

ಯಲ್ಲಾಪುರ: ತಾಲೂಕಿನ ಕನ್ನಡಗಲ್ ಸಮೀಪ ಲಾಲಗುಳಿ ಗ್ರಾಮದಲ್ಲಿರುವ ಕೋಟೆ ಶ್ರೀ ಆಂಜನೇಯ ದೇವರ ಮೂರ್ತಿಯ ಸ್ಥಳದಿಂದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಮೃತ್ತಿಕೆಯನ್ನು ಸಂಗ್ರಹಿಸಿ ಒಯ್ಯಲಾಗಿದೆ.
ಯುವಾ ಬ್ರಿಗೇಡ್ ತಂಡದವರು ಹನುಮಂತನ ಸನ್ನಿಧಿಗೆ ಆಗಮಿಸಿ ಮೃತ್ತಿಕೆ ಸಂಗ್ರಹಿಸಿದರು. ವಿಜಯನಗರ ಕಾಲದ ಸೋದೆ ಅರಸರಿಂದ ನಿರ್ವಿುತವಾದ, ಹನುಮಂತ ದೇವರ ವಿಗ್ರಹ ಲಾಲಗುಳಿ ಗ್ರಾಮದಲ್ಲಿದೆ. ಪ್ರತಿ ಶನಿವಾರ ಲಾಲಗುಳಿಯವರು ಈ ವಿಗ್ರಹಕ್ಕೆ ಪೂಜೆ ಕೈಗೊಳ್ಳುತ್ತಾರೆ.
ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ವಣಕ್ಕೆ ಹನುಮನ ನಾಡಾದ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಇರುವ ಹನುಮಾನ ಮಂದಿರಗಳಿಂದ ಮೃತ್ತಿಕೆಯನ್ನು ಸಂಗ್ರಹಿಸಿ ಕಳುಹಿಸುವ ಗುರಿಯನ್ನು ಯುವಾ ಬ್ರಿಗೇಡ್ ಹೊಂದಿದೆ. ಅದರಂತೆ ಜಿಲ್ಲೆಯ ಬೇರೆ ಬೇರೆ ತಾಲೂಕುಗಳಲ್ಲಿ ಯುವಾ ಬ್ರಿಗೇಡ್ ತಂಡ ಈ ಕಾರ್ಯ ಆರಂಭಿಸಿದೆ.