ಎಂಆರ್‌ಪಿಎಲ್ ಉತ್ಪನ್ನ ಟೊಲುಯೆನ್ ಬಿಡುಗಡೆ

mng-11jan-mrpl
Published on


ಮಂಗಳೂರು : ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಶನಿವಾರ ಎಂಆರ್‌ಪಿಎಲ್‌ಗೆ ಭೇಟಿ ನೀಡಿದರು. ಈ ಸಂದರ್ಭ ಸಚಿವರು ಎಂಆರ್‌ಪಿಎಲ್‌ನ ಉತ್ಪನ್ನವಾದ ಟೊಲುಯೆನ್ ಅನ್ನು ಬಿಡುಗಡೆ ಮಾಡಿದರು. ಬಳಿಕ ಹಿರಿಯ ಅಧಿಕಾರಿಗಳೊಂದಿಗೆ ಸಂಸ್ಥೆಯ ಪ್ರಗತಿ ವಿವರ ಪಡೆದರು.
ಟೊಲುಯೆನ್ ಲಿಕ್ವಿಡ್ ಆರೊಮ್ಯಾಟಿಕ್ ಹೈಡ್ರೋ ಕಾರ್ಬನ್ ಆಗಿದ್ದು ಔಷಧಗಳು, ರಾಸಾಯನಿಕಗಳು, ಪೈಂಟ್ ಮತ್ತು ರಕ್ಷಣಾ ಕೈಗಾರಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಭಾರತದಲ್ಲಿ ವಾರ್ಷಿಕ 650 ಟಿಎಂಟಿ ಟೊಲುಯೆನ್ ಲಿಕ್ವಿಡ್‌ಗೆ ಬೇಡಿಕೆ ಇದ್ದು, ದೇಶೀಯ ಉತ್ಪಾದನೆಯು ಪ್ರಸ್ತುತ 160 ಟಿಎಂಟಿ ಆಗಿದೆ. ಈಗ ಎಂಆರ್‌ಪಿಎಲ್ 40 ಟಿಎಂಟಿ ಟೊಲುಯೆನ್ ವಾರ್ಷಿಕ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು, ಸುಮಾರು 3 ಮಿಲಿಯನ್ ವಿದೇಶಿ ವಿನಿಮಯ ಉಳಿತಾಯಕ್ಕೆ ಕೊಡುಗೆ ನೀಡಲಿದೆ .

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net