

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣ ಸಂಬಂಧ ಶಾಸಕ ಟಿ.ಎಸ್.ಶ್ರೀವತ್ಸ ರಾಜ್ಯಪಾಲರು ಮತ್ತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರಿಗೆ ಪತ್ರ ಬರೆದಿದ್ದು, ಪ್ರಕರಣವನ್ನು ಕೂಲಂಕಷವಾಗಿ ಪರೀಶಿಲಿಸಿ ನ್ಯಾಯವನ್ನು ಎತ್ತ ಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ.
ಮುಡಾದಲ್ಲಿ ಸಾವಿರಾರು ಕೋಟಿ ರೂ. ಹಗರಣ ನಡೆದಿದೆ ಎಂದು ಸಾರ್ವಜನಿಕರಿಂದ ಅನಾಮಧೇಯ ಪತ್ರಗಳು ಮತ್ತು ದಾಖಲೆಗಳು ಬಂದಿದ್ದು, ಇದನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ನಗರಾಭಿವೃದ್ಧಿ ಇಲಾಖೆ ಅಪರ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದೆ. ಆದರೆ ಅವರಿಂದ ಯಾವುದೇ ನ್ಯಾಯ ನಿರೀಕ್ಷಣೆ ಸಾಧ್ಯವಿಲ್ಲದ ಕಾರಣ ನಿಮಗೆ ಪತ್ರ ಬರೆದಿದ್ದು, ತಾವು ಕೂಲಂಕಷವಾಗಿ ಪ್ರಕರಣವನ್ನು ಪರೀಶಿಲಿಸಿ ನ್ಯಾಯವನ್ನು ಎತ್ತ ಹಿಡಿಯಬೇಕಾಗಿ ಮನವಿ ಮಾಡುವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಜತೆಗೆ ತನಿಖೆಗೆ ನನ್ನ ಬಳಿ ಇರುವ ಅಗತ್ಯ ಮಾಹಿತಿ ಮತ್ತು ದಾಖಲೆಯನ್ನು ಒದಗಿಸಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.