ಎಂಟಿಬಿ ಕಲೆಕ್ಷನ್‌ಗೆ ಸೇರಿದ ಬಿಎಂಡಬ್ಲ್ಯು ಎಕ್ಸ್‌ಎಂ ಕಾರು

ಎಂಟಿಬಿ ಕಲೆಕ್ಷನ್‌ಗೆ ಸೇರಿದ ಬಿಎಂಡಬ್ಲ್ಯು ಎಕ್ಸ್‌ಎಂ ಕಾರು
ಎಂಟಿಬಿ ಕಲೆಕ್ಷನ್‌ಗೆ ಸೇರಿದ ಬಿಎಂಡಬ್ಲ್ಯು ಎಕ್ಸ್‌ಎಂ ಕಾರು
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದುಬಾರಿ ಬೆಲೆಯ ಐಷಾರಾಮಿ ಕಾರುಗಳ ಕಲೆಕ್ಷನ್‌ನಲ್ಲಿ ಆಗಾಗ ಸದ್ದು ಮಾಡುವ ಮಾಜಿ ಸಚಿವ ಎಂಟಿಬಿ ನಾಗರಾಜ್ ಅವರ ಅರಮನೆಯಂತಹ ಬಂಗಲೆಯ ಕಾರ್‌ಶೆಡ್‌ಗೆ ಮತ್ತೊಂದು ಐಷಾರಾಮಿ ಕಾರು ಸೇರ್ಪಡೆಯಾಗಿದೆ.
ಇತ್ತೀಚಿಗಷ್ಟೇ ರೋಲ್ಸ್‌ರಾಯ್ ಕಾರು ಖರೀದಿಸಿದ್ದ ಎಂಟಿಬಿ ನಾಗರಾಜ್ ದುಬಾರಿ ಬೆಲೆಯ ಬಿಎಂಡಬ್ಲ್ಯು ಎಕ್ಸ್‌ಎಂ ಕಾರು ಖರೀದಿಸುವ ಮೂಲಕ ಮತ್ತೊಮ್ಮೆ ಸದ್ದು ಮಾಡಿದ್ದಾರೆ. ರಾಜ್ಯದ ವರ್ಣರಂಜಿತ ರಾಜಕಾರಣಿಗಳಲ್ಲಿ ಒಬ್ಬರಾದ ಹೊಸಕೋಟೆಯ ಎಂಟಿಬಿ ನಾಗರಾಜ್ ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳ ಕಾರ್ ಕಲೆಕ್ಷನ್ ಮೂಲಕ ಗಮನ ಸೆಳೆದಿದ್ದಾರೆ. ಎಂಟಿಬಿ ದುಬಾರಿ ಬೆಲೆಯ ಕಾರು ಖರೀಸುವುದು ಹೊಸತೇನಲ್ಲ. ಈಗಾಗಲೆ ಇವರ ಕಾರ್‌ಶೆಡ್‌ಗಳಲ್ಲಿ ರೋಲ್ಸ್ ರಾಯ್ಸ್ ಫ್ಯಾಂಟಮ್, ಪೋರ್ಷೆಕಯೆನ್, ಫೆರಾರಿ ಎ್8, ಲ್ಯಾಂಡ್‌ರೋವರ್, ಮರ್ಸಿಡಿಸ್ ಬೆಂಜ್ ಸೇರಿ ಇನ್ನಿತರ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿವೆ ಇವುಗಳ ಜತೆಗೆ ಬಿಎಂಡಬ್ಲ್ಯು ಎಕ್ಸ್‌ಎಂ ಕಾರು ಸೇರ್ಪಡೆಗೊಂಡಿದೆ.
3.24 ಕೋಟಿ ರೂ.: ಬಿಎಂಡಬ್ಲ್ಯು ಎಕ್ಸ್‌ಎಂ ಕಾರಿನ ಆನ್‌ರೋಡ್ ಬೆಲೆ 3.24 ಕೋಟಿ ರೂಪಾಯಿಯಾಗಿದೆ. ಎಕ್ಸ್ ಡ್ರೈವ್ ಎನ್ನುವ ವೆರಿಯೆಂಟ್ ಮತ್ತು ಪವರ್‌ಫುಲ್ ಎಸ್‌ಯುವಿ ಆವೃತ್ತಿಯಾಗಿದೆ. ಇದರ ಎಕ್ಸ್ ಶೋರೂಂ ಬೆಲೆಯೇ 2.60 ಕೋಟಿ ರೂಪಾಯಿ ದಾಟಲಿದೆ.
ಕೆಲವೇ ಸೆಕೆಂಡ್‌ನಲ್ಲಿ 100 ಸ್ಪೀಡ್: ಪವರ್ ಫುಲ್ ಎಂಜಿನ್ ಹೊಂದಿರುವ ಈ ಕಾರು ಕೇವಲ 4.3 ಸೆಕೆಂಡುಗಳಲ್ಲಿ ಸೊನ್ನೆಯಿಂದ ನೂರು ಕಿ.ಮೀ ವೇಗ ಪಡೆದುಕೊಳ್ಳುತ್ತದೆ. ಪ್ರತಿ ಗಂಟೆಗೆ ಗರಿಷ್ಠ 249 ಕಿ.ಮೀ ಟಾಪ್ ಸ್ಪೀಡ್ ಹೊಂದಿದೆ. ಕಾರನ್ನು ಸಂಪೂರ್ಣವಾಗಿ ಪೆಟ್ರೋಲ್ ನೊಂದಿಗೆ ಚಾಲನೆ ಮಾಡಿದರೆ 11.8 ಕಿ.ಮೀ ಮೈಲೇಜ್, ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಸಂಯೋಜನೆಯೊಂದಿಗೆ ಪ್ರತಿ ಲೀಟರ್‌ಗೆ 61.9 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ ಎನ್ನಲಾಗಿದೆ. ಈ ಕಾರಿನಲ್ಲಿ 7 ಸೀಟರ್ ಸೌಲಭ್ಯದೊಂದಿಗೆ ಹಲವು ಅತ್ಯಾಧುನಿಕ ಸವಲತ್ತುಗಳಿವೆ.
ಜಾಲತಾಣಗಳಲ್ಲಿ ವೈರಲ್:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net