ಮುಡಾ ಅಧ್ಯಕ್ಷ ಮರಿಗೌಡ ಆಸ್ಪತ್ರೆಗೆ ದಾಖಲು

chamundeshwari_ congrace_ marigouda (1)
Published on

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮರಿಗೌಡ ಅಧಿಕ ರಕ್ತದೊತ್ತಡದಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಇದೀಗ ಅವರ ಆರೋಗ್ಯ ಚೇತರಿಸಿಕೊಳ್ಳುತ್ತಿದೆ.

ಮರಿಗೌಡ ಅವರಿಗೆ ಸೋಮವಾರ ಅಧಿಕ ರಕ್ತದೊತ್ತಡ ಕಾಣಿಸಿಕೊಂಡ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಇದೀಗ ಅವರ ರಕ್ತದೊತ್ತಡ ಬಹುತೇಕ ಹತೋಟಿಗೆ ಬಂದಿದೆ. ಮುಡಾ ಹಗರಣದ ಕುರಿತು ರಾಜ್ಯಾದ್ಯಂತ ಬಿರುಸಿನ ಚರ್ಚೆ ನಡೆಯುತ್ತಿದ್ದು, ಹಲವರಿಗೆ ಈ ವಿಚಾರವಾಗಿ ಅವರು ಉತ್ತರ ನೀಡಿ ದಣಿದಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಒತ್ತಡದಿಂದ ಬಿಪಿ ಕಾಣಿಸಿಕೊಂಡಿರುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net