ಮಣ್ಣಿನ ಎತ್ತುಗಳ ಮಾರಾಟ ಜೋರು

Kampli Mud Bulls
ಕಂಪ್ಲಿಯಲ್ಲಿ ಮಾರಾಟಕ್ಕಿಟ್ಟಿರುವ ಮಣ್ಣಿನ ಎತ್ತುಗಳು.
Published on

ಕಂಪ್ಲಿ: ಮಣ್ಣೆತ್ತಿನ ಅಮಾವಾಸ್ಯೆ ನಿಮಿತ್ತ ಮಣ್ಣಿನ ಬಸವಣ್ಣ ಮೂರ್ತಿಗಳ ಮಾರಾಟ ಗುರುವಾರ ಭರಾಟೆಯಿಂದ ನಡೆಯಿತು. ಕಳೆದ ಎರಡು ಮೂರು ದಿನಗಳಿಂದಲೂ ಮಣ್ಣೆತ್ತುಗಳ ವ್ಯಾಪಾರ ಶುರುವಾಗಿದೆ.

ಇಲ್ಲಿನ ನಡುವಲ ಮಸೀದಿ, ರಾಮಲಿಂಗ ದೇವಸ್ಥಾನ ಸೇರಿ ವಿವಿಧೆಡೆ ಮಣ್ಣಿನ ಹಾಗೂ ಪಿಒಪಿ ಬಸವಣ್ಣನ ಪ್ರತಿಮೆಗಳು ಮಾರಾಟಗೊಂಡವು. ಮಣ್ಣಿನ ಸಾಧಾರಣ ಗಾತ್ರದ ಬಣ್ಣವಿಲ್ಲದ ಜೋಡಿ ಬಸವಣ್ಣ ಮತ್ತು ಗೋದಲಿಗೆ 40 ರೂ.ಗೆ, ದೊಡ್ಡ ಗಾತ್ರದ ಮೂರ್ತಿ 80 ರಿಂದ 100 ರೂ.ಗೆ ಹಾಗೂ ಪಿಒಪಿ ಮಣ್ಣಿನ ಬಸವಣ್ಣ ಪ್ರತಿಮೆಗಳನ್ನು 150 ರೂ.ಗೆ ಜೋಡಿಯಂತೆ ಮಾರಾಟವಾದವು. ಮಣ್ಣು, ಬಣ್ಣದ ದರ ಹೆಚ್ಚಾಗಿದೆ. ಕೂಲಿದರವೂ ಹೆಚ್ಚಿದೆ.

ಜನ ಖರೀದಿಸುವಲ್ಲಿ ಚೌಕಾಸಿ ಮಾಡುತ್ತಾರೆ. ಅಷ್ಟಾಗಿ ಲಾಭವಿಲ್ಲ. ಪಟ್ಟಣದಲ್ಲಿ 12ಕ್ಕೂ ಹೆಚ್ಚು ಕುಟುಂಬಗಳು ಬಸವಣ್ಣನ ಪ್ರತಿಮೆಗಳನ್ನು ತಯಾರಿಸಿ ಮಾರುವುದರಿಂದಾಗಿ ವ್ಯಾಪಾರದಲ್ಲಿ ಪೈಪೋಟಿಯಿದೆ ಎಂದು ಬಸವಣ್ಣ ಪ್ರತಿಮೆಗಳ ತಯಾರಕ ಮತ್ತು ಮಾರಾಟಗಾರರಾದ ಚಿತ್ರಗಾರ ಸುಮಿತ್ರಮ್ಮ ಪರಶುರಾಮಪ್ಪ ಚಿತ್ರಗಾರ, ಚಿತ್ರಗಾರ ಲಲಿತಮ್ಮ, ನಾಗರಾಜ, ಕುದುರಿ ಸುಭದ್ರಮ್ಮ, ವನಜಾಕ್ಷಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net