

ಮದ್ದೂರು: ತಾಲೂಕಿನ ಉಪ್ಪಿನಕೆರೆ ಗ್ರಾಮದ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ಗುರುವಾರ ಭೀಮನ ಅಮಾಮಾಸ್ಯೆ ಅಂಗವಾಗಿ ವಿಶೇಷ ಪೂಜೆ ನೆರವೇರಿಸಲಾಯಿತು.
ದೇಗುದಲ್ಲಿ ಮುಂಜಾನೆಯಿಂದಲ್ಲೇ ಮಹಾಗಣಪತಿ ಹೋಮ, ರುದ್ರಾಭಿಷೇಕ, ಮೃತ್ಯುಂಜಯ ಹೋಮ, ಸುವರ್ಣ ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯ ಆಗಮಿಕ ನಾಗೇಂದ್ರಶಾಸ್ತ್ರಿ ನೇತೃತ್ವದಲ್ಲಿ ನೆರವೇರಿತು.
ಆಗಮಿಸಿದ ಭಕ್ತಾದಿಗಳಿಗೆ ತೀರ್ಥ, ಪ್ರಸಾದ ವಿತರಣೆ ಮಾಡಲಾಯಿತು.