

ಮೈಸೂರು: ಮುಡಾದಲ್ಲಿ ಅಕ್ರಮ ಮಾಡಿರೋರ ವಿಚಾರ ಆಚೆಗೆ ಬರುತ್ತಿಲ್ಲ, ಅಕ್ರಮ ಮಾಡದೇ ಇರೋರರ ಬಗ್ಗೆ ಪ್ರತಿನಿತ್ಯ ಚರ್ಚೆ ಆಗುತ್ತಿದೆ ಎಂದು ಶಾಸಕ ಜಿ.ಟಿ. ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಮೀನಿನ ಭೂ ಮಾಲೀಕರೇ ಇದಕ್ಕೆ ಸ್ಪಷ್ಟನೆ ನೀಡಿ ದ್ದಾರೆ. ನಾನು ಹಾಗೂ ನನ್ನ ಪುತ್ರ ಹರೀಶ್ ಗೌಡ ಪಾತ್ರ ಇಲ್ಲ ಎಂದಿದ್ದಾರೆ. ನಾವು ಯಾವುದೇ ಅಕ್ರಮ ಮಾಡಿಲ್ಲ. ಮೈಸೂರು ಮಹಾರಾಜರು ಕಟ್ಟಿದ ಮುಡಾದಲ್ಲಿ ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿದೆ. ಮುಡಾದಲ್ಲಿ ಸಾರ್ವಜನಿಕರ ಕೆಲಸ ಆಗಬೇಕು. ಮುಡಾ ಅಭಿವೃದ್ಧಿ ಆಗಬೇಕು. ಈಗಾಗಲೇ ಲೋಕಾಯುಕ್ತ, ಇಡಿ, ಸರ್ಕಾರ ನೇಮಕ ಮಾಡಿರುವ ತನಿಖಾ ಸಂಸ್ಥೆಯಿಂದ ತನಿಖೆ ನಡೆಯುತ್ತಿದೆ. ಸತ್ಯಾಸತ್ಯತೆ ಆಚೆ ಬರಬೇಕಿದೆ ಎಂದರು.
ರಾಜ್ಯದಲ್ಲಿ ಕೊರೊನಾ ವೈರಸ್‌ನಂತೆ ಮೈಕ್ರೋ ಫೈನಾನ್ಸದ್ ಹರಡಿದೆ. ರಾಜ್ಯ ಸರ್ಕಾರ ಸುಗ್ರೀವಾಜ್ಞೆ ತರಲು ಮುಂದಾಗಿದೆ. ರಾಜ್ಯ ಸರ್ಕಾರದ ನಿರ್ಧಾರವನ್ನ ಸ್ವಾಗತ ಮಾಡುತ್ತೇವೆ. ಸುಗ್ರೀವಾಜ್ಞೆ ಮೂಲಕ ಮೈಕ್ರೋ ಫೈನಾನ್ಸ್‌ಗಳಿಗೆ ಕಡಿವಾಣ ಹಾಕಬೇಕು. ಇದರ ಜತೆಗೆ ಸುಗ್ರೀವಾಜ್ಞೆ ದುರುಪಯೋಗ ಆಗುವುದನ್ನು ತಡೆಗಟ್ಟಬೇಕು. ಆ ನಿಟ್ಟಿನಲ್ಲೂ ರಾಜ್ಯ ಸರ್ಕಾರ ಕ್ರಮ ವಹಿಸಲಿ ಎಂದರು.