೀಯ ದರ್ಜೆ ಸಹಾಯಕರೊಬ್ಬರು ಶುಕ್ರವಾರ ಕಚೇರಿ ಸ್ಟೋರ್ ರೂಮ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರನ್ನು ಅಳಪೆ ನಿವಾಸಿ ಕೀರ್ತನ್ (30) ಎಂದು ಗುರುತಿಸಲಾಗಿದೆ. ಇವರು ಮುಡಾ ಕಚೇರಿಯಲ್ಲಿ ನೌಕರನಾಗಿದ್ದು, ಇತ್ತಿಚೆಗೆ ದ್ವಿತೀಯ ದರ್ಜೆ ಸಹಾಯಕರಾಗಿ ಭಡ್ತಿ ಪಡೆದಿದ್ದರು. ಬೆಳಗ್ಗೆ 9.30ರ ಸುಮಾರಿಗೆ ಕೀರ್ತನ್ ಅವರು ಕಚೇರಿಗೆ ಬಂದು ತಮ್ಮ ಸಹೋದ್ಯೋಗಿಗಳೊಂದಿಗೆ ಮಾತನಾಡಿದ್ದರು. ಸ್ವಲ್ಪ ಸಮಯದ ನಂತರ ಕೀರ್ತನ್ ನಾಪತ್ತೆಯಾಗಿದ್ದು, ಚಹಾ ಕುಡಿಯಲು ಹೊರಗೆ ಹೋಗಿರಬಹುದು ಎಂದು ಕಚೇರಿ ಸಿಬ್ಬಂದಿ ಭಾವಿಸಿದ್ದರು. ಆದರೆ ಮಧ್ಯಾಹ್ನ 12 ಗಂಟೆಯಾದರೂ ವಾಪಸ್ ಬಂದಿರಲಿಲ್ಲ.
ನಂತರ ಕಚೇರಿ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದು, ಅವರ ಮೊಬೈಲ್ ಲೊಕೇಶನ್ ಪತ್ತೆ ಹಚ್ಚಲು ಪ್ರಯತ್ನಿಸಿದಾಗ ಮಧ್ಯಾಹ್ನ 12.30ರ ವೇಳಗೆ ಅದು ಮುಡಾ ಆವರಣದಲ್ಲಿರುವುದನ್ನು ತೋರಿಸಿತ್ತು. ಪೊಲೀಸರು ಮತ್ತು ಸಹೋದ್ಯೋಗಿಗಳು ಕೀರ್ತನ್‌ಗಾಗಿ ಹುಡುಕಾಟ ನಡೆಸಿದಾಗ ಸ್ಟೋರ್ ರೂಮ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದನ್ನು ನೋಡಿದ ಕಚೇರಿ ಸಿಬ್ಬಂದಿ ದಿಗ್ಭ್ರಮೆಗೊಂಡಿದ್ದಾರೆ.
ಕೀರ್ತನ್ ಈ ಹಿಂದೆ ಡೆಂೆ ಜ್ವರಕ್ಕೆ ತುತ್ತಾಗಿ ಕಾಲಿನ ಬಲ ಕಳೆದುಕೊಂಡು ನಡೆಯಲು ಕಷ್ಟ ಪಡುತ್ತಿದ್ದರು. ಇದರಿಂದ ಮಾನಸಿಕವಾಗಿ ಬೇಸತ್ತು ಆತ್ಮಹತ್ಯೆ ಮಾಡಿಕೊಂಡರೇ ಅಥವಾ ಇನ್ಯಾವುದೋ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡರೇ ಎಂಬುದು ಗೊತ್ತಾಗಿಲ್ಲ. ಮೃತ ಕೀರ್ತನ್ ಪತ್ನಿ ಉಪನ್ಯಾಸಕಿಯಾಗಿದ್ದು, ಏಕೈಕ ಪುತ್ರಿ ಎಲ್‌ಕೆಜಿ ಓದುತ್ತಿದ್ದಾಳೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.