ತಾಲೂಕು ಕಚೇರಿ ವಾಸ್ತುದೋಷ ಪರಿಹಾರಾರ್ಥ ಮಹಾಮೃತ್ಯುಂಜಯ ಹೋಮ

mruthyunjaya homa
Published on

ಬಂಟ್ವಾಳ: ಬಿ.ಸಿ.ರೋಡಿನ ಮಿನಿ ವಿಧಾನಸೌಧ ಕಟ್ಟಡದಲ್ಲಿರುವ ತಾಲೂಕು ಕಚೇರಿಯ ವಾಸ್ತುದೋಷ ಪರಿಹಾರರ್ಥ ಹಾಗೂ ಲೋಕಕಲ್ಯಾಣಾರ್ಥ ಜಿಪಂ ಸದಸ್ಯ ಎಂ.ತುಂಗಪ್ಪ ಬಂಗೇರ ನೇತೃತ್ವದಲ್ಲಿ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ಸನ್ನಿಧಿಯಲ್ಲಿ ಸೋಮವಾರ ಮಹಾಮೃತ್ಯುಂಜಯ ಹೋಮ ನಡೆಯಿತು.

ಕೆಲವು ದಿನಗಳ ಹಿಂದೆ ತಾಲೂಕು ಕಚೇರಿಯ ಇಬ್ಬರು ಉಪತಹಸೀಲ್ದಾರ್‌ಗಳು ಅನಾರೋಗ್ಯದಿಂದ ಮೃತಪಟ್ಟಿದ್ದು, ತಾಲೂಕು ಕಚೇರಿ ಸಿಬ್ಬಂದಿಯಲ್ಲಿ ಆತಂಕ ಹುಟ್ಟಿಸಿತ್ತು. ಈ ಬಗ್ಗೆ ಜಿಪಂ ಸದಸ್ಯ ತುಂಗಪ್ಪ ಬಂಗೇರ ತಾಲೂಕು ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರ ಯೋಗ ಕ್ಷೇಮದ ಹಿತದೃಷ್ಟಿಯಿಂದ ಕಾರಿಂಜ ಕಳ್ಳಿಮಾರು ಜ್ಯೋತಿಷಿ ವೆಂಕಟರಮಣ ಮುಚ್ಚಿನ್ನಾಯರಲ್ಲಿ ಪ್ರಶ್ನಾಚಿಂತನೆ ನಡೆಸಿದಾಗ ವಿಧಾನಸೌಧದ ಕಟ್ಟಡದಲ್ಲಿ ವಾಸ್ತುದೋಷ ಇರುವುದು ಕಂಡುಬಂದಿದೆ. ಈ ಹಿನ್ನೆಲೆ ಉಡುಪಿ ಚಂದ್ರ ಮೌಳೀಶ್ವರ ದೇವಸ್ಥಾನ ಅರ್ಚಕ ಮನೋಹರ ತಂತ್ರಿ ಮತ್ತು ಬಿ.ಸಿ.ರೋಡು ರಕ್ತೇಶ್ವರಿ ದೇವಸ್ಥಾನದ ಅರ್ಚಕ ರಘುಪತಿ ಭಟ್ ವೈದಿಕ ವಿಧಿವಿಧಾನಗಳೊಂದಿಗೆ ಮೃತ್ಯುಂಜಯ ಹೋಮ ಸಂಪನ್ನಗೊಂಡಿತು.

ಜಿಪಂ ಸದಸ್ಯರಾದ ತುಂಗಪ್ಪ ಬಂಗೇರ, ರವೀಂದ್ರ ಕಂಬಳಿ, ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ, ಕಾರ್ಯದರ್ಶಿ ಡೊಂಬಯ ಅರಳ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net