ಮಂತ್ರಾಲಯ ಶ್ರೀಗಳ ಚಾರ್ತುಮಾಸ್ಯ ದೀಕ್ಷೆ

Mtm swamiji
ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಪತಿ ಡಾ.ಸುಬುಧೇಂದ್ರ ತೀರ್ಥರು ಶ್ರೀಮಠದಲ್ಲಿ ಶನಿವಾರ ಚಾತುಮಾಸ್ಯ ದೀಕ್ಷೆ ಸ್ವೀಕರಿಸಿ ಪೂಜಾ ವಿ ವಿಧಾನಗಳನ್ನು ಪೂರೈಸಿದರು.
Published on

ರಾಯಚೂರು
ರಾಯರ ಮಠದ ಪರಂಪರೆಯಲ್ಲಿ ಬಂದಿರುವಂತೆ ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಪತಿ ಡಾ.ಸುಬುಧೇಂದ್ರ ತೀರ್ಥರು ಶ್ರೀಮಠದಲ್ಲಿ ಶನಿವಾರ ಪೂಜಾ ವಿವಿಧಾನಗಳನ್ನು ಪೂರೈಸುವ ಮೂಲಕ 11ನೇ ಚಾರ್ತುಮಾಸ್ಯ ದೀಕ್ಷೆಯನ್ನು ಸ್ವೀಕರಿಸಿದರು.
ರಾಯರ ಮೂಲ ಬೃಂದಾವನ ಸೇರಿದಂತೆ ಶ್ರೀಮಠದ ಪೂರ್ವ ಯತಿಗಳ ಬೃಂದಾವನಗಳಿಗೆ ವಿಶೇಷ ಪೂಜೆ ಸಲ್ಲಿಸಿದ ಶ್ರೀಗಳು ಚಾರ್ತುಮಾಸ್ಯ ದೀಕ್ಷೆಯ ವಿ ವಿಧಾನಗಳನ್ನು ಪೂರೈಸಿದ ನಂತರ ಮೂಲ ರಾಮದೇವರ ಪೂಜೆ ನೆರವೇರಿಸಿ ಭಕ್ತರಿಗೆ ಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಶ್ರೀಮಠದ ವ್ಯವಸ್ಥಾಪಕ ಎಸ್.ಕೆ.ಶ್ರೀನಿವಾಸರಾವ್, ಶ್ರೀಗುರು ಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ನಿವೃತ್ತ ಪ್ರಾಚಾರ್ಯ ಡಾ.ಎನ್.ವಾದಿರಾಜಾಚಾರ್, ವೆಂಕಟೇಶ ಜೋಷಿ ಹಾಗೂ ಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net