ಏಪ್ರಿಲ್ 6 ರಂದು ಎಂಆರ್‌ಪಿಎಲ್ 100 ನೇ ರೀಟೈಲ್ ಮಳಿಗೆ ಆರಂಭ

mng- mar 30 mrpl new outlet
Published on

ಮಂಗಳೂರು: ಎಂಆರ್‌ಪಿಎಲ್ (ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿ.) 100 ನೇ ಯಚ್‌ಐಕ್ಯೂ ರೀಟೈಲ್ ಮಳಿಗೆ ತುಮಕೂರು ಜಿಲ್ಲೆಯ ಯೆಲಿಯೂರ್‌ನಲ್ಲಿ ಆರಂಭಗೊಳ್ಳಲಿದೆ. ಈ ಮೂಲಕ ದಕ್ಷಿಣದ ರಾಜ್ಯಗಳಲ್ಲಿ ರೀಟೈಲ್ ಮಳಿಗೆಗಳನ್ನು ವಿಸ್ತರಿಸುವ ಬದ್ದತೆಯನ್ನು ಎಂಆರ್‌ಪಿಎಲ್ ಪ್ರದರ್ಶಿಸಿದೆ.
ಸಂಸ್ಥೆಯು ಯಚ್‌ಐಕ್ಯೂ ಬ್ರಾೃಂಡ್‌ನ ಗುಣಮಟ್ಟದ ಪೆಟ್ರೋಲಿಯಂ ಉತ್ಪನ್ನಗಳನ್ನು ಅತ್ಯುತ್ತಮ ಗ್ರಾಹಕ ಸೇವೆಯ ಜತೆಗೆ ಪೂರೈಸುವ ಮೂಲಕ ದ್ಯಮ ಹಾಗೂ ಸಾಮಾನ್ಯ ಗ್ರಾಹಕರ ವಲಯದಲ್ಲಿ ಜನಪ್ರಿಯತೆ ಪಡೆದಿದೆ. ಕರ್ನಾಟಕದಲ್ಲಿ 72 ಹಾಗೂ ಸಮೀಪದ ಕೇರಳ ರಾಜ್ಯದಲ್ಲಿ 28 ರೀಟೈಲ್ ಮಳಿಗೆಗಳನ್ನು ಸ್ಥಾಪಿಸಲಾಗಿದೆ.
ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಹೊಸ ರೀಟೈಲ್ ಮಳಿಗೆ ಆರಂಭಿಸಲು ಹೆಚ್ಚಿನ ಬೇಡಿಕೆ ಬಂದಿರುವುದಾಗಿ ಎಂಆರ್‌ಪಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ತುಮಕೂರಿನಲ್ಲಿ ಸಂಸ್ಥೆಯ 100 ನೇ ರೀಟೈಲ್ ಮಳಿಗೆ ಸ್ಥಾಪನೆಯ ಸಂದರ್ಭವನ್ನು ಸಂಭ್ರಮಿಸಲು ನಾವು ಕಾತುರರಾಗಿದ್ದೇವೆ. ಇಂಧನ ಕ್ಷೇತ್ರದ ಸಾಧನೆಯ ಈ ವಿಶೇಷ ಸಂದರ್ಭವು ಗ್ರಾಹಕರ ಸಂತೃಪ್ತಿಗಾಗಿ ಎಂಆರ್‌ಪಿಎಲ್ ತಂಡ ಪ್ರದರ್ಶಿಸಿದ ಸಮರ್ಪಣಾ ಭಾವವನ್ನು ತೋರಿಸುತ್ತದೆ ಎಂದು ಎಂಆರ್‌ಪಿಎಲ್ ವ್ಯವಸ್ಥಾಪಕ ನಿರ್ದೇಶಕ ಮುಂಡ್ಕೂರು ಶ್ಯಾಮ ಕಾಮತ್ ಪ್ರತಿಕ್ರಿಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net