

ಗುಂಡ್ಲುಪೇಟೆ : ಪಟ್ಟಣದಲ್ಲಿ ಇತ್ತೀಚೆಗೆ ಸ್ಥಾಪಿತವಾಗಿರುವ ಉದ್ದೇಶಿತ ವಿವೇಕಸಿರಿ ಸೇವಾ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆಯಿತು. ಸಂಘದ ಅಧ್ಯಕ್ಷರಾಗಿ ಎಂ.ಎಸ್.ಸ್ವಾಮಿ, ಉಪಾಧ್ಯಕ್ಷರಾಗಿ ಬಿ.ಕೆ.ಮಹದೇವಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ನಾಗರಾಜು ಘೋಷಣೆ ಮಾಡಿ ಪ್ರಮಾಣಪತ್ರ ನೀಡಿದರು. ನಿರ್ದೇಶಕರಾದ ಸಿ.ಕುಮಾರ್, ಬಿ.ರವಿಕುಮಾರ, ಕಾರ್ತಿಕ್, ಆರ್.ಎಸ್.ಬಸವಣ್ಣ, ಶಿವಮಲ್ಲಪ್ಪ, ಸಿದ್ದರಾಜು., ಎಸ್.ಶಾಂತಪ್ಪ, ಸಿಇಒ ಶರತ್ ಇದ್ದರು.