15ರಂದು ನಿಟ್ಟೂರಿನಲ್ಲಿ ಕೆಸರುಗದ್ದೆ ಕ್ರೀಡಾಕೂಟ

Published on

ಗೋಣಿಕೊಪ್ಪ: ಬಾಳೆಲೆ ಫಾರ್ಮರ್ಸ್ ಅಸೋಸಿಯೆಷನ್ ವತಿಯಿಂದ ನಿಟ್ಟೂರು ಗ್ರಾಮದಲ್ಲಿರುವ ಮಾಪಂಗಡ ಬೆಳ್ಯಪ್ಪ ಅವರ ಗದ್ದೆಯಲ್ಲಿ ಆ.15 ರಂದು ಪೊನ್ನಂಪೇಟೆ ತಾಲೂಕು ಮಟ್ಟದ ಕೆಸರು ಗದ್ದೆ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಅಳಮೇಂಗಡ ಬೋಸ್ ತಿಳಿಸಿದ್ದಾರೆ.

ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ 4 ನೇ ವರ್ಷದ ಕ್ರೀಡಾಕೂಟ ಆಯೋಜಿಸಲಾಗುತ್ತಿದೆ. 10 ವರ್ಷ, 10-14 ವರ್ಷ, 15 ರಿಂದ 17 ವರ್ಷ, 18-35 ವರ್ಷದ ಯುವಕರಿಗೆ, 36 ವರ್ಷ ಮೇಲ್ಪಟ್ಟವರಿಗೆ ಹಾಗೂ 56 ವರ್ಷ ಮೇಲ್ಟಟ್ಟವರಿಗೆ ಸ್ಪರ್ಧೆ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿದ್ಯಾರ್ಥಿಗಳಿಗೆ ಮಧ್ಯಾಹ್ನ 2 ಗಂಟೆಯ ನಂತರ ಸ್ಪರ್ಧೆ ನಡೆಯಲಿದೆ. ಶಾಲಾ-ಕಾಲೇಜು ಮುಗಿದ ಮೇಲೆ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.

ಪುರುಷರಿಗೆ ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ ನಡೆಯಲಿದೆ. 7 ಜನರ ತಂಡ ಭಾಗವಹಿಸಬಹುದಾಗಿದೆ. ವಾಲಿಬಾಲ್ ಕ್ರೀಡೆಗೆ ಪುರುಷರು ಮಾತ್ರ ಭಾಗವಹಿಸಬೇಕಿದೆ. ಎರಡು ವಿಭಾಗದಲ್ಲಿ ವಿಜೇತರಿಗೆ 15 ಸಾವಿರ, ದ್ವಿತೀಯ 10 ಸಾವಿರ, ಸೆಮಿ ಫೈನಲ್ ತಂಡಗಳಿಗೆ ತಲಾ 5 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

ಪೊನ್ನಂಪೇಟೆ ತಾಲೂಕು ವ್ಯಾಪ್ತಿಯ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಹೊರಗಿನ ಆಟಗಾರರಿಗೆ ಅವಕಾಶ ಇಲ್ಲ. ಸ್ಪರ್ಧಿಗಳು ಕಡ್ಡಾಯವಾಗಿ ಆಧಾರ್ ಪ್ರತಿ ನೀಡಬೇಕಿದೆ. ಆ.13 ರಂದು ನೋಂದಣಿಗೆ ಕೊನೆಯ ದಿನಾಂಕ ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗೆ ಆಯೋಜಕರನ್ನು ಸಂಪರ್ಕಿಸುವಂತೆ ತಿಳಿಸಿದರು.

ಅಸೋಸಿಯೇಷನ್ ಕಾರ್ಯದರ್ಶಿ ಆದೇಂಗಡ ಪುಟ್ಟು ತಿಮ್ಮಯ್ಯ, ಕ್ರೀಡಾ ಕಾಯದರ್ಶಿ ಕಾಡ್ಯಮಾಡ ಸುಬ್ಬಯ್ಯ, ಖಜಾಂಚಿ ಆದೇಂಗಡ ಚಂದ್ರಶೇಖರ್, ನಿರ್ದೇಶಕ ಅಳಮೇಂಗಡ ದಿಲ್ಲು ತಿಮ್ಮಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net