ಮುಡಾ ಆಯುಕ್ತರ ವರ್ಗಾವಣೆ ಆದೇಶ 24 ಗಂಟೆಯಲ್ಲೇ ರದ್ದು

muda mysore
Published on

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರ ವರ್ಗಾವಣೆ ಆದೇಶ ಕೇವಲ 24 ಗಂಟೆಯಲ್ಲೇ ರದ್ದಾಗಿದೆ.


ಫೆ.1ರಂದು ಕೆಎಎಸ್ ಅಧಿಕಾರಿ, ಆರ್ಥಿಕ ಇಲಾಖೆಯ(ಆಡಳಿತ ಮತ್ತು ಸಮನ್ವಯ) ಉಪಕಾರ್ಯದರ್ಶಿ ಅರುಳ್ ಕುಮಾರ್ ಅವರನ್ನು ಮುಡಾ ಆಯುಕ್ತ ಹುದ್ದೆಗೆ ವರ್ಗಾವಣೆ ಮಾಡಲಾಗಿತ್ತು.


ಅಲ್ಲಿಯವರೆಗೆ ಈ ಸ್ಥಾನದಲ್ಲಿದ್ದ ಜಿ.ಟಿ.ದಿನೇಶ್‌ಕುಮಾರ್ ಅವರನ್ನು ಎತ್ತಂಗಡಿ ಮಾಡಲಾಗಿತ್ತು. ಆದರೀಗ ಈ ಆದೇಶವನ್ನೇ ರದ್ದು ಮಾಡಲಾಗಿದೆ. ಆಡಳಿತ ಹಿತದೃಷ್ಟಿಯಿಂದ ತಕ್ಷಣದಿಂದ ಈ ಕ್ರಮ ಜಾರಿಗೆ ಬರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ಎರಡು ಆದೇಶವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿ ಉಮಾದೇವಿ ಅವರೇ ಹೊರಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net