

ಹುಬ್ಬಳ್ಳಿ: ಚೇತನ ಬಿಜಿನೆಸ್ ಶಾಲೆ ವತಿಯಿಂದ ಇಲ್ಲಿಯ ಶ್ರೀನಗರ ಕ್ರಾಸ್‌ನ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಒಂದು ದಿನದ ನಿರ್ವಹಣಾ ಅಭಿವೃದ್ಧಿ (ಎಂಡಿಪಿ) ಕಾರ್ಯಕ್ರಮವನ್ನು ಶನಿವಾರ ಏರ್ಪಡಿಸಲಾಗಿತ್ತು.
ನಿರ್ದೇಶಕ ಡಾ.ವಿಶ್ವನಾಥ ಕೊರವಿ ಉದ್ಘಾಟಿಸಿ ಮಾತನಾಡಿ, ಎಂಎಸ್‌ಎಂಇಗಳು ನಮ್ಮ ದೇಶದ ಆರ್ಥಿಕತೆಯ ಬೆನ್ನೆಲುಬು. ಅವುಗಳ ಬೆಳವಣಿಗೆಗೆ ಅಗತ್ಯ ಕ್ರಮ ಜರುಗಿಸಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಪ್ರೊ. ಮಾನಿಕ್ ಅವರು ‘ಸಾಮರ್ಥ್ಯ ವರ್ಧನೆ ಮತ್ತು ವ್ಯವಹಾರ ವಿಸ್ತರಣೆಯ ತಂತ್ರಜ್ಞಾನ’ ವಿಷಯದ ಮೇಲೆ ಉಪನ್ಯಾಸ ನೀಡಿದರು.
ಪ್ರೊ. ರಮಾಕಾಂತ ಕುಲಕರ್ಣಿ ಮಾತನಾಡಿದರು.
ಉತ್ತರ ಕರ್ನಾಟಕದ ವಿವಿಧ ನಗರಗಳ ಸುಮಾರು 20ಕ್ಕೂ ಹೆಚ್ಚು ಕಂಪನಿಗಳಿಂದ 50ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಂಡಿದ್ದರು.