ಮೃತ್ಯುಂಜಯ ಹೋಮ, ವಿಶೇಷ ನಾಗತಂಬಿಲ

18-nagatambila
Published on

ಮಂಜೇಶ್ವರ: ಅಡ್ಕ ಶ್ರೀ ನಾಗದೇವರು, ಶ್ರೀ ಮಲರಾಯ ಪರಿವಾರ ದೈವಸ್ಥಾನ, ಕುಲಾಲ ಬಂಗೇರ ಕುಟುಂಬ ನಾಗಮೂಲ ಸ್ಥಾನ ಅಡ್ಕ ಕುಂಜತ್ತೂರು ಕ್ಷೇತ್ರದಲ್ಲಿ ಮೃತ್ಯುಂಜಯ ಹೋಮ, ವಿಶೇಷ ನಾಗತಂಬಿಲ ಹಾಗೂ ಶ್ರೀ ದೈವಗಳಿಗೆ ಪರ್ವ ಸೇವೆ ಬಡಾಜೆ ಗೋಪಾಲಕೃಷ್ಣ ತಂತ್ರಿ ಪೌರೋಹಿತ್ಯದಲ್ಲಿ, ಯಜಮಾನರಾದ ಸೀತಾರಾಮ ಬಂಗೇರ ಹಾಗೂ ಅಧ್ಯಕ್ಷ ರಾಮಪ್ರಸಾದರ ನೇತೃತ್ವದಲ್ಲಿ ಇತ್ತೀಚೆಗೆ ನಡೆಯಿತು.

ಬೆಳಗ್ಗೆ ಪೂರ್ಣ ಕುಂಭ ಸ್ವಾಗತದೊಂದಿಗೆ ತಂತ್ರಿವರ್ಯರನ್ನು ಬರಮಾಡಿಕೊಳ್ಳಲಾಯಿತು. ಉದ್ಯಾವರ ಮಾಡ ಅರಸು ದೈವದ ಅಣ್ಣಪಾತ್ರಿ ರಾಜ ಬೆಳ್ಚಪ್ಪಾಡ ಹಾಗೂ ತಮ್ಮ ಪಾತ್ರಿ ತಿಮಿರಿ ಬೆಳ್ಚಪ್ಪಾಡ ಕ್ಷೇತ್ರಕ್ಕೆ ಭೇಟಿಯಿತ್ತರು.ಮಧ್ಯಾಹ್ನ ಅನ್ನ ಪ್ರಸಾದದ ನಂತರ ಸಭೆ ನಡೆಯಿತು.

ಧಾರ್ಮಿಕ ಮುಖಂಡ ಶ್ರೀಕೃಷ್ಣ ಶಿವಕೃಪಾ ಅವರನ್ನು ಸನ್ಮಾನಿಸಲಾಯಿತು. ಯಜಮಾನರಾದ ಸೀತಾರಾಮ ಬಂಗೇರ ಮಾತನಾಡಿದರು. ಆಡಳಿತ ಮಂಡಳಿ ಅಧ್ಯಕ್ಷ ರಾಮಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಜತೆ ಕಾರ್ಯದರ್ಶಿ ಮೋಹನ್‌ದಾಸ್ ಶ್ರೀಮಾತಾ ವಿಟ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಚಂದಪ್ಪ ಅಡ್ಕ, ದಾಮೋದರ ಅಶೋಕನಗರ, ಕೋಶಾಧಿಕಾರಿ ಲೋಕೇಶ್ ಕುಂಪಲ, ಸೇವಾ ಸಮಿತಿ ಅಧ್ಯಕ್ಷ ಉದಯ ಕುಮಾರ್ ಅಡ್ಕ, ಹರೀಶ್ ಮೂಲ್ಯಣ್ಣ, ಸೀತಣ್ಣ ಅಡ್ಕ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಉದಯಕುಮಾರ್ ಅಡ್ಯಾರ್ ಸ್ವಾಗತಿಸಿ, ಅಶೋಕ ಕುಮಾರ್ ಅಡ್ಕ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net