ಎಂಎಸ್‌ಡಿ ತಂಡ ಚಾಂಪಿಯನ್

ಚಿತ್ರ_11ಎಸ್_ಡಿ_ಪಿ_02
ಅರೆಕಾಡು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದಲ್ಲಿ ಚಾಂಪಿಯನ್ ಪಟ್ಟ ಪಡೆದ ಎಂಎಸ್‌ಡಿ ತಂಡದ ಸದಸ್ಯರು ಸಂಭ್ರಮಿಸಿದರು.
Published on

ಸಿದ್ದಾಪುರ: ಇಕೋ ಫ್ರೆಂಡ್ಸ್ ಆಶ್ರಯದಲ್ಲಿ ಸಿದ್ದಾಪುರದ ಅರೆಕಾಡು ಸರ್ಕಾರಿ ಶಾಲೆ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ 9ನೇ ವರ್ಷದ ಅರೆಕಾಡು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದಲ್ಲಿ ಇಸ್ಮಾಯಿಲ್ ಮಾಲೀಕತ್ವದ ಟೀಂ ಎಂಎಸ್‌ಡಿ ತಂಡ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿತು.

ಟೀಮ್ ರೈನ್ಬೋ ವರಿಯರ್ಸ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಎರಡು ದಿನಗಳ ಕಾಲ ನಡೆದ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗ್ರಾಮದ ಸುತ್ತಮುತ್ತಲ 9 ತಂಡಗಳು ಭಾಗಿಯಾಗಿದ್ದವು.

ಉತ್ತಮ ಹೊಡೆತ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಮುಸ್ತಫ ಪಡೆದುಕೊಂಡರು. ಫೈನಲ್ ಪಂದ್ಯದಲ್ಲಿ ಉತ್ತಮ ಆಟಕ್ಕಾಗಿ ಮ್ಯಾನ್ ಆಫ್ ದಿ ಮ್ಯಾಚ್ ಎಂಎಸ್‌ಡಿ ತಂಡದ ಸಲಾಂ ಪಡೆದುಕೊಂಡರು. ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಜುನೈದ್ ಪಡೆದುಕೊಂಡರು

ಹೋಸೈರಿ ಗ್ರಾಪಂ ಮಾಜಿ ಅಧ್ಯಕ್ಷ ಪ್ರಭುಶೇಖರ್ ಮಾತನಾಡಿ, ಇಂಥ ಕ್ರೀಡಾಕೂಟಗಳನ್ನು ಆಯೋಜನೆ ಮಾಡುವುದರಿಂದ ಪ್ರತಿಭಾವಂತ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಸಹಕಾರಿಯಾಗಿದ್ದು, ಕ್ರೀಡಾ ಸೌಹಾರ್ದದಿಂದ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಅರೆಕಾಡು ರಿವರ್ ಹೋಂ ಸ್ಟೇ ಮಾಲೀಕರಾದ ಶಿಲ್ಪಾ ಹಾಗೂ ವಿನಯ್, ಯೂಸಫ್ ಅಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಂಡಾಂಡ ವಿವೇಕಾನಂದ, ಸಾಮಾಜಿಕ ಕಾರ್ಯಕರ್ತ ಇಸ್ಮಾಯಿಲ್, ಇಕೋ ಫ್ರೆಂಡ್ಸ್ ಸಂಘಟನೆ ಅಧ್ಯಕ್ಷ ಅಕ್ಬಸರ್ ಅಲಿ ರಸೀದ್, ಸಲಾಂ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net