

ಪುತ್ತೂರು: ಗ್ರಾಮ ಪಂಚಾಯಿತಿಗಳಲ್ಲಿ ಸಂಗ್ರಹವಾದ ಕಸಗಳನ್ನು ವಿಲೇವಾರಿಗೆ ಅವಕಾಶಗಳಿರಲಿಲ್ಲ. ಸ್ವಚ್ಛ ಸಂಕೀರ್ಣಗಳು ತುಂಬಿದ ಬಳಿಕ ಎಲ್ಲೆಂದರಲ್ಲಿ ಎಸೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬರುತ್ತಿತ್ತು. ಶೇ.೪೦ರಷ್ಟು ಕಸ ವಿಲೇವಾರಿ ಮಾಡಲು ಮೆಟೀರಿಯಲ್ ರಿಕವರಿ ಫೆಸಿಲಿಟಿ (ಎಂಆರ್-) ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಎಂಆರ್‌ಎಫ್ ಘಟಕ ನಿರ್ವಹಣೆ ವೆಚ್ಚ ಕಸ ವಿಲೇವಾರಿಯಿಂದ ಬರುವ ಆದಾಯದಿಂದ ನಡೆಯಬೇಕು ಎಂದು ಜಿಪಂ ಸಿಇಒ ಡಾ.ಆನಂದ ಕೆ. ಹೇಳಿದರು.
ಬುಧವಾರ ಪುರಭವನದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಪುತ್ತೂರು, ಕಡಬ, ಸುಳ್ಯ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ವಿಎಸ್‌ಪಿ ತಯಾರಿ ತರಬೇತಿ ಕಾರ್ಯಾಗಾರ ಹಾಗೂ ಕೆದಂಬಾಡಿ ಎಂಆರ್‌ಎಫ್ ಘಟಕ ಕಾರ್ಯಾಚರಣೆ ಮತ್ತು ನಿರ್ವಹಣೆ ಬಗ್ಗೆ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ಸುಳ್ಯ ಕಡಬ ಪುತ್ತೂರು ಭಾಗದ ೬೮ಗ್ರಾಮ ಪಂಚಾಯಿತಿಯ ಅಽಕಾರಿಗಳು ಹಾಗೂ ಜನಪ್ರತಿನಿಽಗಳು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಪ್ಲಾಸ್ಟಿಕ್ ಬಳಕೆ ನಿಷೇಧ ಜಾರಿ ಕುರಿತು ಪರಿಸರ ಮಾಲಿನ್ಯ ಮಂಡಳಿಯ ಉಪ ಪರಿಸರ ಅಽಕಾರಿ ಡಾ.ಮಹೇಶ್ವರಿ ಸಿಂಗ್ ಮಾಹಿತಿ ನೀಡಿದರು.
ಸುಳ್ಯ ತಾಪಂ ಇಒ ರಾಜಣ್ಣ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಸುರೇಶ್ ದೊಡ್ಡೀಮನಿ, ಚೈತ್ರಾ ಎಸ್.ಆರ್. ಉಪಸ್ಥಿತರಿದ್ದರು. ಪುತ್ತೂರು ತಾಪಂ ಇಒ ನವೀನ್ ಭಂಡಾರಿ ಸ್ವಾಗತಿಸಿದರು. ಪುತ್ತೂರು ತಾಪಂ ಸಹಾಯಕ ಲೆಕ್ಕಾಽಕಾರಿ ರವಿಚಂದ್ರ ಯು. ವಂದಿಸಿದರು. ಸಿಬ್ಬಂದಿ ಭರತ್‌ರಾಜ್ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಸ್ವಚ್ಛ ಭಾರತ್ ಮಿಷನ್‌ನ ನೆರವು ಘಟಕ ಸಮಾಲೋಚಕರಾದ ನವೀನ್, ಪವನ್ ಸಹಕರಿಸಿದರು.
ಗ್ರಾಮ ಪಂಚಾಯಿತಿಯ ಚುನಾಯಿತ ಪ್ರತಿನಿಽಗಳು, ಅಽಕಾರಿಗಳು ಎಂಆರ್‌ಎಫ್ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಜಿಲ್ಲೆಯ ೨೨೩ ಗ್ರಾಮ ಪಂಚಾಯಿತಿಗಳಿಗೆ ನಾಲ್ಕು ಘಟಕಗಳು ಸದ್ಯ ನಿಗದಿಪಡಿಸಲಾಗಿದೆ. ಮನೆಯಿಂದ ಕಸ ಸಂಗ್ರಹ ಮಾಡಲಾಗದ ಸಮಯ, ರಸ್ತೆ ಬದಿಯ ಕಸವನ್ನು ವಿಲೇವಾರಿ ಕಷ್ಟವಾಗಿತ್ತು. ಗ್ರಾಮ ಪಂಚಾಯಿತಿಯಿಂದ ಕಸ ಬಂದಿರುವ ಮಾಹಿತಿ ಲಭಿಸುವ ವ್ಯವಸ್ಥೆ ಮಾಡಲಾಗಿದ್ದು, ಜನಸಂಖ್ಯೆಯ ಆಧಾರದಲ್ಲಿ ಕಸ ಸಂಗ್ರಹವನ್ನು ತಾಳೆ ಹಾಕಿ ಪಂಚಾಯಿತಿ ಕಾರ್ಯ ನಿರ್ವಹಿಸುತ್ತಿರುವುದನ್ನು ಪತ್ತೆಹಚ್ಚಬಹುದು.
| ಡಾ.ಆನಂದ ಕೆ. ಜಿಪಂ ಸಿಇಒ