ಕೆನರಾ ಬ್ಯಾಂಕ್ ನಿಂದ ಎಂಎಸ್ಎಂಇ ಸಮಾವೇಶ

Published on

ಹುಬ್ಬಳ್ಳಿ: ಇಲ್ಲಿಯ ಕೆನರಾ ಬ್ಯಾಂಕ್ ವತಿಯಿಂದ ಎಂಎಸ್ಎಂಇ ಕ್ಲಸ್ಟರ್ ಸಮಾವೇಶವನ್ನು ನಗರದ ಗೋಕುಲ ರಸ್ತೆ ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆ ಸಂದಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿತ್ತು.

ಬ್ಯಾಂಕಿನ ಎಂಎಸ್ಎಂಇ ಔಟ್ರೀಚ್ ಪ್ರೋಗ್ರಾಂ ಅಡಿಯಲ್ಲಿ ದೇಶಾದ್ಯಂತ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಇದರ ಅಂಗವಾಗಿ ಹುಬ್ಬಳ್ಳಿ ಪ್ರಾದೇಶಿಕ ಕಚೇರಿ ವತಿಯಿಂದ ನಡೆದ ಸಮಾವೇಶದಲ್ಲಿ ಪ್ರಧಾನ ವ್ಯವಸ್ಥಾಪಕ ಹಾಗೂ ವೃತ್ತ ಮುಖ್ಯಸ್ಥ ಎಂ. ವಿಜಯಕುಮಾರ ಅವರು ಎಂಎಸ್ಎಂಇ ಗ್ರಾಹಕರನ್ನು ಉದ್ದೇಶಿಸಿ ಮಾತನಾಡಿದರು.

ಎನ್ಕೆಎಸ್ಎಸ್ಐಎ ಅಧ್ಯಕ್ಷ ಗಿರೀಶ ನಲವಡಿ, ನಾಗರಾಜ ದಿವಟೆ, ಕಾರ್ತಿಕ, ಇಮ್ರಾನ್ಖಾನ್, ಮನೀಷ್ ಪಿ, ಇತರರು ಪಾಲ್ಗೊಂಡಿದ್ದರು.
ಪ್ರಾದೇಶಿಕ ಮುಖ್ಯಸ್ಥ ಸಾಜಲ್ ಸಮೀರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net