

ಕಿರುವಾರ ಎಸ್.ಸುದರ್ಶನ್ ಕೋಲಾರ
ನಗರದ ಜಿಲ್ಲಾ ಎಸ್ಎನ್ಆರ್ ಆಸ್ಪತ್ರೆಯಲ್ಲಿ ಸಿ.ಟಿ. ಹಾಗೂ ಎಂಆರ್ಐ ಸ್ಕಾ$ನಿಂಗ್ ಮಾಡಿಸಲು ಸರ್ಕಾರ ರೂಪಿಸಿರುವ ಕಠಿಣ ನಿಯಮಗಳಿಂದ ರೋಗಿಗಳು ಪರದಾಡುವಂತಾಗಿದೆ.
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ರೋಗ ಪತ್ತೆ ಉಚಿತ ಸೇವೆಗಳ ಕಾರ್ಯಕ್ರಮದಡಿ ಸಿ.ಟಿ. ಮತ್ತು ಎಂಆರ್ಐ ಸ್ಕಾ$ನ್ ಸೇವೆಗಳನ್ನು ಸರ್ಕಾರಿ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ರಾಜ್ಯದ 15 ಜಿಲ್ಲಾ ಆಸ್ಪತ್ರೆಗಳಲ್ಲಿ ಸಿ.ಟಿ. ಹಾಗೂ 5 ಜಿಲ್ಲಾ ಆಸ್ಪತ್ರೆಗಳಲ್ಲಿ ಎಂಆರ್ಐ ಯಂತ್ರಗಳನ್ನು 2017&18ರಲ್ಲಿ ಅಳವಡಿಸಲಾಗಿದೆ. ಆರಂಭದಲ್ಲಿ ಬಿಪಿಎಲ್, ಎಪಿಎಲ್ ಪಡಿತರ ಚೀಟಿ ಇದ್ದರೂ ನಿರ್ವಹಣೆ ವೆಚ್ಚ ಎಂದು ಶುಲ್ಕ ವಸೂಲಿ ಮಾಡಲಾಗುತ್ತಿತ್ತು.
ಆನಂತರ ಸಾಧಕ&ಬಾಧಕ ಚರ್ಚಿಸಿ ಎಪಿಎಲ್, ಬಿಪಿಎಲ್ ಎಂಬ ಭೇದವಿಲ್ಲದೆ ಉಚಿತ ಮಾಡಲಾಯಿತು. ಚಿಕಿತ್ಸೆಗಾಗಿ ದಾಖಲಾಗುವ ಮುಂಚೆ ಆಧಾರ್ ಲಿಂಕ್ ಮಾಡಿಸಬೇಕು. ಅವಶ್ಯ ಇದ್ದಲ್ಲಿ ಮಾತ್ರ ವೈದ್ಯರು ಎಂಆರ್ಐ, ಸಿ.ಟಿ. ಸ್ಕಾ$ನ್ ಮಾಡಿಸಲು ಶಿಾರಸು ಮಾಡಿದರೆ ಪರೀೆ ಮಾಡಲಾಗುತ್ತಿತ್ತು.
ಸ್ಕಾ$ನ್ ಸೇವೆಯನ್ನು ಉಚಿತ ಪಡಿಸಿದ ಮೇಲೆ ಜಿಲ್ಲೆಯಲ್ಲದೆ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಂದಲ್ಲೂ ಕೋಲಾರಕ್ಕೆ ರೋಗಿಗಳು ಆಗಮಿಸುತ್ತಿದ್ದಾರೆ. ಇದರಿಂದಾಗಿ ಎಂಆರ್ಐ, ಸಿಟಿ ಕಾರ್ಯ ಒತ್ತಡ ಹೆಚ್ಚಾಯಿತು. ಇಲ್ಲಿಗೆ ಬಡವರೇ ಹೆಚ್ಚಾಗಿ ಸ್ಕಾ$ನ್ಗೆ ಆಗಮಿಸುತ್ತಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರೂ ಎಂಆರ್ಐ, ಸಿ.ಟಿ. ಸ್ಕಾ$ನಿಂಗ್ಗಾಗಿ ಸರ್ಕಾರಿ ಆಸ್ಪತ್ರೆಗೆ ಆಗಮಿಸುತ್ತಿದ್ದು, ಕಠಿಣ ನಿಯವದಿಂದ ಸಂಕಷ್ಟ ಶುರುವಾಗಿದೆ.
ನಿಯಮಗಳೇನು...?
ವ್ಯದ್ಯರ ರೆರಲ್ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಇಲಾಖೆ ಕ್ರಮವಹಿಸಿದೆ. ಸಿ.ಟಿ. ಮತ್ತು ಎಂಆರ್ಐ ಯೋಜನೆಯನ್ನು ಎಸ್ಎಎಸ್ಟಿ ***(ಖಅಖಖ) ಮೂಲಕ ಅನುಷ್ಠಾನಗೊಳಿಸಿ ಯೋಜನೆಯು ಪಿಎಂಜೆಎವೈ&ಎಬಿಆರ್ಕೆ ಕಾರ್ಯವಿಧಾನಗಳ ಪೂರ್ವ ದೃಢೀಕರಣ ಅನುಮತಿ ಪಡೆದು ಸ್ಕಾ$ನ್ ಮಾಡಬೇಕು. ಅನುಮತಿ ಇಲ್ಲದೆ ಸ್ಕಾ$ನ್ ಮಾಡಿದರೆ ಸದರಿ ಸ್ಕಾ$ನ್ಗೆ ಪಾವತಿ ಮಾಡಲಾಗುವುದಿಲ್ಲ. ತುರ್ತು ಪ್ರಕರಣಗಳಲ್ಲಿ ಪೂರ್ವ ಅನುಮತಿ ಪಡೆಯದೆ ಸ್ಕಾ$ನ್ ಮಾಡಿದರೂ ಕ್ಲೆಮ್ ಅನುಮೋದನೆ ಸಮಯದಲ್ಲಿ ಪೂರ್ವ ಅನುಮತಿ ತುರ್ತು ಎಂದು ಕಂಡು ಬರದಿದ್ದರೆ ಅಂತಹ ಪ್ರಕರಣಗಳ ಪಾವತಿ ಮಾಡಲಾಗುವುದಿಲ್ಲ. ಜಿಲ್ಲಾ ಆಸ್ಪತ್ರೆಯು ತುರ್ತು ಅನುಮೋದನೆಗಳನ್ನು ನ್ಯಾಯಯುತವಾಗಿ ಬಳಸಲು ಸೂಚಿಸಿದೆೆ. ತುರ್ತು ಪ್ರಕರಣಗಳನ್ನು ಅನಗತ್ಯವಾಗಿ ಉಪಯೋಗಿಸಿದಲ್ಲಿ ಕಾರಣಕರ್ತರಾದವರ ಮೇಲೆ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.
ಎಬಿಆರ್ಕೆ ಕಾರ್ಯವಿಧಾನದ ಪ್ರಕಾರವೇ ಎಸ್ಎಎಸ್ಟಿ ಲಾಗಿನ್ನಲ್ಲಿಯೇ ಅಪ್ಲೋಡ್ ಮಾಡಬೇಕಾಗಿದೆ. ಆ ಕ್ಲೆಮ್ಅನ್ನು ಆಸ್ಪತ್ರೆಯ ರೇಡಿಯೊಲಾಜಿಸ್ಟ್, ಆರ್ಎಂಒ ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕರ ಸಹಿಯೊಂದಿಗೆ ಸಲ್ಲಿಸಬೇಕು, ಕೈ ಬಿಲ್ ಸಲ್ಲಿಸಿದರೆ ಸ್ವೀಕರಿಸಲಾಗುದಿಲ್ಲ ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕರು ಸೊತ್ತೋಲೆ ಹೊರಡಿಸಿದ್ದಾರೆ.
ತಜ್ಞರ ಸಲಹೆ ಮೇರೆಗೆ ಆದೇಶ
ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಕಾ$ನ್ಗೆ ಅವಶ್ಯಕವಾಗಿ ಒಳಪಡಿಸುತ್ತಿರುವುದು, ಒಂದೇ ರೋಗಿಗೆ ಅಗತ್ಯ ಇಲ್ಲದಿದ್ದರೂ ಬಹು ಸ್ಕಾ$ನ್ ಮಾಡಿಸುವುದು, ಸ್ಕಾ$ನ್ಗೆ ಸಂಬಂಧಿಸಿದ ಪ್ರಯೋಗಾಲಯ ಪರೀೆಗಳನ್ನು ಮಾಡಿಸದೇ ರೆರಲ್ ನೀಡಿರುವುದು, ತಜ್ಞರ ಸಂಬಂಧವಿಲ್ಲದೆ ಸ್ಕಾ$ನ್ಗೆ ರೆರಲ್ ನೀಡಿರುವುದು, ಒತ್ತಡಕ್ಕೆ ಮಣಿದು ರೆರಲ್ ಮಾಡುವುದು ಕಂಡು ಬಂದಿದ್ದು ಇದನ್ನು ತಡೆಯಬೇಕಾಗಿದೆ ಎಂದು ತಜ್ಞರು ಇಲಾಖೆಗೆ ಸಲಹೆ ನೀಡಿದ್ದಾರೆ.
ಸಿಬ್ಬಂದಿಗೂ ತಲೆ ಬಿಸಿ
ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿ ಗಾಯಗೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ಆಗಮಿಸುತ್ತಾರೆ. ಆ ಸಂದರ್ಭದಲ್ಲಿ ರೋಗಿಯ ಬಳಿ ಆಧಾರ್, ಪಡಿತರ ಚೀಟಿ ಇರುವುದರಿಲ್ಲ. ಅಂತಹ ಸಂದರ್ಭದಲ್ಲೂ ದಾಖಲೆ ಬೇಕೆ ಬೇಕು ಎಂದರೆ ಎಲ್ಲಿಂದ ತರಬೇಕು?. ದಾಖಲೆ ಇಲ್ಲದೆಯೂ ಶುಲ್ಕ ಪಾವತಿ ಮಾಡಿ ಸ್ಕಾ$ನ್ ಮಾಡಿಸಿಕೊಂಡರು ದಾಖಲೆಗಳ ನೋಂದಣಿ ಆಗಲೇಬೇಕಾಗಿದೆ. ಇದು ರೋಗಿಗಳಿಗೆ ಪರದಾಟವಾದರೆ, ಸಿಬ್ಬಂದಿಗೂ ತಲೆ ಬಿಸಿಯಾಗಿ ಪರಿಣಮಿಸಿದೆ.
ಆರೋಗ್ಯ ಮಿತ್ರ ಕೇಂದ್ರಕ್ಕೆ ಬೀಗ
ಆಯುಷ್ಮಾನ್ ಭಾರತ್&ಆರೋಗ್ಯ ಕರ್ನಾಟಕ ಯೋಜನೆ (ಆರೋಗ್ಯ ಮಿತ್ರ) ನೋಂದಣಿ ಮಾಡಿಸಲು ಶನಿವಾರ ಸುಮಾರು ಮಂದಿ ಕೇಂದ್ರಕ್ಕೆ ಬಂದು ವಾಪಸ್ ತೆರಳಿದರು. ಶನಿವಾರ ಮಧ್ಯಾಹ್ನಕ್ಕೆ ಕೊಠಡಿಗೆ ಬೀಗ ಹಾಕಲಾಗಿತ್ತು. ಇನ್ನು ಭಾನುವಾರ ರಜೆ ಇರುವುದರಿಂದ ತೆಗೆಯುವುದಿಲ್ಲ. ಸಿಟಿ, ಎಂಆರ್ಐ ಸ್ಕಾ$ನ್ಗೆ ಎಬಿಆರ್ಕೆಗೆ ನೋಂದಣಿ ಕಡ್ಡಾಯ ಮಾಡಿದ್ದು, ರೋಗಿಗಳು ಸಿಬ್ಬಂದಿ, ಅಧಿಕಾರಿಗಳಿಗೆ ಶಾಪ ಹಾಕಿದ್ದು ಕಂಡು ಬಂದಿತು.
" ಇಲಾಖೆಯ ಮೇಲಧಿಕಾರಿಗಳು ಸುತ್ತೋಲೆ ಹೊರಡಿಸಿದ್ದು, ಕಾರ್ಯಗತಗೊಳಿಸಲಾಗುತ್ತಿದೆ. ರೋಗಿಗೆ ಅವಶ್ಯಕತೆಯಿದ್ದರೆ ಮಾತ್ರ ಸ್ಕಾ$ನ್ಗೆ ರೆರಲ್ ಮಾಡುತ್ತಾರೆ. ಅನವಶ್ಯಕವಾಗಿ ವೈದ್ಯರು ರೆರಲ್ ಮಾಡುತ್ತಿಲ್ಲ."
- ಹೆಸರು ಹೇಳಲಿಚ್ಛಿಸದ ಆರೋಗ್ಯ ಇಲಾಖೆಯ ಅಧಿಕಾರಿ