

ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮಟಕಾ, ಗ್ಯಾಂಬ್ಲಿಂಗ್ ಹೆಚ್ಚಾಗುತ್ತಿದ್ದು ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮಾಜಿ ಶಾಸಕರೊಬ್ಬರು ಆರೋಪಿಸಿದ ಮರುದಿನವೇ ಮಟಕಾ ಬರೆಯುತ್ತಿದ್ದ ವ್ಯಕ್ತಿಯೊಬ್ಬನನ್ನು ರೆಡ್ ಹ್ಯಾಂಡ್ ಆಗಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಬಡಸ್ ಕೆಎಚ್ ಲಕ್ಷ್ಮೀ ಗಲ್ಲಿಯ ಪರುಶುರಾಮ (39) ಗಜವತಿ - ಕುಕಡೊಳ್ಳಿ ರಸ್ತೆಯಲ್ಲಿ ಓಸಿ ಚೀಟಿ ಬರೆಯುತ್ತಿರುವ ಸಂದರ್ಭದಲ್ಲೇ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ. ಆತನಿಂದ 3 ಓಸಿ ಚೀಟ್, 500 ರೂ. ನಗದು ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.