ಬೆಂಗಳೂರಿನಿಂದ ನೂರಾರು ಸಂಖ್ಯೆಯಲ್ಲಿ ವಿಜಯೇಂದ್ರ ನೇತೃತ್ವದಲ್ಲಿ ಮೈಸೂರಿಗೆ ತೆರಳುತ್ತಿದ್ದರು. ಬೆಂಗಳೂರು - ಮೈಸೂರು ದಶಪಥ ಹೆದ್ದಾರಿಯಲ್ಲಿ ಕುಂಬಳಗೂಡಿನಿಂದ ಪ್ಲೈಓವರ್ ಮೂಲಕ ಕಣ್ಮಿಣಕಿ ಟೋಲ್ ಪ್ಲಾಜಾ ಬಳಿಗೆ ಬಿಜೆಪಿ ನಾಯಕರ ಆಗಮನವಾಗಿತ್ತು. ಇವರ ಬರವೇಕಾಗಾಗಿ ಕಾದು ಕುಳಿತ್ತಿದ್ದ ಕುಂಬಳಗೂಡು ಹಾಗೂ ಬಿಡದಿ ಪೊಲೀಸರು ವಿಜಯೇಂದ್ರ, ಶಾಸಕ ಮುನಿರತ್ನ ಸೇರಿದಂತೆ ಹಲವು ನಾಯಕರನ್ನ ವಶಕ್ಕೆ ಪಡೆದುಕೊಂಡರು.