ಎಂಎಸ್‌ಎನ್‌ಐಎಂನಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ

mng-4july-msnim
Published on





ಮಂಗಳೂರು : ಮಣೇಲ್ ಶ್ರೀನಿವಾಸ್ ನಾಯಕ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಎಂಎಸ್‌ಎನ್‌ಐಎಂ), ಮಲೇಷ್ಯಾದ ಇಂಟಿ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯ ಮತ್ತು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)
ಸಹಯೋಗದಲ್ಲಿ ಕೃತಕ ಬುದ್ಧಿಮತ್ತೆಯ ಅಳವಡಿಕೆ : ವ್ಯವಹಾರ ಮತ್ತು ನಿರ್ವಹಣೆಯಲ್ಲಿನ ಅವಕಾಶಗಳು ಹಾಗೂ
ಸವಾಲುಗಳು ಕುರಿತು ಅಂತಾರಾಷ್ಟ್ರೀಯ ಸಮ್ಮೇಳನ ಎಂಎಸ್‌ಎನ್‌ಐಎಂನ ಬೋಂದೆಲ್ ಕ್ಯಾಂಪಸ್‌ನಲ್ಲಿ ನಡೆಯಿತು.
ಸಮ್ಮೇಳನ ಉದ್ಘಾಟಿಸಿದ ಮಾಹೆಯ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ.ಸಂದೀಪ್ ಶೆಣೈ ಮಾತನಾಡಿ ‘ ನೈಸರ್ಗಿಕ ಮತ್ತು ಕೃತಕ
ಬುದ್ಧಿಮತ್ತೆಯ ನಡುವೆ ವ್ಯತ್ಯಾಸಗಳಿವೆ. ಮಾಹಿತಿ ಸುರಕ್ಷತೆಯ ಅಪಾಯಗಳಂತಹ ಸಂಭಾವ್ಯ ಸವಾಲುಗಳ ಹೊರತಾಗಿಯೂ ಎಐ ಮುಂದಿನ ದಶಕದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದರು.
ಇಂಟಿ ಅಂತರಾಷ್ಟ್ರೀಯ ವಿಶ್ವವಿದ್ಯಾಲಯದ ಪ್ರೊ.ವಾಂಗ್ ಲಿಂಗ್ ಶಿಂಗ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮಹಿಳಾ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಣೇಲ್ ಅಣ್ಣಪ್ಪ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನದ ಸಂಚಾಲಕಿ ಡಾ.ಶಿಲ್ಪಿ ಸಾಹಾ ಉಪಸ್ಥಿತರಿದ್ದರು, ಸಂಸ್ಥೆಯ ನಿರ್ದೇಶಕಿ ಡಾ. ಮೊಲ್ಲಿ ಎಸ್. ಚೌಧುರಿ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕರಾದ ಸಾತ್ವಿಕಾ ಶೆಟ್ಟಿ, ಸನತ್ ಭಂಡಾರ್ಕಾರ್, ನಂದಿತಾ ಸುನಿಲ್ ಅತಿಥಿಗಳನ್ನು ಪರಿಚಯಿಸಿದರು. ಡಾ.ರೀಮಾ ಆಗ್ನೆಸ್ ಫ್ರಾಂಕ್ ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ಅದಿತಿ ಕಾಮತ್ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ ಸಮಾರಂಭದಲ್ಲಿ ಇನ್ಫೋಸಿಸ್‌ನ ಹಿರಿಯ ಪ್ರಿನ್ಸಿಪಲ್ ಟೆಕ್ನಾಲಜಿ ಆರ್ಕಿಟೆಕ್ಟ್ ಶಂಕರಸುಬ್ಬು ಅರುಣಾಚಲಂ ಮುಖ್ಯ ಅತಿಥಿಯಾಗಿದ್ದರು. ಸಿಐಐ ಮಂಗಳೂರು ಘಟಕದ ಅಧ್ಯಕ್ಷ ಅಜಿತ್ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಶಿಕ್ಷಣ ಸಂಸ್ಥೆಗಳ ಅಧ್ಯಾಪಕರು, ಸಂಶೋಧಕರು ಮತ್ತು ವಿದ್ಯಾರ್ಥಿಗಳನ್ನು ಸೇರಿದಂತೆ 178 ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net