ಎಂಎಸ್‌ಎನ್‌ಐಎಂಗೆ ನ್ಯಾಕ್‌ನಿಂದ ಎ ಗ್ರೇಡ್

hhhhhhhhhhh
Published on

ಮಂಗಳೂರು : ನಗರದ ಬೊಂದೇಲ್‌ನ ಮಣೇಲ್ ಶ್ರೀನಿವಾಸ್ ನಾಯಕ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಎಂಎಸ್‌ಎನ್‌ಐಎಂ) ಸಂಸ್ಥೆ 3ನೇ ಸುತ್ತಿನ ಮರು ಮಾನ್ಯತೆ ಪ್ರಕ್ರಿಯೆಯಲ್ಲಿ ನ್ಯಾಷನಲ್ ಅಸೆಸ್‌ಮೆಂಟ್ ಮತ್ತು ಅಕ್ರೆಡಿಟೇಶನ್ ಕೌನ್ಸಿಲ್ (ನ್ಯಾಕ್)ನಿಂದ ಎ ಗ್ರೇಡ್ ಪಡೆದಿದೆ.
ಮೌಲ್ಯಮಾಪನ ತಂಡದಲ್ಲಿ ಹಿಮಾಚಲ ಪ್ರದೇಶ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಡಾ. ಸುನಿಲ್ ಗುಪ್ತಾ, ಮೋಹನ್ ಲಾಲ್ ಸುಖಡಿಯಾ ವಿಶ್ವವಿದ್ಯಾಲಯದ ನಿರ್ದೇಶಕ ಡಾ.ಹನುಮಾನ್ ಪ್ರಸಾದ್ ಮತ್ತು ಲೋನಾವಾಲಾದ ಸಿನ್ಹಗಡ್ ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ ಮತ್ತು ಕ್ಯಾಟರಿಂಗ್ ಟೆಕ್ನಾಲಜಿಯ ಪ್ರಾಂಶುಪಾಲೆ ಡಾ. ಆಯೇಷಾ ಸಿದ್ದಿಕಿ ಇದ್ದರು.
ನ್ಯಾಕ್ ಸಮಿತಿಯು ಪಠ್ಯಕ್ರಮ, ಅಧ್ಯಾಪನ, ಕಲಿಕೆ ಮತ್ತು ಮೌಲ್ಯಮಾಪನ, ಮೂಲಸೌಕರ್ಯ ಮತ್ತು ಕಲಿಕಾ ಸಂಪನ್ಮೂಲಗಳು, ನಾವೀನ್ಯತೆ ಮುಂತಾದ ಗುಣಾತ್ಮಕ ಮಾನದಂಡಗಳಲ್ಲಿ ಸಂಸ್ಥೆಯ ಯಶಸ್ಸನ್ನು ಪ್ರಶಂಸಿಸಿದೆ. ಎಲ್ಲ ಶಿಕ್ಷಣ ಕ್ಷೇತ್ರಗಳಲ್ಲಿ ತನ್ನ ಅತ್ಯುತ್ತಮ ಶಿಕ್ಷಣ ಮಟ್ಟವನ್ನು ಕಾಯ್ದುಕೊಳ್ಳಲು ಎಂಎಸ್‌ಎನ್‌ಐಎಂ ಬದ್ಧವಾಗಿದೆ. ನ್ಯಾಕ್ ಮರುಮಾನ್ಯ ಮಾಡಿ ಎ’ ಗ್ರೇಡ್ ನೀಡಿರುವುದು
ಹೆಮ್ಮೆ ತಂದಿದೆ ಎಂದು ಸಂಸ್ಥೆಯ ನಿರ್ದೇಶಕಿ ಡಾ. ಮೊಲ್ಲಿ ಎಸ್. ಚೌಧರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net