ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆ, ಸಚಿವ ಎಂಟಿಬಿ ನಾಗರಾಜ್ ನೆರವು, ಜಲಾವೃತಗೊಂಡ ಸೇತುವೆ

must
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಹೊಸಕೋಟೆ ತಾಲೂಕು ತಿರುಮಲಶೆಟ್ಟಿ ಪಾಲಿಹೌಸ್ ಹಾಗೂ ಆನಂದ್‌ಾರ್ಮ್ ಹೌಸ್‌ನಲ್ಲಿ ಮಂಗಳವಾರ ಪ್ರವಾಹದಲ್ಲಿ ಸಿಲುಕಿದ್ದವರನ್ನು ಎನ್‌ಡಿಆರ್‌ಎ್ ಹಾಗೂ ಎಂಇಜಿ ಯುವಕರ ತಂಡ ರಕ್ಷಣೆ ಮಾಡಿತು.


ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ವಿಷಯ ತಿಳಿಯುತ್ತಿದ್ದಂತೆ ಎನ್‌ಡಿಆರ್‌ಎ್ ತಂಡ ಹಾಗೂ ತಾಲೂಕು ಆಡಳಿತದ ಅಧಿಕಾರಿಗಳಿಗೆ ಸೂಚನೆ ನೀಡಿ ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆಗೆ ಕ್ರಮ ಕೈಗೊಂಡರು. ಖುದ್ದು ಸ್ಥಳಕ್ಕೆ ಧಾವಿಸಿ ರಕ್ಷಣೆಯಾದವರ ಪರಿಸ್ಥಿತಿ ಅವಲೋಕಿಸಿ ಸೂಕ್ತ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದರು.

ತಂಡದ ಕಾರ್ಯಕ್ಕೆ ಶ್ಲಾಘನೆ: ಪ್ರವಾಹ ಮತ್ತಿತರ ರಾಷ್ಟ್ರೀಯ ವಿಪತ್ತಿನ ಸಮಯದಲ್ಲಿ ಎನ್‌ಡಿಆರ್‌ಎ್ ತಂಡ ಹಾಗೂ ಅಧಿಕಾರಿಗಳು ತೋರಿಸುವ ಧೈರ್ಯ ಸಾಹಸ ಹಾಗೂ ಅವರ ಕರ್ತವ್ಯನಿಷ್ಠೆಗೆ ನಾವು ಎಷ್ಟು ಸಲಾಂ ಹೇಳಿದರು ಸಾಲದು. ಕೋವಿಡ್ ಸಂದರ್ಭದಲ್ಲಿ ವೈದ್ಯಕೀಯ ಸಿಬ್ಬಂದಿ ಪ್ರಾಣದ ಹಂಗನ್ನೂ ತೊರೆದು ಕರ್ತವ್ಯ ನಿರ್ವಹಿಸಿದ್ದರು. ಹಾಗೆಯೇ ಮಳೆ ಪ್ರವಾಹದ ಸಮಯದಲ್ಲಿ ಸಿಬ್ಬಂದಿ ಪ್ರಾಣವನ್ನೂ ಲೆಕ್ಕಿಸದೆ ಜನರ ರಕ್ಷಣೆ ಮಾಡುತ್ತಾರೆ ಎಂದು ಸಚಿವ ಎಂಟಿಬಿ ಮೆಚ್ಚುಗೆ ವ್ಯಕ್ತಪಡಿಸಿದರು.

40ಕ್ಕೂ ಹೆಚ್ಚು ಜನರ ರಕ್ಷಣೆ: ಭಾರಿ ಮಳೆಯಿಂದಾಗಿ ಹರಿದು ಬರುತ್ತಿರುವ ನೀರು ಅಪಾರ್ಟ್‌ಮೆಂಟ್ ಸೇರಿ ಬಡಾವಣೆಗಳಿಗೆ ನುಗ್ಗಿದೆ. ಕೆಲವು ಕಡೆಗಳಲ್ಲಿ ಎದೆಯುದ್ದಕ್ಕೂ ನೀರು ಹರಿಯುವ ಸನ್ನಿವೇಶ ನಿರ್ಮಾಣವಾಗಿದೆ. ಮುಂಜಾಗ್ರತೆಯಾಗಿ ಅಲ್ಲಿನ ನಿವಾಸಿಗಳನ್ನು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಈ ಭಾಗದಲ್ಲಿ ಮಕ್ಕಳು ಸೇರಿ 40ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net