

ವಿಟ್ಲ: ಜನರ ಹಾಗೂ ಕುಟುಂಬಗಳ ಅಭಿವೃದ್ಧಿಯ ಸಂಕೇತವಾಗಿ ಸಮುದಾಯ ಭವನದ ನಿರ್ಮಾಣವಾಗಿದೆ. ಎಲ್ಲ ಧರ್ಮದವರ ಸಹಕಾರ, ಕೊಡುಗೆಯಿಂದ ಭವನ ನಿರ್ಮಾಣದಲ್ಲಿದೆ. ಈ ಸಂಬಂಧ ಇನ್ನಷ್ಟು ಗಟ್ಟಿಯಾಗಿ ಸಹೋದರತ್ವ, ಭ್ರಾತೃತ್ವ ಬೆಳೆದು ಬರಲಿ ಎಂದು ಮಂಗಳೂರು ಧರ್ಮಪ್ರಾಂತ್ಯ ಧರ್ಮಾಧ್ಯಕ್ಷ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ಹೇಳಿದರು.
ಪೆರುವಾಯಿ ಮುಚ್ಚಿರಪದವು ಫಾತಿಮಾ ಮಾತೆಯ ದೇವಾಲಯ ಫಾತಿಮಾ ಮಾತಾ ಸಮುದಾಯ ಭವನ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಬೆಳಗ್ಗೆ ಚರ್ಚ್‌ನಲ್ಲಿ ಪವಿತ್ರ ಬಲಿಪೂಜೆ ನೆರವೇರಿತು. ಸಮುದಾಯ ಭವನ ನಿರ್ಮಾಣಕ್ಕೆ ಸಹಕಾರ ನೀಡಿದವರನ್ನು ಗೌರವಿಸಲಾಯಿತು. ಶೈಕ್ಷಣಿಕ ಸಾಧನೆ ಮಾಡಿದವರನ್ನು ಗುರುತಿಸಲಾಯಿತು. ಸ್ಮರಣ ಸಂಚಿಕೆ ಬಿಡುಗಡೆ, ಚರ್ಚ್ ವೆಬ್‌ಸೈಟ್ ಲೋಕಾರ್ಪಣೆಗೊಳಿಸಲಾಯಿತು.
ಶ್ರೀಕ್ಷೇತ್ರ ಕುಕ್ಕಾಜೆಯ ಶ್ರೀಕೃಷ್ಣ ಗುರೂಜಿ, ಪೆರುವಾಯಿ ಬದ್ರಿಯಾ ಜುಮಾ ಮಸೀದಿ ಮುಹಮ್ಮದ್ ಶರೀಫ್ ಮದನಿ, ವಿಟ್ಲ ವಲಯ ವಿಗಾರ್ ವಾರ್ ಐವನ್ ರೊಡ್ರಿಗಸ್, ಕಯ್ಯಾರ್ ಕ್ರಿಸ್ತರಾಜ ದೇವಾಲಯ ಧರ್ಮಗುರು ವಿಶಾಲ್ ಮೊನಿಸ್, ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ಪೆರುವಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೆಫೀಸಾ, ಮಾಣಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಧರ್ ಬಾಳೆಕಲ್ಲು, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಡೆನಿಸ್ ಮೊಂತೇರೊ, ಕಾರ್ಯದರ್ಶಿ ವೈಲೆಟ್ ಕುವೆಲ್ಲೊ, ಸಮುದಾಯ ಭವನ ಕಟ್ಟಡ ಸಮಿತಿ ಸಂಚಾಲಕ ಚಾರ್ಲ್ಸ್ ಡಿಸೋಜ ಉಪಸ್ಥಿತರಿದ್ದರು.
ಪೆರುವಾಯಿ ಧರ್ಮಗುರು ಸೈಮನ್ ಡಿಸೋಜ ಸ್ವಾಗತಿಸಿದರು. ಸಂತೋಷ್ ಮೊಂತೆರೋ ಕಾರ್ಯಕ್ರಮ ನಿರೂಪಿಸಿದರು.
ಸಮುದಾಯ ಭವನ ಎಲ್ಲ ಜಾತಿಧರ್ಮಕ್ಕೆ ಸೇರಿದ್ದಾಗಿದೆ. ಸಮಾಜದ ಏಳುಬೀಳಿಗೆ ಒಂದಾಗಿ ಸಂದೇಶ ನೀಡುವ ಕಾರ್ಯವಾಗಬೇಕು. ಭವನ ನಿರ್ಮಾಣಕ್ಕೆ ಎಲ್ಲರಿಗೆ ಸರ್ಕಾರ ಸಹಾಯ ನೀಡುತ್ತಿದೆ. ಸಮುದಾಯ ಬೆಳೆದು ಸಮರ್ಥ ನಾಯಕತ್ವವನ್ನು ನೀಡುತ್ತಿದೆ.
| ಐವನ್ ಡಿಸೋಜ ವಿಧಾನಪರಿಷತ್ ಸದಸ್ಯ