

ಖಾನಾಪುರ:ತಾಲೂಕಿನ ಬೇಕವಾಡ ಗ್ರಾಮದಲ್ಲಿ ರೈತ ಗುಂಜಪ್ಪ ವಿಠ್ಠಲ ಪಾಟೀಲ ಅವರ ಜೋಡೆತ್ತು ಕೆರೆಯಲ್ಲಿ ಮುಳುಗಿ ಈಚೆಗೆ ಮೃತಪಟ್ಟ ಹಿನ್ನೆಲೆಯಲ್ಲಿ ರೈತನಿಗೆ ಸೋಮವಾರ ಮುಖಂಡ ಮೃಣಾಲ್ ಹೆಬ್ಬಾಳ್ಕರ್ 50,000 ರೂ. ಧನಸಹಾಯ ಮಾಡಿದರು. ಮಹಾದೇವ ಪಾಟೀಲ, ಶಿವರಾಮ ಪಾಟೀಲ, ಚೆನ್ನಕಪ್ಪ ಪಾಟೀಲ, ಜ್ಯೋತಿಬಾ ಕೆಸರೆಕರ, ಜ್ಯೋತಿಭಾ ಗುರವ, ಮೋಹನ ಯಳ್ಳೂರಕರ, ಗಜಾನನ ಪಾಟೀಲ, ಪರಶುರಾಮ ಮಡಿವಾಳಕರ, ರಾಜೇಂದ್ರ ಕಬ್ಬೂರ, ಮಾರುತಿ ಪಾಟೀಲ, ಲ$್ಮಣ ಕಸರಲ್ಲೇಖರ, ಮಹಾದೇವ ಘಾಡಿ, ಸುಭಾಷ ಚಲವಾದಿ ಇತರರಿದ್ದರು.