

ಹಂಸಭಾವಿ: ಶ್ರೀ ಮೃತ್ಯುಂಜಯಪ್ಪಗಳ ಜಾತ್ರಾ ಮಹೋತ್ಸವ ಹಾಗೂ ಮೃತ್ಯುಂಜಯ ವಿದ್ಯಾಪೀಠದ ಸಂಸ್ಥಾಪಕರ ದಿನಾಚರಣೆ ಮತ್ತು ದಾನಿಗಳ ಸ್ಮರಣೆ ಕಾರ್ಯಕ್ರಮ ಫೆ. 15ರಿಂದ 17 ರವರೆಗೆ ಸ್ಥಳೀಯ ಶ್ರೀ ಸಿದ್ಧ್ದಂಗ ಶಿವಯೋಗಿಗಳ ಮಠದ ಹಾಗೂ ಅಜ್ಜಯ್ಯ ಸ್ವಾಮಿಗಳ ಗದ್ದುಗೆ ಆವರಣದಲ್ಲಿ ನಡೆಯಲಿವೆ.
ಫೆ. 15ರಂದು ಸಂಜೆ 6ಕ್ಕೆ ಶಿರಾಳಕೊಪ್ಪ ವಿರಕ್ತಮಠದ ಶ್ರೀ ವಿನಾಯಕ ದೇವರ ಸಾನ್ನಿಧ್ಯದಲ್ಲಿ ರತಕ್ಕೆ ಕಂಕಣ ಧಾರಣೆ ನಡೆಯಲಿದೆ. ಫೆ. 16ರಂದು ಬೆಳಗ್ಗೆ 9ಕ್ಕೆ ಹೂವಿನ ರಥೋತ್ಸವ ನಡೆಯಲಿದ್ದು, ಸಂಜೆ.6.30ಕ್ಕೆ ಸಭಾ ಕಾರ್ಯಕ್ರಮಗಳು ನಡೆಯಲಿವೆ. ದಿವ್ಯ ಸಾನ್ನಿಧ್ಯವನ್ನು ಶಿರಾಳಕೊಪ್ಪ ವಿರಕ್ತಮಠದ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು ವಹಿಸಲಿದ್ದು, ಸಂಸ್ಥೆಯ ಕಾರ್ಯಾಧ್ಯಕ್ಷ ಪಿ.ವಿ. ಕೆರೂಡಿ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಅಕ್ಕಮಹಾದೇವಿ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಫೆ. 17ರಂದು ಬೆಳಗ್ಗೆ 9 ಗಂಟೆಗೆ ಲಿಂ. ಮೃತ್ಯುಂಜಯಪ್ಪಗಳ ಪಾಲಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ನೆರವೇರಲಿದೆ. ನಂತರ ಮಧ್ಯಾಹ್ನ 1 ಗಂಟೆಗೆ ಪ್ರಸಾದ ವಿನಿಯೋಗ ನೆರವೇರುವುದು.
ಸಂಜೆ 4 ಗಂಟೆಗೆ ಮೃತ್ಯುಂಜಯಪ್ಪಗಳ ರಥೋತ್ಸವ, ಸಂಜೆ 6.30 ಕ್ಕೆ ಸಭಾ ಕಾರ್ಯಕ್ರಮಗಳು ನಡೆಯಲಿವೆ. ಧಾರವಾಡ ಮುರುಘಾಮಠದ ಡಾ. ಮಲ್ಲಿಕಾಜು ರ್ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದು, ಶಿರಾಳಕೊಪ್ಪ ವಿರಕ್ತಮಠದ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು ನೇತೃತ್ವ ವಹಿಸಲಿದ್ದಾರೆ. ಸಂಸ್ಥೆಯ ಅಧ್ಯಕ್ಷ ಡಾ.ಎಸ್.ಎಂ .ಎಲಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಲ್ಲಿಕಾರ್ಜುನ ಎಂ.ಜಿ. ಅವರಿಂದ ಸಂಗೀತ ಸೇವೆ ನಡೆಯಲಿದೆ.