

ಮಡಿಕೇರಿ:
ಕೊಡಗು ವೈದ್ಯಕೀಯ ಮಹಾ ವಿದ್ಯಾಲಯದ ಮಡಿಕೇರಿ ಬೋಧಕ ಆಸ್ಪತ್ರೆಯಲ್ಲಿ ಎಂಆರ್‌ಐ ಸ್ಕಾ÷್ಯನಿಂಗ್ ಸೇವೆಗೆ ಎಲ್ಲಾ ಸಿದ್ಧತೆ ಪೂರ್ಣಗೊಂಡಿದೆ. ಭಾನುವಾರದಿಂದ (ಸೆ.29) ಈ ಸೇವೆ ಅಧಿಕೃತವಾಗಿ ಜಿಲ್ಲೆಯ ಜನತೆಗೆ ಲಭ್ಯವಾಗಲಿದೆ. ಇದರಿಂದಾಗಿ ಕೊಡಗಿನ ಜನರು ದೂರದ ಊರುಗಳಿಗಾಗಿ ಅಲೆದಾಡುವುದು ತಪ್ಪಲಿದೆ.
ಜಿಲ್ಲೆಯ ಬಹುಬೇಡಿಕೆಯ ಎಂಆರ್‌ಐ ಸ್ಕಾ÷್ಯನಿಂಗ್ ಯಂತ್ರ ಅಳವಡಿಕೆ ಕಾರ್ಯ ಕೊಡಗು ವೈದ್ಯಕೀಯ ವಿದ್ಯಾಲಯದ ಭೋದಕ ಆಸ್ಪತ್ರೆಯಲ್ಲಿ ಪೂರ್ಣಗೊಂಡಿದ್ದು, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಈ ಸೇವೆಗೆ ಚಾಲನೆ ನೀಡಲಿದ್ದಾರೆ.
ಮಡಿಕೇರಿಯಲ್ಲಿದ್ದ ಕೊಡಗು ಜಿಲ್ಲಾಸ್ಪತ್ರೆ ಹಿಂದೊಮ್ಮೆ ಹೆಸರಿಗಷ್ಟೇ ಜಿಲ್ಲಾಸ್ಪತ್ರೆ ಆಗಿದ್ದ ದಿನಗಳು ಇದ್ದವು. ಜಿಲ್ಲೆಗೆ ವೈದ್ಯಕೀಯ ಕಾಲೇಜು ಬಂದ ನಂತರ ಈ ಆಸ್ಪತ್ರೆ ಭೋದಕ ಆಸ್ಪತ್ರೆ ಆಗಿ ಬದಲಾಯಿತು. ಇದಾದ ಮೇಲೆ ಪರಿಸ್ಥಿತಿ ಸುಧಾರಿಸಬಹುದು ಎನ್ನುವ ನಿರೀಕ್ಷೆ ಇದ್ದರೂ ಅದು ಕೂಡ ಹುಸಿಯಾಯಿತು. ತಜ್ಞ ವೈದ್ಯರ ಸೇವೆ ಬೇಕೆಂದರೆ ದೂರದ ಸುಳ್ಯ, ಮೈಸೂರು, ಮಂಗಳೂರು ಅಥವಾ ಬೆಂಗಳೂರಿಗೆ ತೆರಳಬೇಕಾದ ಸ್ಥಿತಿ ಈಗಲೂ ಇದೆ. ಎಂಆರ್‌ಐ ಸ್ಕಾö್ಯನಿಂಗ್ ಸೇವೆಗೂ ಇದೇ ರೀತಿ ಬೇರೆ ಊರುಗಳಿಗೆ ತೆರಳಬೇಕಿತ್ತು. ಇದರಿಂದಾಗಿ ವ್ಯರ್ಥ ಹಣ ಮತ್ತು ಸಮಯ ವ್ಯಯ ಆಗುತ್ತಿತ್ತು.
ಕೊಡಗು ವೈದ್ಯಕೀಯ ಮಹಾವಿದ್ಯಾಲದ ಮಡಿಕೇರಿ ಭೋದಕ ಆಸ್ಪತ್ರೆಯಲ್ಲಿ ಸಿಟಿ ಸ್ಕಾ÷್ಯನಿಂಗ್ ವ್ಯವಸ್ಥೆ ಕಾರ್ಯಾಚರಿಸುತ್ತಿದೆ. ಆದರೆ ಮತ್ತಷ್ಟು ನಿಖರ ಫಲಿತಾಂಶಕ್ಕೆ ಅಗತ್ಯವಾಗಿದ್ದ ಎಂಆರ್‌ಐ ಸ್ಕಾ÷್ಯನಿಂಗ್ ವ್ಯವಸ್ಥೆ ಕೊಡಗಿನಲ್ಲಿ ಇರಲಿಲ್ಲ. ಎಂಆರ್‌ಐ ಸ್ಕಾö್ಯನಿಂಗ್ ಮಾಡಿಸಬೇಕಾದರೆ ಪಕ್ಕದ ಸುಳ್ಯ, ಮಂಗಳೂರು ಅಥವಾ ಮೈಸೂರು, ಬೆಂಗಳೂರಿಗೆ ತೆರಳಬೇಕಾಗಿತ್ತುö.
ಸ್ವತಃ ವೈದ್ಯರಾಗಿರುವ ಮಡಿಕೇರಿ ಶಾಸಕ ಡಾ. ಮಂತರ್‌ಗೌಡ ಅವರು ಶಾಸಕರಾಗಿ ಆಯ್ಕೆ ಆದ ನಂತರ ಬೋಧಕ ಆಸ್ಪತ್ರೆಗೆ ತೆರಳಿದ್ದ ವೇಳೆ ಇಲ್ಲೊಂದು ಎಂಆರ್‌ಐ ಸ್ಕಾö್ಯನಿಂಗ್ ಘಟಕ ಇಲ್ಲದಿರುವುದು ದೊಡ್ಡ ಕೊರತೆ ಎನ್ನುವುದರ ಅರಿವಾಗಿದೆ. ಕೂಡಲೇ ಸರ್ಕಾರದೊಂದಿಗೆ ವ್ಯವಹರಿಸಿ ಜಿಲ್ಲೆಗೆ ಎಂಆರ್‌ಐ ಸ್ಕಾ÷್ಯನಿಂಗ್ ಯಂತ್ರ ಮಂಜೂರು ಮಾಡಿಸಿದ್ದಾರೆÀ. ಈ ಬೆನ್ನಲ್ಲೇ ಸಂಬAಧಿಸಿದ ಯಂತ್ರಗಳು ಅಳವಡಿಕೆಯಾಗಿ ಕೋಯಿಮ್ಸ್ನಲ್ಲಿ ಎಂಆರ್‌ಐ ಸೇವೆಗೆ ಸಿದ್ಧವಾಗಿದೆ.ಎಂಆರ್‌ಐ (ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್) ಯಂತ್ರ ಸಂಪೂರ್ಣ ಕಾಂತೀಯ ಶಕ್ತಿಯಿಂದ ಕಾರ್ಯನಿರ್ವಹಿಸುವುದರಿಂದ ಇದಕ್ಕೆ ದಿನದ 24 ಗಂಟೆಯೂ ನಿರಂತರ ವಿದ್ಯುತ್ ಪೂರೈಕೆಯಾಗುತ್ತಿರಬೇಕಿದೆ. ಒಮ್ಮೆ ವಿದ್ಯುತ್ ಸಂಪರ್ಕ ಕಡಿತವಾದರೂ ಯಂತ್ರ ಕೆಟ್ಟುಹೋಗುವ ಸಾಧ್ಯತೆಯಿದೆ. ಹೀಗಾಗಿ ಈ ಯಂತ್ರಕ್ಕಾಗಿ ಪ್ರತ್ಯೇಕ ವಿದ್ಯುತ್ ಪೂರೈಕೆ ವ್ಯವಸ್ಥೆ ಮಾಡಲಾಗಿದೆ. ಪ್ರತ್ಯೇಕ ಟ್ರಾನ್ಸ್ಫಾರ್ಮರ್, ಜನರೇಟರ್, ಪವರ್ ಬ್ಯಾಕಪ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಹಾಲಿ ಇರುವ ಸಿಟಿ ಸ್ಕಾ÷್ಯನಿಂಗ್ ಘಟಕದ ಪಕ್ಕದಲ್ಲಿಯೇ ಹೊಸ ಎಂಆರ್‌ಐ ಘಟಕ ಆರಂಭವಾಗುತ್ತಿದೆ. ಈ ಕೊಠಡಿಯಲ್ಲಿ ಸಂಪೂರ್ಣ ಕಬ್ಬಿಣ ರಹಿತ ವ್ಯವಸ್ಥೆ ಮಾಡಲಾಗಿದೆ. ಇಲ್ಲಿನ ಎಲ್ಲಾ ಸಲಕರಣೆಗಳೂ ಅತ್ಯುತ್ತಮ ದರ್ಜೆಯ ಅಲ್ಯೂಮಿನಿಯಂನದ್ದಾಗಿದ್ದು, ಕಬ್ಬಿಣದ ವಸ್ತುಗಳು ಒಳಗೆ ಬಾರದಂತೆ ನೋಡಿಕೊಳ್ಳಲು ಮೂರು ಹಂತಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.
ಆಸ್ಪತ್ರೆಯಲ್ಲಿ ಇಬ್ಬರು ರೇಡಿಯಾಲಜಿ ತಜ್ಞರಿದ್ದು, ಅವರು ತುರ್ತಾಗಿ ಬೇಕಾಗಿರುವ ಸ್ಕಾ÷್ಯನಿಂಗ್ ರಿಪೋರ್ಟ್ಗಳನ್ನು ತಕ್ಷಣ ಸ್ಥಳದಲ್ಲಿಯೇ ನೀಡುತ್ತಾರೆ. ಉಳಿದಂತೆ ಸ್ಕಾ÷್ಯನಿಂಗ್ ಆದ ಕೆಲ ಗಂಟೆಗಳಲ್ಲಿ ಆನ್‌ಲೈನ್ ಮೂಲಕ ವೈದ್ಯರು ರಿಪೋರ್ಟ್ ನೀಡಲಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿರುವ ಸಿಟಿ ಸ್ಕಾ÷್ಯನಿಂಗ್ ಘಟಕವೂ ಇದೇ ವ್ಯವಸ್ಥೆಯಲ್ಲಿ ನಡೆಯುತ್ತಿದ್ದು, ಎಂಆರ್‌ಐ ಘಟಕ ಕೂಡಾ ಹೀಗೆಯೇ ಕಾರ್ಯನಿರ್ವಹಿಸಲಿದೆ ಎಂದು ಕೋಯಿಮ್ಸ್ ಮೂಲಗಳು ತಿಳಿಸಿವೆ.
10.70 ಕೋಟಿ ರೂ. ವೆಚ್ಚದಲ್ಲಿ ಎಂಆರ್‌ಐ ಸ್ಕಾ÷್ಯನಿಂಗ್ ಯಂತ್ರ ಅಳವಡಿಕೆ ಕೆಲಸ ಆಗಿದೆ. ಪ್ರಮುಖವಾಗಿ ಶಾಸಕ ಡಾ. ಮಂತರ್ ಗೌಡ ಅವರ ಇಚ್ಛಾಶಕ್ತಿ ಇಲ್ಲಿ ದೊಡ್ಡ ಪಾತ್ರ ನಿರ್ವಹಿಸಿದೆ. ಸಿಟಿ ಸ್ಕಾ÷್ಯನಿಂಗ್‌ನAತೆಯೇ ಇಲ್ಲಿಯೂ ಆನ್‌ಲೈನ್ ಮೂಲಕ ವರದಿ ನೀಡುವ ವ್ಯವಸ್ಥೆ ಮಾಡಲಾಗಿದೆ.
ಎಂಆರ್‌ಐ ಪೂರ್ಣ ಹೆಸರು ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್. ಇದು ಒಂದು ರೀತಿಯ ಸ್ಕಾ÷್ಯನಿಂಗ್ ಯಂತ್ರ. ಇದು ಅತ್ಯಂತ ಶಕ್ತಿಯುತ ಮತ್ತು ನಿಯಂತ್ರಿತ ವಿದ್ಯುತ್ ಕ್ಷೇತ್ರಗಳು, ರೇಡಿಯೋ ತರಂಗಗಳು ಮತ್ತು ಕಂಪ್ಯೂಟರ್ ತಂತ್ರಜ್ಞಾನವನ್ನು ಒಳಗೊಂಡಿರುತ್ತದೆ. ಅದರ ಸಹಾಯದಿಂದ, ಮಾನವ ದೇಹದ ಒಳಭಾಗದ ವಿವರವಾದ ಚಿತ್ರಗಳನ್ನು ಹೊರತೆಗೆಯಲಾಗುತ್ತದೆ. ಎಂಆರ್‌ಐ ಸ್ಕಾ÷್ಯನಿಂಗ್‌ನಲ್ಲಿ ಎಕ್ಸ್-ರೇ ವಿಕಿರಣ ಬಳಸಲಾಗುವುದಿಲ್ಲ. ಎಂಆರ್‌ಐ ತಂತ್ರಜ್ಞಾನವನ್ನು ಹೆಚ್ಚಾಗಿ ರೋಗವನ್ನು ಪತ್ತೆಹಚ್ಚಲು, ರೋಗನಿರ್ಣಯ ಮಾಡಲು ಹಾಗೂ ಚಿಕಿತ್ಸೆ ಮೇಲ್ವಿಚಾರಣೆ ಮಾಡಲು ಬಳಸಲಾಗುತ್ತದೆ. ಹೆಚ್ಚಿನ ಎಂಆರ್‌ಐ ಯಂತ್ರಗಳು ದೊಡ್ಡದಾದ, ಟ್ಯೂಬ್ ಆಕಾರದ ಆಯಸ್ಕಾಂತಗಳಾಗಿರುತ್ತವೆ.
ಕೀಲುಗಳು ಮತ್ತು ಮೂಳೆಗಳಿಗೆ ಸಂಬAಧಿಸಿದ ರೋಗಗಳನ್ನು ಪತ್ತೆಹಚ್ಚಲು, ಹೃದಯ ಸಂಬAಧಿ ಕಾಯಿಲೆಗಳನ್ನು ಗುರುತಿಸಲು, ಸ್ತನ ಕ್ಯಾನ್ಸರ್ ಅಪಾಯವನ್ನು ಕಂಡುಹಿಡಿಯಲು, ಬೆನ್ನುಹುರಿ ಮತ್ತು ಮೆದುಳಿನ ಸಮಸ್ಯೆಗಳನ್ನು ಪತ್ತೆಹಚ್ಚಲು, ಗರ್ಭಧಾರಣೆ ಮತ್ತು ಯಕೃತ್ತಿನ ಕ್ಯಾನ್ಸರ್ ಅನ್ನು ಪತ್ತೆಹಚ್ಚಲು, ಬಂಜೆತನಕ್ಕೆ ಚಿಕಿತ್ಸೆ ಪಡೆಯುವ ಮಹಿಳೆಯರಲ್ಲಿ ಗರ್ಭಾಶಯದ ಅಸಹಜತೆಗಳನ್ನು ಪತ್ತೆಹಚ್ಚಲು, ಎಂಡೊಮೆಟ್ರಿಯೊಸಿಸ್ ಮತ್ತು ಫೈಬ್ರಾಯ್ಡ್ಗಳನ್ನು ಒಳಗೊಂಡಿರುವ ಮಹಿಳೆಯರಲ್ಲಿ ಶ್ರೋಣಿಯ ನೋವಿನ ಕಾರಣಗಳನ್ನು ಮೌಲ್ಯಮಾಪನ ಮಾಡಲು, ದೇಹದ ವಿವಿಧ ಭಾಗಗಳಲ್ಲಿ ಹುಣ್ಣುಗಳು, ಗೆಡ್ಡೆಗಳು ಅಥವಾ ಇತರ ಕಾಯಿಲೆಗಳನ್ನು ಪತ್ತೆಹಚ್ಚಲು ಎಂಆರ್‌ಐ ಸ್ಕಾ÷್ಯನಿಂಗ್ ಬಳಸಲಾಗುತ್ತದೆ.
ಕೊಡಗಿಗೆ ತುಂಬಾ ಅವಶ್ಯಕವಾಗಿ ಬೇಕಾಗಿದ್ದ ಎಂಆರ್‌ಐ ಸ್ಕಾ÷್ಯನಿಂಗ್ ತಂತ್ರಜ್ಞಾನವನ್ನು ಸರ್ಕಾರ ಕೋಯಿಮ್ಸ್ಗೆ ಮಂಜೂರು ಮಾಡಿದೆ. ಇದೀಗ ಯಂತ್ರದ ಅಳವಡಿಕೆ ಕೆಲಸ ಮತ್ತು ಪ್ರಾಯೋಗಿಕ ಕಾರ್ಯಾಚರಣೆ ಮುಗಿದಿದ್ದು, ಸಾರ್ವಜನಿಕ ಸೇವೆಗೆ ಸಿದ್ಧವಾಗಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಈ ಸೇವೆಗೆ ಭಾನುವಾರ ಚಾಲನೆ ನೀಡಲಿದ್ದಾರೆ. ಇದರಿಂದ ಕೊಡಗು ಮತ್ತು ಪಕ್ಕದ ಜಿಲ್ಲೆಗಳ ರೋಗಿಗಳಿಗೆ ಅನುಕೂಲವಾಗಲಿದೆ.
ಡಾ.ಮಂತರ್ ಗೌಡ, ಮಡಿಕೇರಿ ಶಾಸಕ